ಅರಸೀಕೆರೆಯಲ್ಲಿ ವಿಜೃಂಭಣೆಯ ರಾಮೋತ್ಸವಕ್ಕೆ ಭರದ ಸಿದ್ಧತೆ: ರವಿಕುಮಾರ್

KannadaprabhaNewsNetwork | Updated : Apr 04 2024, 10:42 AM IST

ಸಾರಾಂಶ

ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘವು ಪ್ರತಿ ವರ್ಷವಂತೆ ಈ ಬಾರಿಯೂ ಸಹ 11 ದಿನಗಳ ಕಾಲ ಶ್ರೀ ರಾಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್ ಹೇಳಿದರು. ‘ಶ್ರೀ ಮುಖ’ವನ್ನು ಬಿಡುಗಡೆ ಮಾಡಿ ಮಾತನಾಡಿದರು.

 ಅರಸೀಕೆರೆ :  ತಾಲೂಕು ಬ್ರಾಹ್ಮಣ ಸಂಘವು ಪ್ರತಿ ವರ್ಷವಂತೆ ಈ ಬಾರಿಯೂ ಸಹ 11 ದಿನಗಳ ಕಾಲ ಶ್ರೀ ರಾಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್ ಹೇಳಿದರು

ಶ್ರೀರಾಮ ಮಂದಿರದಲ್ಲಿ ಶ್ರೀರಾಮೋತ್ಸವದ ‘ಶ್ರೀ ಮುಖ’ವನ್ನು ಬಿಡುಗಡೆ ಮಾಡಿ ಮಾತನಾಡಿ, ಏ.9 ರಿಂದ 19ರ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ನಿತ್ಯ ಮಠ ಮುದ್ರೆ ರವಿ ಪುರಾಣಿಕ್ ಅವರಿಂದ ರಾಮನಿಗೆ ಅಭಿಷೇಕ ಮತ್ತು ಪೂಜಾ ಕೈಂಕರ್ಯಗಳು, ತಳಲೂರು ಚಂದ್ರಶೇಖರ್ ಅವರಿಂದ ಸೂರ್ಯ ನಮಸ್ಕಾರ, ಪುರಾಣಿಕ್ ಕುಮಾರಸ್ವಾಮಿ ಅವರಿಂದ ನವಗ್ರಹ ಜಪ, ಕೆ.ಮಂಜುನಾಥ್ ಅವರಿಂದ ರಾಮಾಯಣ ಪಾರಾಯಣ ನಡೆಯಲಿದೆ. 12 ಗಂಟೆಗೆ ಅಷ್ಟಾವಧಾನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಇರುತ್ತದೆ ಎಂದು ತಿಳಿಸಿದರು.

ಯುಗಾದಿ ಹಬ್ಬದ ದಿನ 9ರಂದು ಸಂಜೆ ರವಿ ಪುರಾಣಿಕ್ ರಿಂದ ಪಂಚಾಂಗ ಶ್ರವಣ ನಂತರ 7.30ಕ್ಕೆ ಚನ್ನರಾಯಪಟ್ಟಣ ವಿದ್ಯಾ ಮತ್ತು ಕುಮಾರಿ ಅಮೃತ ಅವರಿಂದ ಭಕ್ತಿಗೀತೆಗಳು ಹಾಗೂ ದೇವರನಾಮಗಳು, ಏ.10 ರಿಂದ 12ರ ವರೆಗೆ .ಮತ್ತೂರಿನ ಅಚ್ಯುತ ಅವಧಾನಿ ಮತ್ತು ಪ್ರಸಾದ್ ಭಾರದ್ವಾಜ್ ಅವರಿಂದ ಗಮಕ ವಾಚನ, 13 ರಂದು ಸಂಜೆ. ಕೆ ನಂಜುಂಡಸ್ವಾಮಿ ತಂಡದವರಿಂದ ಕರ್ನಾಟಕ ಸಂಗೀತ, 14 ರಂದು ಸಂಜೆ 7 ಗಂಟೆಗೆ ಹಾಸನದ ಹೇಮಾ ಸೌಮ್ಯ ಮತ್ತು ಪದ್ಮಶ್ರೀ ಸಂಗಡಿಗರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಏ.15 ರಂದು ಸಂಜೆ ವೈಣಿಕ ವಿದ್ವಾನ್ ಆರ್.ಕೆ.ಪದ್ಮನಾಭ ಮತ್ತು ತಂಡದವರಿಂದ ಅಮೋಘ ವೀಣಾ ವಾದನ, 16 ರಂದು ಸಂಜೆ. ಬೆಂಗಳೂರಿನ ಸೌಮ್ಯ ಶರತ್ ಶರ್ಮ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಇದೆ. 17ರಂದು ಶ್ರೀ ರಾಮ ನವಮಿ ಅಂಗವಾಗಿ ಮಧ್ಯಾಹ್ನ 3 ಗಂಟೆಗೆ ಸೀತಾ ಮಹಿಳಾ ಸಂಘದ ವತಿಯಿಂದ ಶ್ರೀ ಸೀತಾರಾಮರ ಕಲ್ಯಾಣ ನಂತರ ಸಂಜೆ 6.30ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಸೀತಾರಾಮರ ಉತ್ಸವ, ಏ18 ರಂದು. ಬೆ 10.30 ಕ್ಕೆ ಶ್ರೀರಾಮರ ಪಟ್ಟಾಭಿಷೇಕ ಅಂಗವಾಗಿ ರುದ್ರಾಭಿಷೇಕ, ಶ್ರೀರಾಮ ತಾರಕ ಹೋಮ, ವಿಶೇಷ ಪೂಜೆ, ಪೂರ್ಣಾಹುತಿ, ಮಹಾ ಮಂಗಳಾರತಿ ನಂತರ ಮಹಾಪ್ರಸಾದ. ಸಂಜೆ 7 ಗಂಟೆಗೆ ಮೈಸೂರಿನ ಹರೀಶ್ ಪಾಂಡವ್ ಮತ್ತು ಸಂಗಡಿಗರಿಂದ ಸ್ಯಾಕ್ಸೋಫೋನ್ ವಾದನ ಕಚೇರಿ, ಏ19 ರಂದು ಸಂಜೆ 7.30 ಕ್ಕೆ ಪ್ರತಿಭಾ ಪುರಸ್ಕಾರ ನಂತರ ಶ್ರೀ ಸೀತಾ ರಾಮರ ಶಯನೋತ್ಸವ ಕಾರ್ಯಕ್ರಮದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯದರ್ಶಿ ಸುಬ್ರಹ್ಮಣ್ಯ, ತಾಲೂಕು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಹಿರಿಯಣ್ಣಯ್ಯ, ಖಜಾಂಚಿ ಕರ್ನಾಟಕ ಬ್ಯಾಂಕ್ ಮೋಹನ್ ಕುಮಾರ್, ನಿರ್ದೇಶಕರಾದ ಕಳಸಾಪುರ, ರಘು, ವೆಂಕಟೇಶ್, ವೇ.ಬ್ರ.ಶ್ರೀ ರವಿಪುರಾಣಿಕ್, ಗಾಯಿತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಗೋಪಾಲ್, ಯುವಕ ಸಂಘದ ಉಪಾಧ್ಯಕ್ಷ ಸತ್ಯನಾರಾಯಣ್, ಪಾಕತಜ್ಞರ ಸಂಘದ ಅಣ್ಣಯ್ಯ, ಮುರುಂಡಿ ಕೇಶವ ಪ್ರಸಾದ್ ಉಪಸ್ಥಿತರಿದ್ದರು.

ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘವು 11 ದಿನಗಳ ಕಾಲ ಶ್ರೀ ರಾಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್ ಮಾಹಿತಿ ನೀಡಿದರು.

Share this article