ಬೇಟೆಗಾರೇನು ವೀರಪ್ಪನ್ ಮಟ್ಟದವರಾ?

KannadaprabhaNewsNetwork |  
Published : Aug 17, 2026, 03:15 AM IST
(ಪೋಟೋ-16ಬಿಕೆಟಿ10, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಗುಳೇದಗುಡ್ಡ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಚಾಮರಾಜನಗರದಲ್ಲಿ ನಡೆದ ಬೇಟೆಗಾರರ ಶೂಟೌಟ್ ಮಾಡಿರತಕ್ಕಂತದ್ದು ಖಂಡನೀಯ, ಅವರೇನು ವೀರಪ್ಪನ್ ಮಟ್ಟದವರಾ ಅವರನ್ನು ಶೂಟ್ ಮಾಡಲಿಕ್ಕೆ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಚಾಮರಾಜನಗರದಲ್ಲಿ ನಡೆದ ಬೇಟೆಗಾರರ ಶೂಟೌಟ್ ಮಾಡಿರತಕ್ಕಂತದ್ದು ಖಂಡನೀಯ, ಅವರೇನು ವೀರಪ್ಪನ್ ಮಟ್ಟದವರಾ ಅವರನ್ನು ಶೂಟ್ ಮಾಡಲಿಕ್ಕೆ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಗುಳೇದಗುಡ್ಡ ಪಟ್ಟಣದಲ್ಲಿ ಶೂಟೌಟ್ ಪ್ರಕರಣ ಖಂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರನ್ನು ನೀವು ಹಿಡಿಯಬೇಕು ಅಂದ್ರೆ ಅವರಿಗೆ ಕಾಲಿಗಾದರೂ ಶೂಟ್ ಮಾಡಬೇಕು. ನೇರವಾಗಿ ಫೈರ್ ಮಾಡಿ, ಮೂರು ಜನ ಸ್ಪಾಟ್‌ಲ್ಲೇ ಔಟ್ ಆಗಿರತಕ್ಕಂತದ್ದು, ಇನ್ನೊಬ್ಬರನ್ನು ಆಸ್ಪತ್ರೆಯಲ್ಲಿ ಸೇರಿಸಿಕೊಂಡು ಹೋಗ್ತಕ್ಕಂತದ್ದು ನಿಜಕ್ಕೂ ಆತಂಕದ ವಿಷಯ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರ ಒಂದು ಕಡೆ ಬೆಂಗಳೂರು ನಗರದಲ್ಲಿ ಫ್ರೀಡ್ಂ ಹಬ್ಬ ಅಂತ ಮಾಡಿದ್ದಾರೆ. ಫ್ರೀಡ್ಂ ಹಬ್ಬ ಮಾಡಿ ನಾಡಿನ ಜನತೆ ಒಂದು ಸಂದೇಶ ಕೊಡ್ತಕ್ಕಂತದ್ದಕ್ಕೆ ದೊಡ್ಡ ಹಬ್ಬ ಆಚರಣೆ ಮಾಡಿದರು. ಈ ಸಂದೇಶ ಕೊಟ್ಟಿದ್ದಾರೆ ಒಂದೇ ರಾತ್ರಿ ಆ ಭಾಗದಲ್ಲಿ ಕೆಲವು ರೈತರು. ರೈತರು ಇಲ್ಲ, ಕೂಲಿ ಕಾರ್ಮಿಕರೇ ಇರಬಹುದು. ಒಂದು ಕಾಡಿನಲ್ಲಿ ಬೇಟೆಯಾಡಲಿಕ್ಕೆ ಬಂದರು ಅನ್ನತಕ್ಕಂತದ್ದು ಸರ್ಕಾರದ ಒಂದು ಸಮಜಾಯಿಸಿ, ಒಂದೂವರೆ ಪುಟದ ಒಂದು ಪ್ರೆಸ್ ರಿಲೀಸ್ ಮಾಡಿರೋದು ನೋಡಿದೀನಿ ಎಂದರು.

ಅಲ್ಲಿಯ ಜಿಲ್ಲಾ ಸಚಿವರು ಪುಟ್ಟರಂಗಶೆಟ್ಟರು ಹೇಳ್ತಕ್ಕಂತದ್ದು, ಗೊಂದಲ ಇದೆ. ಅಧಿಕಾರಿಗಳು ತಪ್ಪು ಮಾಡಿದ್ದಾರೆ ಅಂತ ಹೇಳಿ, ಪುಟ್ಟರಂಗ ಶೆಟ್ಟರು ಒಂದು ಕಡೆ ಹೇಳಿಕೆ ಕೊಡ್ತಾರೆ. ಇನ್ನೊಂದು ಕಡೆ ಅವರು ಜಿಂಕೆ ಬೇಟೆಯಾಡಲಿಕ್ಕೆ ಹೋದವರು 20 ಕೆಜಿ ಮಾಂಸ ಇತ್ತು ಅಂತಾರೆ. ಅವರು ಓಡಾಡಬೇಕಾದರೆ ಯಾರೋ ಮೇಲ್ಗಡೆ ನಿಂತುಕೊಂಡು ಇತರ ಯಾರೋ ಓಡಾಡ್ತಾ ಇದ್ದಾರೆ. ಚಲನವಲನ ನಡೀತಿದೆ ಅಂತ ಹೇಳಿ ಯಾರೋ ನಮ್ಮ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮೆಸೇಜ್ ಕೊಟ್ಟರು. ಅದರ ಮೇಲೆ ನಾವು ಹೋಗಿ ಅವರಿಗೆ ಸರೆಂಡರ್ ಆಗಿ ಅಂತ ಹೇಳಿದ್ದು. ಬೆಳಗ್ಗೆ 5.30 ನಲ್ಲಿ. ಆದರೆ, ಅವರು ಸರೆಂಡರ್ ಆಗಲಿಲ್ಲ. ಅದಕ್ಕೆ ನಾವು ಗುಂಡು ಹಾರಿಸಬೇಕಾಗಿ ಬಂತು, ಅವರು ಗುಂಡು ಹಾರಿಸಿದರು ಅನ್ನತಕ್ಕಂತದ್ದು. ಅದರ ಜತೆಗೆ ಅವರ ಹತ್ತಿರ ಎಷ್ಟೋ ಗುಂಡು ಇತ್ತು?, 4 ರಿವಾಲ್ವರ್‌ಗಳು ಇತ್ತು, ಅಂದರೆ ರಿವಾಲ್ವರ್, ಅದೇನು ಬೇಟೆಯಾಡಕ್ಕೆ ತಗೊಂಡು ಬರ್ತಾರಲ್ಲ, ಅಂತ ಹೇಳಿ ಹಲವಾರು ಸಮಜಾಯಿಸಿ ಕೊಟ್ಟಿದ್ದಾರೆ. ಅವರ ಹತ್ತಿರ ಏನಿತ್ತು ಎಂದು ಪ್ರಶ್ನೆ ಮಾಡಿದರು.

₹50 ಲಕ್ಷ ಪರಿಹಾರ ಕೊಡಬೇಕು:

ಶೂಟೌಟ್ ಪ್ರಕರಣದಲ್ಲಿ ಪರಿಹಾರ ನೀಡುವ ಕುರಿತು ಮಾತನಾಡಿದ ಅವರು, ಬೆಂಗಳೂರಿನ 68 ಕೇಂದ್ರಗಳಲ್ಲಿ ಇಸ್ಪೀಟ್ ಕೇಂದ್ರಗಳು ನಡೆಸುತ್ತಿದ್ದಾರೆ. ಅವುಗಳನ್ನು ಕೇಳುವವರಿಲ್ಲ, ಆ ರೀತಿ ಹೊರಟಿದ್ದಾರೆ. ಯಾರು ನಡೆಸುತ್ತಿದ್ದಾರೆ ಅಂತೂ ಅವರಿಗೆ ಗೊತ್ತಿದೆ. ಅಂತವರಿಗೆಲ್ಲ ನೀವು ₹5 ಲಕ್ಷ ಕೊಡುತ್ತಿದ್ದೀರಿ, ಇಲ್ಲಿ ಜೀವ ತೆಗೆದಿದ್ದೀರಿ, ಅಂತವರಿಗೆ ₹5 ಲಕ್ಷ ಕೊಡ್ತಿದ್ದೀರಿ ನೀವು ದುಡ್ಡು ಕಟ್ಟೋಕಾಗಲ್ಲ ದುಡ್ಡಿನ ಮೂಲಕ ಹೇಳಕ್ಕಾಗಲ್ಲ ಅವೆಲ್ಲ ಬಡತನದಲ್ಲಿರುವ ಕುಟುಂಬಗಳು. ಕನಿಷ್ಠವಾದರೂ ಅವರಿಗೆ ₹50 ಲಕ್ಷ ಪರಿಹಾರ ಕೊಡಬೇಕು ಅನ್ನೋದು ನನ್ನ ಅಭಿಪ್ರಾಯ ಎಂದರು.

ಭಾರತ್ ಜೋಡೋ ಅಂತ ಮಾಡ್ಲಿಕ್ಕೆ ಹೊರಟಿದ್ದಾರೆ, ಪಂಚಾಯತಿ ಮಟ್ಟದಲ್ಲಿ 6000 ಸಂಘಗಳನ್ನು ಮಾಡುತ್ತಿದ್ದಾರೆ. ಒಂದೊಂದು ಸಂಘಕ್ಕೆ ₹10 ಲಕ್ಷ ಕೊಡುತ್ತಿದ್ದಾರೆ. ₹1 ಸಾವಿರ ಕೋಟಿ ಯಾರಪ್ಪನ ಮನೆಯದ್ದು, ಭಾರತ್ ಜೋಡೋ ಅಂತೆ ಯಾರವರು? ರೌಡಿಸಂನ್ನು ಬೆಳೆಸಲಿಕ್ಕೆ ಭಾರತ ಜೋಡೋ ಹೆಸರಿನಲ್ಲಿ ಯುವಕರನ್ನು ಸಂಘಟನೆ ಮಾಡ್ತೀವಿ, ಆ ಮೂಲಕ ಒಂದು ಸ್ಥಾನ ಮಾಡಿಕೊಡುತ್ತೇವೆ, ಜ್ಞಾನ ಕೊಡ್ತೀವಿ ಅಂತಾರೆ. ಜ್ಞಾನ ಕೊಡೋಕು ಅಲ್ಲ, ಉದ್ಯೋಗ ಮಾಡಿಸೋಕು ಅಲ್ಲ, ಹಿಂದೆ ಗುಂಡುರಾವ್ ಕಾಲದಲ್ಲೂ ಎಫ್.ಎಂ.ಖಾನ್ ಅಂತ ಇದ್ದರು. ಅವರು ಹೀಗೆ ಮಾಡಿದ್ದರು ಅದೇ ಮಾದರಿಯಲ್ಲಿ ಈಗ ರಾಜ್ಯದಲ್ಲಿ ಭಾರತ ಜೋಡೋ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜನರು ಬೆವರು ಸುರಿಸಿರತಕ್ಕಂತ ತೆರಿಗೆ ಹಣ ಇದು ಸಂಘಗಳನ್ನು ರಚನೆ ಮಾಡಿ ಡಿಸಿ ಮೂಲಕ ಹಣ ಕೊಡಿಸುತ್ತಿದ್ದಾರೆ. ಡಿಸಿ ಕೆಲಸ ಇದೇನಾ? ಇಸ್ಪೀಟ್ ಆಡ್ಲಿಕ್ಕೆ ಮತ್ತೊಂದು ಕೆಲಸಕ್ಕೆ ಎನ್ಕರೇಜ್ ಮಾಡಲಿಕ್ಕೆ ಹೊರಟಿದ್ದಾರೆ ಎಂದು ದೂರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ, ಜನಜಾನುವಾರುಗಳಿಗೆ ಮಾತ್ರ ನೀರು ಬಿಡುಗಡೆ
ಅಭಿವೃದ್ಧಿ ಫಲ ಕಡೆಯ ವ್ಯಕ್ತಿಗೂ ಸಿಗಲಿ: ಪ್ರೊ.ವಿಜಯಾ