ಕೀಟ, ರೋಗ, ಕಳೆ ನಿಯಂತ್ರಣಕ್ಕೆ ಆರ್ಕಿವೋ ಅಸ್ತ್ರ!

KannadaprabhaNewsNetwork |  
Published : Sep 27, 2026, 02:00 AM IST
ಧಾರವಾಡ ಕೃಷಿ ಮೇಳದಲ್ಲಿ ಹಾಕಲಾಗಿರುವ ಆರ್ಕಿವೋ ಕ್ರಾಪ್ ಸೊಲ್ಯೂಶನ್ಸ್‌ನ ಮಳಿಗೆ. | Kannada Prabha

ಸಾರಾಂಶ

ಕೀಟಬಾಧೆ, ಬೆಳೆರೋಗ ಹಾಗೂ ಕಳೆ ನಿಯಂತ್ರಣ ರೈತರ ಇಳುವರಿಗೆ ದೊಡ್ಡ ಸವಾಲಾಗಿದೆ. ಇಂತಹ ವೇಳೆ ವಿವಿಧ ಬೆಳೆಗಳ ಅಗತ್ಯಕ್ಕೆ ತಕ್ಕಂತೆ ಕೃಷಿ ರಾಸಾಯನಿಕ ಪರಿಹಾರಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವತ್ತ "ಆರ್ಕಿವೋ ಕ್ರಾಪ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ " ಹೆಜ್ಜೆ ಇಟ್ಟಿದೆ.

ಧಾರವಾಡ:

ಕೀಟಬಾಧೆ, ಬೆಳೆರೋಗ ಹಾಗೂ ಕಳೆ ನಿಯಂತ್ರಣ ರೈತರ ಇಳುವರಿಗೆ ದೊಡ್ಡ ಸವಾಲಾಗಿದೆ. ಇಂತಹ ವೇಳೆ ವಿವಿಧ ಬೆಳೆಗಳ ಅಗತ್ಯಕ್ಕೆ ತಕ್ಕಂತೆ ಕೃಷಿ ರಾಸಾಯನಿಕ ಪರಿಹಾರಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವತ್ತ "ಆರ್ಕಿವೋ ಕ್ರಾಪ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ " ಹೆಜ್ಜೆ ಇಟ್ಟಿದೆ.

ಕಡಲೆ, ತೊಗರಿ, ಕಬ್ಬು, ದ್ರಾಕ್ಷಿ, ಭತ್ತ, ಮೆಣಸಿನಕಾಯಿ, ಟೊಮ್ಯಾಟೊ, ದಾಳಿಂಬೆ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳಿಗೆ ಕೀಟನಾಶಕ, ಶಿಲೀಂಧ್ರನಾಶಕ ಹಾಗೂ ಕಳೆನಾಶಕಗಳನ್ನೊಳಗೊಂಡ 90ಕ್ಕೂ ಅಧಿಕ ಉತ್ಪನ್ನಗಳನ್ನು ಸಂಸ್ಥೆ ಪರಿಚಯಿಸಿದೆ.

35 ವರ್ಷಗಳ ಅನುಭವ:

ಆರ್ಕಿವೋ ಕ್ರಾಪ್ ಸೊಲ್ಯೂಶನ್ಸ್‌ನ ಮಾತೃಸಂಸ್ಥೆ ಟ್ಯಾಗ್ರೋಸ್ ಕೆಮಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೃಷಿ ರಾಸಾಯನಿಕ ಕ್ಷೇತ್ರದಲ್ಲಿ ಸುಮಾರು 35 ವರ್ಷಗಳ ಅನುಭವ ಹೊಂದಿದ ಸಂಸ್ಥೆ, 80ಕ್ಕೂ ಅಧಿಕ ದೇಶಗಳಲ್ಲಿ ತನ್ನ ವಹಿವಾಟು ವಿಸ್ತರಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಕೃಷಿ ಪರಿಹಾರಗಳನ್ನು ಭಾರತೀಯ ರೈತರ ಕೈಗೆ ತಲುಪಿಸುವ ಉದ್ದೇಶದಿಂದ ಆರ್ಕಿವೋ ಕಳೆದ ವರ್ಷದಿಂದ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಚಟುವಟಿಕೆ ವಿಸ್ತರಿಸಿದೆ.

ರಾಜ್ಯದಲ್ಲಿ 500ಕ್ಕೂ ಅಧಿಕ ವಿತರಕರು:

ರಾಜ್ಯದಲ್ಲಿ ಈಗಾಗಲೇ 500ಕ್ಕೂ ಹೆಚ್ಚು ವಿತರಕರ ಜಾಲ ನಿರ್ಮಿಸಿರುವ ಸಂಸ್ಥೆ, ಪ್ರಮುಖ ಕೃಷಿ ಪ್ರದೇಶಗಳಿಗೆ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆ ರೂಪಿಸಿದೆ. ದೇಶದಲ್ಲಿ ಕಾರ್ಯಾರಂಭಿಸಿದ ಮೊದಲ ವರ್ಷದಲ್ಲೇ ₹100 ಕೋಟಿಗೂ ಅಧಿಕ ವಹಿವಾಟು ನಡೆಸಿರುವುದಾಗಿ ಸಂಸ್ಥೆ ತಿಳಿಸಿದೆ.

4 ಉತ್ಪಾದನಾ ಕೇಂದ್ರ:

ದಹೇಜ್, ಪನೋಲಿ, ಕಡಲೂರು ಹಾಗೂ ಅಂಕಲೇಶ್ವರದಲ್ಲಿ ಸಂಸ್ಥೆಯ ನಾಲ್ಕು ಪ್ರಮುಖ ಉತ್ಪಾದನಾ ಕೇಂದ್ರಗಳಿವೆ. ಮುಂಬೈನಲ್ಲಿ ಆರ್ಕಿವೋ ಮತ್ತು ಚೆನ್ನೈನಲ್ಲಿ ಟ್ಯಾಗ್ರೋಸ್‌ನ ಪ್ರಧಾನ ಕಚೇರಿಗಳಿವೆ. ಟ್ಯಾಗ್ರೋಸ್ ದೇಶದ ಪ್ರಮುಖ ಕೃಷಿ ರಾಸಾಯನಿಕ ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದು, ಕೈಗೆಟುಕುವ ದರದಲ್ಲಿ ಗುಣಮಟ್ಟದ ಕೃಷಿ ಪರಿಕರಗಳನ್ನು ರೈತರಿಗೆ ಒದಗಿಸುವ ಗುರಿ ಹೊಂದಿದೆ.

80ಕ್ಕೂ ಅಧಿಕ ದೇಶಗಳಲ್ಲಿ ಹೆಜ್ಜೆಗುರುತು:

ಚೀನಾ, ಜಪಾನ್, ಅಮೆರಿಕ, ಯುರೋಪ್, ಬ್ರೆಜಿಲ್, ಮೆಕ್ಸಿಕೊ, ಕೊಲಂಬಿಯಾ, ಅರ್ಜೆಂಟೀನಾ, ದಕ್ಷಿಣ ಆಫ್ರಿಕಾ, ವಿಯೆಟ್ನಾಂ ಹಾಗೂ ಬಾಂಗ್ಲಾದೇಶ ಸೇರಿದಂತೆ 80ಕ್ಕೂ ಅಧಿಕ ದೇಶಗಳಲ್ಲಿ ಟ್ಯಾಗ್ರೋಸ್‌ನ ವಹಿವಾಟು ನಡೆಯುತ್ತಿದೆ. ಎಫ್‌ಎಂಸಿ, ಬಿಎಎಸ್‌ಎಫ್, ಸಿಂಜೆಂಟಾ, ಯುಪಿಎಲ್ ಸೇರಿದಂತೆ ಹಲವು ಜಾಗತಿಕ ಕೃಷಿ ರಾಸಾಯನಿಕ ಕಂಪನಿಗಳಿಗೆ ಮೂಲಪದಾರ್ಥಗಳ ಪೂರೈಕೆಯನ್ನೂ ಸಂಸ್ಥೆ ಮಾಡುತ್ತಿದೆ.

ಕೃಷಿ ಮೇಳದಲ್ಲಿ ಭಾಗಿ:

ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ 270, 271 ಸಂಖ್ಯೆಯ ಮಳಿಗೆಯಲ್ಲಿ ಆರ್ಕಿಮೋದ ವಿವಿಧ ಬೆಳೆಗಳಿಗೆ ಕೀಟನಾಶಕ, ಶಿಲೀಂಧ್ರನಾಶಕ ಹಾಗೂ ಕಳೆನಾಶಕಗಳನ್ನು ಪ್ರದರ್ಶನಕ್ಕಿರಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ 9901861861 ಸಂಖ್ಯೆಗೆ ಸಂಪರ್ಕಿಸಿ.

ಭಾರತೀಯ ರೈತರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಕೃಷಿ ಪರಿಹಾರಗಳನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶ. ಉತ್ಪನ್ನಗಳ ವ್ಯಾಪ್ತಿ ಹಾಗೂ ವಿತರಣಾ ಜಾಲವನ್ನು ಮತ್ತಷ್ಟು ವಿಸ್ತರಿಸಲಾಗುವುದು.

ಡಿ. ಜಯಚಂದ್ರ, ಜೋನಲ್ ಬಿಸಿನೆಸ್ ಮ್ಯಾನೇಜರ್, ಆರ್ಕಿವೋ ಕ್ರಾಪ್ ಸೊಲ್ಯೂಶನ್ಸ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲೆ, ಸಂಸ್ಕೃತಿ, ಪರಂಪರೆಗೆ ಹವ್ಯಕರ ಕೊಡುಗೆ ಅಪಾರ
ವಿಘ್ನನಿವಾರಕನಿಗೂ ಫ್ಲೈಓವರ್‌ ವಿಘ್ನ!