ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣಕ್ಕೆ ಫೆ.೨ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮದ ವೇದಿಕೆ ಪರಿಶೀಲಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ರಾಮಯ್ಯನವರು ಬೂದಿಹಾಳ ಪೀರಾಪೂರ ಏತ ನಿರಾವರಿ, ನಾಗರಬೆಟ್ಟ ಏತ ನೀರಾವರಿ ಹಾಗೂ ಆಲಮಟ್ಟಿ ಜಲಾಶಯದ ಎಎಲ್‌ಬಿಸಿ ಕಾಮಗಾರಿಗೆ ಅನುದಾನ ಕೊಟ್ಟಿದ್ದರಿಂದ ಇಂದು ರೈತರ ಬರಗಾಲದಲ್ಲೂ ಸಹಿತ ಅನುಕೂಲವಾಗಿದೆ. ಜೊತೆಗೆ ಐದು ಮಹತ್ತರವಾದ ಗ್ಯಾರಂಟಿಗಳನ್ನು ನೀಡುವ ಮೂಲಕ ಉತ್ತಮ ಆಡಳಿತ ನೀಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಆದರೆ, ಅವರಿಗೇಕೆ ಪೌರ ಸನ್ಮಾನ ಎಂದು ಕೇಳುತ್ತಿರಲ್ಲ ಎಂದು ಖಾರವಾಗಿ ನುಡಿದರು.
ತಾಲೂಕಿನ ಗರಸಂಗಿ ಗ್ರಾಮದಲ್ಲಿನ ನಿರ್ಮಿಸಿದ ಸಿಸಿ ರಸ್ತೆ ಸೇರಿದಂತೆ ಬಹುತೇಕ ಎಲ್ಲ ಗ್ರಾಮಗಳಲ್ಲಿ ನಿರ್ಮಿಸಿದ ರಸ್ತೆಗಳು ಸಂಪೂರ್ಣ ಗುಣಮಟ್ಟ ಕಳೆದುಕೊಂಡು ಕಳಪೆ ಮಟ್ಟದ್ದಾಗಿವೆ. ಹಿಂದಿನ ಶಾಸಕರು ₹೫೦೦- ೬೦೦ ಕೋಟಿಗಳ ವಿಶೇಷ ಅನುದಾನ ತಂದು ರಸ್ತೆ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುತ್ತಿರುದ್ದಾರೆ. ಅವರೇನಿರ್ಮಿಸಿದ ರಸ್ತೆಗಳ ಪರಿಸ್ಥಿತಿ ಹೇಗಿದೆ ಎಂಬುವುದನ್ನು ತಿರುಗಾಡಿ ನೋಡಿ ಎಂದ ಅವರು, ಈ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆಗೆ ತಾವು ಸಿದ್ದರಿದ್ದಿರಾ? ಹಾಗಿದ್ದರೆ ಸುಮ್ಮ ನೆ ಆರೋಪ ಮಾಡುವುದು ಸರಿಯಲ್ಲ. ಪ್ರಚಾರ ಪಡೆದುಕೊಳ್ಳಲು ದ್ವೇಷದ ರಾಜಕಾರಣ ಮಾಡುವುದನ್ನು ಕೈಬಿಟ್ಟು ಒಳ್ಳೆಯ ರಾಜಕಾರಣ ಮಾಡಲು ಮುಂದಾಗಿ ಎಂದರು.ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್‌ಇಪಿಎಸ್‌ಪಿ ಯೋಜನೆ ಹಣವನ್ನು ದುರುಪಯೋಗಪಡಿಸಿಕೊಂಡು ಆ ಸಮುದಾಯಕ್ಕೆ ಅನ್ಯಾಯ ಮಾಡಿದ್ದಿರಿ ಎಂದು ಗಂಭೀರ ಆರೋಪ ಮಾಡಿದ ಅವರು, ನನ್ನ ಅವಧಿಯಲ್ಲಿ ಎಲ್ಲ ವರ್ಗದವರಿಗೂ ಸಮಾನ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇನೆ. ಜೊತೆಗೆ ಮುದ್ದೇಬಿಹಾಳದಲ್ಲಿ ಪ್ರಪ್ರಥಮ ಬಾರಿ ಕಾಂಗ್ರೆಸ್ ಮುಖಂಡ ದಿ.ಶೃಂಗಾರಗೌಡರು ಹಾಗೂ ನಾನು ನಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣ ಮಾಡಿದ್ದೇವೆ ಎಂದು ಹೇಳಿದರು.
೨೦೧೩ರಿಂದ ೨೦೧೮ರವೆಗೆ ನನ್ನ ಅವಧಿಯಲ್ಲಿ ಸರ್ಕಾರದಿಂದ ಬಿಡುಗಡೆಗೊಳಿಸಿರುವ ಅನುದಾನ ಕಾಮಗಾರಿಗಳಿಗೆ ನೀವು ಉದ್ಘಾಟನೆ ಮಾಡಿಲ್ಲವೇನು? ಸರ್ಕಾರದ ಯೋಜನೆಗಳನ್ನು ಯಾರು ಆ ಅವಧಿಯಲ್ಲಿ ಅಧಿಕಾರದಲ್ಲಿರುತ್ತಾರೋ ಅವರು ಉದ್ಘಾಟನೆ ನೆರವೆರಿಸುತ್ತಾರೆ. ಸದ್ಯ ಮುಖ್ಯಮಂತ್ರಿಗಳ ಉದ್ಘಾಟನೆ ಮಾಡುತ್ತಿರುವ ಕಾಮಗಾರಿಗಳಲ್ಲಿ ನಮ್ಮ ಸರ್ಕಾರದ ಜೊತೆಗೆ ಹಿಂದಿನ ಅಧಿಕಾರದಲ್ಲಿಯ ಕೆಲವು ಮಾತ್ರ ಇರಬಹುದು. ಹಾಗಂತ ಏನು ಬೇಕಾದರೂ ಹೇಳಿದರೆ ನಡೆಯುದಿಲ್ಲ. ನಮಗೂ ರಾಜಕಾರಣ ಮಾಡಲು ಬರುತ್ತದೆ ಎಂದು ತಿಳಿಯಿರಿ ಎಂದು ಹೇಳಿದರು.
ಈ ಮೊದಲು ಕ್ರೀಡಾಂಗಣಕ್ಕೆ ನಾಲತವಾಡದ ದೇಶಮುಖರು ಭೂದಾನ ಮಾಡಿದ್ದಾರೆ. ಆಗ ನಾನು ಒಂದಿಷ್ಟು ಹಣವನ್ನು ತಂದು ಸ್ವಚ್ಛತೆ ಮಾಡಿಸಿ ಅಭಿವೃದ್ಧಿಪಡಿಸಿದ್ದೇನೆ. ಅಷ್ಟರಲ್ಲಿಯೇ ನಾನು ಅಧಿಕಾರ ಕಳೆದುಕೊಂಡೆ. ಮುಂಬರುವ ದಿನಗಳಲ್ಲಿ ಆ ಕ್ರೀಡಾಂಗಣವನ್ನು ನಿರ್ಮಿಸಲು ಶ್ರಮಿಸುತ್ತೇನೆ ಎಂದು ವಿವರಿಸಿದರು.