ಬಾಡಿಗೆ ವಿಚಾರಕ್ಕೆ ಜಗಳ; ಟವರ್ ಏರಿದ ಮಾಲೀಕನ ಪುತ್ರ

KannadaprabhaNewsNetwork |  
Published : Apr 19, 2026, 03:15 AM IST
ಮಾಲೀಕರು ಮತ್ತು ಬಾಡಿಗೆದಾರರ ನಡುವೆ ವಾಗ್ವಾದ... ಟವರ್ ಏರಿದ ಮನೆ ಮಾಲೀಕರ ಮಗ !  | Kannada Prabha

ಸಾರಾಂಶ

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ವೈಮನಸ್ಸು ಉಂಟಾಗಿ, ವಾಗ್ದಾದ ನಡೆದಿದ್ದು, ಇದರಿಂದ ಮನನೊಂದ ಮಾಲೀಕರ ಪುತ್ರ ಶನಿವಾರ ಟೆಲಿಪೋನ್ ಟವರ್ ಏರಿ ಪ್ರತಿಭಟಿಸಿದ ಘಟನೆ ನವನಗರದ ಸೆಕ್ಟರ್ ನಂಬರ್ 36ರಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ವೈಮನಸ್ಸು ಉಂಟಾಗಿ, ವಾಗ್ದಾದ ನಡೆದಿದ್ದು, ಇದರಿಂದ ಮನನೊಂದ ಮಾಲೀಕರ ಪುತ್ರ ಶನಿವಾರ ಟೆಲಿಪೋನ್ ಟವರ್ ಏರಿ ಪ್ರತಿಭಟಿಸಿದ ಘಟನೆ ನವನಗರದ ಸೆಕ್ಟರ್ ನಂಬರ್ 36ರಲ್ಲಿ ನಡೆದಿದೆ.

ಭೀಮು ವಡ್ಡರ ಟೆಲಿಪೋನ್ ಟವರ್ ಏರಿದ ಯುವಕ. ನವನಗರದಲ್ಲಿ ತಮ್ಮ ಮನೆ ಬಾಡಿಗೆ ಪಡೆದಿರುವ ಮಹಿಳೆ ಹಾಗೂ ಭೀಮು ಅವರ ತಂದೆ ನಡುವೆ ಬಾಡಿಗೆ ಒಪ್ಪಂದದ ವಿಚಾರವಾಗಿ ತಂಟೆ ತಕರಾರು ನಡೆದಿದ್ದು, ಶುಕ್ರವಾರ ಇದೇ ವಿಚಾರಕ್ಕೆ ಗಲಾಟೆ ಆಗಿತ್ತು ಎನ್ನಲಾಗಿದೆ. ಬಾಡಿಗೆದಾರರೇ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿ ಯುವಕ ಭೀಮು ಟವರ್ ಏರಿದ್ದ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ನವನಗರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ, ಯುವಕನ ಮನವೊಲಿಸಿ ಟವರ್ ಮೇಲಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಲ್ಪಾಗೆ ರಾಜ್ಯ ಸರ್ಕಾರ ₹15 ಲಕ್ಷ, ಗ್ರೂಪ್‌ ಬಿ ಹುದ್ದೆ
100 ವರ್ಷಗಳ ಹಿಂದೆ ಹಿಂದುತ್ವ ಎಂಬುದೇ ಇರಲಿಲ್ಲ: ಪ್ರಿಯಾಂಕ್‌