ಜಿಲ್ಲೆಯಲ್ಲಿನ ಎಲ್ಲ 10 ಸಕ್ಕರೆ ಕಾರ್ಖಾನೆಗಳನ್ನು ಈ ವರ್ಷದ ಕಬ್ಬಿಗೆ ₹5500 ದರ ಘೋಷಣೆ ಮಾಡುವವರೆಗೂ ಹಾಗೂ ಹಳೆಯ ಬಿಲ್ ಹಾಗೂ ₹50 ಸಂಪೂರ್ಣ ಕ್ಲಿಯರ್ ಮಾಡುವವರೆಗೆ ಕಾರ್ಖಾನೆಗಳನ್ನು ಆರಂಭಿಸಬಾರದೆಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯಲ್ಲಿನ ಎಲ್ಲ 10 ಸಕ್ಕರೆ ಕಾರ್ಖಾನೆಗಳನ್ನು ಈ ವರ್ಷದ ಕಬ್ಬಿಗೆ ₹5500 ದರ ಘೋಷಣೆ ಮಾಡುವವರೆಗೂ ಹಾಗೂ ಹಳೆಯ ಬಿಲ್ ಹಾಗೂ ₹50 ಸಂಪೂರ್ಣ ಕ್ಲಿಯರ್ ಮಾಡುವವರೆಗೆ ಕಾರ್ಖಾನೆಗಳನ್ನು ಆರಂಭಿಸಬಾರದೆಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.ಅಕ್ಟೊಬರ್ ಮೊದಲ ವಾರದಲ್ಲಿ ಜಿಲ್ಲೆಯ ಎಲ್ಲಾ ಸಕ್ಕರೆ ಮಾಲೀಕರು ಹಾಗೂ ರೈತ ಮುಖಂಡರು, ಅಧಿಕಾರಿಗಳ ಸಭೆ ಕರೆದು 14 ದಿನಗಳಲ್ಲಿ ಕಬ್ಬಿನ ಬಿಲ್ ಹಾಕುವುದು, ಸರಿಯಾಗಿ ತೂಕ ಹಾಗೂ ರೈತರೊಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳುವುದು ಸೇರಿದಂತೆ ಮುಕ್ತವಾಗಿ ಚರ್ಚೆ ಮಾಡಿ ಕಟ್ಟುನಿಟ್ಟಾಗಿ ನಿರ್ದೇಶನ ನೀಡುವಂತೆ ಹೇಳಲಾಯಿತು.ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಮಹಾದೇವ ಬನಸೋಡೆ, ಕಲ್ಲಪ್ಪ ಪಾರಶೆಟ್ಟಿ, ಅಮರೇಶ ಬೈರಗೊಂಡ ಇದ್ದರು.