ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಕ್ಕುಗಳನ್ನು ಕೇಳುವ ನಾವು ನಮ್ಮ ಕರ್ತವ್ಯಗಳನ್ನು ಪಾಲಿಸುತ್ತಿದ್ದೇವೆಯೇ ಎಂದು ಪ್ರಶ್ನಿಸಿಕೊಂಡಾಗ ನಿಜವಾದ ದೇಶಭಕ್ತಿ ಪ್ರದರ್ಶನವಾಗುತ್ತದೆ ಎಂದರು.
ಭಾರತವು ವೈವಿಧ್ಯತೆಯ ಪರಂಪರೆ ಮತ್ತು ಭವ್ಯತೆಯ ದೇಶವಾಗಿದ್ದು, ಸ್ವಾತಂತ್ರ್ಯ ನಂತರದ ಸಮಾನತೆ ಮತ್ತು ಸಹಿಷ್ಣುತೆಯ ಬದುಕನ್ನು ಒಂದು ವಿಧಿ ವಿಧಾನಗಳನ್ನು ಕಾನೂನು ರೂಪಿಸಿಕೊಳ್ಳಲು ಜಗತ್ತಿನ ವಿವಿಧ ದೇಶಗಳ ಸಂವಿಧಾನದ ಶ್ರೇಷ್ಠತೆಗಳನ್ನು ಭಾರತ ಸಂವಿಧಾನದಲ್ಲಿ ಅಳವಡಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಸ್ಮರಣೀಯ ಎಂದರು.ಇಂದಿನ ಯುವ ಜನಾಂಗವು ದೇಶದ ಐಕ್ಯತೆಯನ್ನು ಸಾಧಿಸಿಕೊಂಡು ಪರ ಧರ್ಮ ಸಹಿಷ್ಣತೆ, ಆತ್ಮ ನಿರ್ಭರ ಭಾರತ, ನಾರಿಶಕ್ತಿಯ ಸಮಾಜ ನಿರ್ಮಾಣದೊಂದಿಗೆ ಮತದಾನವನ್ನು ಪ್ರಮಾಣಿಕತೆಯಿಂದ ಚಲಾವಣೆ ಮಾಡಿದಾಗ ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಪ್ರೊ.ಎನ್. ಭಾರತಿ ಮಾತನಾಡಿ, ತ್ಯಾಗ ಬಲಿದಾನ ಸಮರ್ಪಣೆಯಿಂದ ಸ್ವಾತಂತ್ರ್ಯ ಪಡೆದ ನಮಗೆ ದೇಶದ ಪ್ರಗತಿಗೆ ಸಂವಿಧಾನವನ್ನು ಅಳವಡಿಸಿಕೊಂಡು ಜಗತ್ತಿನ ಶಕ್ತಿಯುತ ಭಾರತ ನಿರ್ಮಾಮಡುವಲ್ಲಿ ಶ್ರಮಿಸಬೇಕು. ಡಾ. ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬನೂ ಸಮಾನತೆಯಿಂದ ಬದುಕುವುದಕ್ಕೆ ಶ್ರೇಷ್ಠ ಸಂವಿಧಾನವನ್ನು ಕೊಡಗೆಯಾಗಿ ನೀಡಿದ್ದಾರೆ. ಸಂವಿಧಾನದ ಆಶಯಕ್ಕೆ ಧಕ್ಕೆ ಬರದಂತೆ ನಮ್ಮ ಅಭಿವ್ಯಕ್ತಿಗಳನ್ನು ರೂಪಿಸಿಕೊಳ್ಳಬೇಕು ಎಂದರು.ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶೋಭಾ, ಐಕ್ಯೂಎಸಿ ಸಂಚಾಲಕಿ ಕೆ.ಎಸ್. ಸುಕೃತಾ, ವಿದ್ಯಾರ್ಥಿನಿ ಕ್ಷೇಮಪಾಲನನಾಧಿಕಾರಿ ಜ್ಯೋತಿ ಲಕ್ಷ್ಮಿ ಜಿ. ಕಾವಾ, ಜೀತಾ ಮೊದಲಾದವರು ಇದ್ದರು.ಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ
ಮೈಸೂರು:ನಗರದ ಶ್ರೀಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 77ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ನಂಜನಗೂಡು ತಾಲೂಕು ಮಸಗೆ ಗ್ರಾಮದ ರೈತ ಮಹಿಳೆ ವೀಣಾ ಮಾತನಾಡಿ, ಈ ಶುಭ ದಿನದಂದು ಸೈನಿಕರಿಗೆ ಕೃಷಿಕರಿಗೆ ವಿಜ್ಞಾನಿಗಳಿಗೆ ಹಾಗೂ ಶಿಕ್ಷಕರಿಗೆ ನಾವು ನಮನ ಸಲ್ಲಿಸಬೇಕು. ಈ ದೇಶದ ಬೆನ್ನೆಲುಬು ಕೃಷಿಕರು ಭೂಮಿ ತಾಯಿಯನ್ನು ನಂಬಿದವರು ಯಾರೂ ಕೆಟ್ಟಿಲ್ಲ ಎಂದರು.ಇವತ್ತು ವಿಜ್ಞಾನ ಅತ್ಯಂತ ಮುಂದುವರೆದು ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಸಲಕರಣೆಗಳು ಹಾಗೂ ವಾಹನಗಳನ್ನು ಬಳಸಿಕೊಂಡು ಮಹಿಳೆಯರು ಕೂಡ ವ್ಯವಸಾಯ ಮಾಡಬಹುದಾಗಿದೆ. ಪೆನ್ನು ಹಿಡಿಯುವ ಕೈ ನೇಗಿಲನ್ನು ಹಿಡಿಯಬಹುದು ಎಂಸಿದರು. ಪ್ರಾಂಶುಪಾಲ ಸಿ. ಅಂತೋನಿ ಪೌಲ್ ರಾಜ್, ಉಪನ್ಯಾಸಕರು ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.