ಸಣ್ಣ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಿದ್ದ ಅರಸು

KannadaprabhaNewsNetwork |  
Published : Sep 03, 2026, 02:00 AM IST
೧ಶಿರಾ೩: ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಸಹಕಾರ ರತ್ನ ಎಸ್ ಎನ್ ಕೃಷ್ಣಯ್ಯ ಫೌಂಡೇಶನ್ ವತಿಯಿಂದ ನಡೆದ ದೇವರಾಜ ಅರಸು ಅವರ ಕುರಿತಾದ ನಮ್ಮ ಅರಸು ಪುಸ್ತಕವನ್ನು ಹಿಂದುಳಿದ ವರ್ಗಗಳ ವಸತಿ ನಿಲಯ ಮತ್ತು ಗ್ರಂಥಾಲಯಗಳಿಗೆ ಕೊಡುಗೆ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದರು | Kannada Prabha

ಸಾರಾಂಶ

ಸಣ್ಣ ಸಣ್ಣ ಸಮುದಾಯದ ಯುವಕರಿಗೆ ರಾಜಕೀಯ ಅಧಿಕಾರ ನೀಡಿ ಆ ಸಮುದಾಯದ ಯುವಕರನ್ನು ರಾಜಕೀಯಕ್ಕೆ ಕರೆ ತಂದು ಶಾಸಕರನ್ನಾಗಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರದ್ದು ಎಂದು ನಾಡೋಜ ಪ್ರೊ . ಬರಗೂರು ರಾಮಚಂದ್ರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಸಣ್ಣ ಸಣ್ಣ ಸಮುದಾಯದ ಯುವಕರಿಗೆ ರಾಜಕೀಯ ಅಧಿಕಾರ ನೀಡಿ ಆ ಸಮುದಾಯದ ಯುವಕರನ್ನು ರಾಜಕೀಯಕ್ಕೆ ಕರೆ ತಂದು ಶಾಸಕರನ್ನಾಗಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರದ್ದು ಎಂದು ನಾಡೋಜ ಪ್ರೊ . ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸಹಕಾರ ರತ್ನ ಎಸ್ ಎನ್ ಕೃಷ್ಣಯ್ಯ ಫೌಂಡೇಶನ್ ವತಿಯಿಂದ ನಡೆದ ದೇವರಾಜ ಅರಸು ಅವರ ಕುರಿತಾದ ನಮ್ಮ ಅರಸು ಪುಸ್ತಕವನ್ನು ಹಿಂದುಳಿದ ವರ್ಗಗಳ ವಸತಿ ನಿಲಯ ಮತ್ತು ಗ್ರಂಥಾಲಯಗಳಿಗೆ ಕೊಡುಗೆ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದರು.

ರಾಜ್ಯದಲ್ಲಿ ಸಾಮಾಜಿಕ ಪಲ್ಲಟಗಳನ್ನೇ ಉಂಟು ಮಾಡಿದ ಭೂ ಸುಧಾರಣಾ ಕಾಯಿದೆ ಅರಸು ಅವರ ಕನಸಿನ ಕೂಸು. ರಾಜಕೀಯ ಆಯಾಮಗಳೊಟ್ಟಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮಗಳೂ ಸೇರಿಕೊಂಡಿದ್ದ ಅರಸು ಅವರು ತಮ್ಮ ಮುಖ್ಯಮಂತ್ರಿ ಸ್ಥಾನದ ಅವಧಿಯಲ್ಲಿ ಅವರ ನೇತೃತ್ವದಲ್ಲಿ ರಚನೆಯಾದ ಅಕಾಡೆಮಿಗಳಿಗೆ ಸ್ವಾಯತ್ತತೆಗಳನ್ನು ನೀಡಿದ್ದರು .ಅನುಮತಿ ಇಲ್ಲದೆ ಯಾರಾದರೂ ಅರಣ್ಯ ಪ್ರವೇಶ ಮಾಡಿ ಮರ ಕಡಿಯುವುದು ಅಕ್ಷಮ್ಯ ಅಪರಾಧ ಅನ್ನುವುದರ ಕಠಿಣ ಕ್ರಮಗಳಿದ್ದ ಮೊದಲ ಕಾಯಿದೆ ತಂದದ್ದು ಅರಸು ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಭುವನಹಳ್ಳಿ ನಾಗರಾಜ್ , ಲೇಖಕಿ ಶೈಲಾ ನಾಗರಾಜ್ , ಕೊಟ್ಟ ಶಂಕರ್ , ವೈ ನರೇಶ್ ಬಾಬು , ಫೌಂಡೇಶನ್ ನ ಬಿ ಎಸ್ ವಿಜಯಕುಮಾರ್ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ವಡ್ನಪ್ಪ , ಸಿಗಲಹಳ್ಳಿ ಮೂರ್ತಿ , ಗಂಗಾಧರ್ , ಧರಣಿ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ಜನ್ಮದಿನ: ಒಂದು ತಿಂಗಳು ಸೇವಾ ಸಂಕಲ್ಪ ಅಭಿಯಾನ
ಗದಗ-ಧಾರವಾಡ ಗಡೀಲಿ ಅಕ್ರಮ ಡೀಸೆಲ್‌ ದಂಧೆ!