ಕನ್ನಡಪ್ರಭ ವಾರ್ತೆ ಸೊರಬ
ಭಾರತೀಯ ಸೇನೆಯಲ್ಲಿ ಸೈನಿಕನಾಗಿ ೨೨ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಭಾನುವಾರ ರಾತ್ರಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರ ಮೆರವಣಿಗೆ, ಅದ್ಧೂರಿ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾವು ಕಳೆದ ೨೨ ವರ್ಷಗಳಿಂದ ಜಮ್ಮು ಕಾಶ್ಮೀರ, ದೆಹಲಿ, ಪಶ್ಚಿಮ ಬಂಗಾಲ, ಪಂಜಾಬ್, ಗುಜರಾಜ್ ಹಾಗೂ ಇತರೆ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಸಂದರ್ಭದಲ್ಲಿ ಅನುಭವಗಳು ಸಾಕಷ್ಟಿವೆ. ಗ್ರಾಮ ಸೇರಿದಂತೆ ಹಲವು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ದೇಶಾಭಿಮಾನ ಬೆಳೆಸಿಕೊಳ್ಳಲು, ಶಿಸ್ತು ಮೈಗೂಡಿಸಿಕೊಳ್ಳಲು ಹಾಗೂ ಸೈನ್ಯಕ್ಕೆ ಸೇರಲು ಮಾರ್ಗದರ್ಶನ ನೀಡಲಾಗುವುದು ಎಂದರು.ಇಂಡುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಯೋಗೇಶ್ ಹೆಸರಿ ಮಾತನಾಡಿ, ದೇಶ ಸೇವೆ ಈಶ ಸೇವೆಯಾಗಿದೆ. ಸೈನಿಕರಾಗಿ ದೇಶದ ಸೇವೆ ಮಾಡಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಶಿವಮೂರ್ತಿ ಅವರು ಆಗಮಿಸಿದ್ದು ಹಬ್ಬದ ವಾತಾವರಣ ನಿರ್ಮಿಸಿದೆ ಎಂದ ಅವರು ದೇಶ ಹಾಗೂ ದೇಶದ ಜನರ ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ಸದಾ ಗೌರವ ಸಲ್ಲಬೇಕಿದೆ ಎಂದರು.
ಇದಕ್ಕೂ ಮೊದಲು ಮಹಿಳೆಯರು ನಿವೃತ್ತ ಯೋಧ ಶಿವಮೂರ್ತಿ ಅವರಿಗೆ ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ಗ್ರಾಮಸ್ಥರು ಮೆರವಣಿಗೆಯಲ್ಲಿ ಕರೆತಂದು ಸನ್ಮಾನಿಸಿದರು. ಅನೇಕ ಮುಖಂಡರು ವೈಯಕ್ತಿಕವಾಗಿ ಸನ್ಮಾನಿಸಿ, ಹೂಗುಚ್ಚ ನೀಡಿದರು. ಯುವಕರು ಶಿವಮೂರ್ತಿ ಅವರಿಂದ ಕೇಕ್ ಕತ್ತರಿಸಿ, ಪರಸ್ಪರ ಹಂಚಿ ಸವಿದು ಸಂಭ್ರಮ ಪಟ್ಟರು.