ಆರೋಗ್ಯ ದಾಸೋಹ ಸೇವೆ ನಿರಂತರ ಮುಂದುವರಿಕೆ: ಡಾ.ಟಿ.ಜಿ.ರವಿಕುಮಾರ್

KannadaprabhaNewsNetwork | Published : Feb 28, 2024 2:36 AM

ಸಾರಾಂಶ

ಆರೋಗ್ಯ ಕಾಪಾಡಿಕೊಳ್ಳುವ ಹೊಣೆ ಮತ್ತು ಸವಾಲು ಇಂದು ಎಲ್ಲ ವಯೋಮಾನದವರಿಗೂ ಕಾಡುತ್ತಿದ್ದು, ಇದಕ್ಕೆ ಬದಲಾದ ವಾತಾವರಣ, ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರದ ಪಾತ್ರವೂ ಇದೆ. ಯಾವುದೇ ರೀತಿಯ ದೇಹದ ಅಸಹಜತೆ ನಿರ್ಲಕ್ಷ್ಯ ಮಾಡದೆಯೇ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ನನಗೆ ರಾಜಕೀಯ ಕ್ಷೇತ್ರಕ್ಕೆ ಬಂದು ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೂ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾದ್ಯಂತ ಒತ್ತಾಯ ಕೇಳಿ ಬಂದಿದೆ. ಭವಿಷ್ಯದ ನಿರ್ಧಾರವು ಏನೇ ಆಗಿದ್ದರೂ ಪ್ರೀತಿ ಆರೈಕೆ ಟ್ರಸ್ಟ್ ಮೂಲಕ ನಾವು ನೀಡುತ್ತಿರುವ ಆರೋಗ್ಯ ದಾಸೋಹ ಸೇವೆ ನಿರಂತರವಾಗಿ ಮುಂದುವರಿಯಲಿದೆ ಎಂದು ದಾವಣಗೆರೆ ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ್ ಹೇಳಿದರು.

ಹರಪನಹಳ್ಳಿ ತಾಲೂಕಿನ ಕಮ್ಮತಹಳ್ಳಿಯಲ್ಲಿ ದಾವಣಗೆರೆಯ ಪ್ರೀತಿ ಆರೈಕೆ ಟ್ರಸ್ಟ್ನಿಂದ ಆಯೋಜಿಸಿದ್ದ ಆರೋಗ್ಯ ಚಿಕಿತ್ಸೆ 55ನೇ ಉಚಿತ ಶಿಬಿರದಲ್ಲಿ ಮಾತನಾಡಿ, ವೈದ್ಯಕೀಯ ಸೇವೆಯಲ್ಲಿ ಸಂತೃಪ್ತನಾಗಿದ್ದ ನನ್ನನ್ನು ರಾಜಕೀಯ ಕರೆತರುವ ಹಂಬಲ, ಒತ್ತಾಯ ದಾವಣಗೆರೆ ಲೋಕಸಭಾ ಕ್ಷೇತ್ರದ ಜನರೆಲ್ಲರೂ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಾನು ದಾವಣಗೆರೆ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸುವ ಸಂಪೂರ್ಣ ನಿರ್ಧಾರವು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವರಿಷ್ಠರಿಗೆ ಸೇರಿದೆ ಎಂದರು.

ಆರೋಗ್ಯ ಕಾಪಾಡಿಕೊಳ್ಳುವ ಹೊಣೆ ಮತ್ತು ಸವಾಲು ಇಂದು ಎಲ್ಲ ವಯೋಮಾನದವರಿಗೂ ಕಾಡುತ್ತಿದ್ದು, ಇದಕ್ಕೆ ಬದಲಾದ ವಾತಾವರಣ, ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರದ ಪಾತ್ರವೂ ಇದೆ. ಯಾವುದೇ ರೀತಿಯ ದೇಹದ ಅಸಹಜತೆ ನಿರ್ಲಕ್ಷ್ಯ ಮಾಡದೆಯೇ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಶಿಬಿರದಲ್ಲಿ ಕಮ್ಮತಹಳ್ಳಿಯ ಮುಖಂಡರಾದ ಜಯಣ್ಣ, ಎನ್.ಸಿದ್ದಪ್ಪ, ಕೆ.ಯು.ಮುರುಗೇಶ್, ಕೆ.ಎಸ್.ತಿಪ್ಪೇಶ್, ಮರುಳಸಿದ್ದೇಶ್, ಕೆ.ಎಲ್.ಪಂಪಾಪತಿ, ಸುರೇಶ್, ಉದ್ಯಮಿಗಳಾದ ನುಂಕೇಶ್, ಟ್ರಸ್ಟ್ ಸಿಬ್ಬಂದಿಗಳಾದ ವಿನೋದ್ ಕುಮಾರ್, ಶರತ್, ಸುದೀಪ್, ಕಿರಣ್ ಆಲೂರ್, ಯುವ ನಾಯಕರಾದ ಹರೀಶ್. ಡಿ.ಎಸ್, ನಿಖಿಲ್ ಭಾಗವಹಿಸಿದ್ದರು.

ಆರೈಕೆ ಆಸ್ಪತ್ರೆಯ ವೈದ್ಯಕೀಯ ತಂಡದ ಡಾ.ಆನಂದ್, ಡಾ.ಹನುಮಂತಯ್ಯ, ಡಾ.ಸಂದೀಪ್, ಡಾ.ಕೀರ್ತಿ ಚಿಕಿತ್ಸೆ ಮತ್ತು ಸಲಹೆ ನೀಡಿದರು.

Share this article