ಅರೆಭಾಷೆ ಸ್ಥಳೀಯ ಭಾಷೆಯಾಗಿ ವಿಶಾಲವಾಗಿ ಬೆಳೆದಿದೆ: ಸದಾನಂದ ಮಾವಜಿ

KannadaprabhaNewsNetwork |  
Published : Oct 28, 2024, 01:02 AM IST
ಚಿತ್ರ : 27ಎಂಡಿಕೆ6 : ಅರೆಭಾಷೆ ಗಡಿನಾಡ ಉತ್ಸವದ ಉದ್ಘಾಟನಾ ಕಾರ್ಯಕ್ರಮ.  | Kannada Prabha

ಸಾರಾಂಶ

ಅರೆಭಾಷೆ ಒಂದು ಸಮುದಾಯ ಮತ್ತು ಸಮಾಜಕ್ಕೆ ಸೀಮಿತವಾಗದೆ ಎಲ್ಲರ ಸ್ಥಳೀಯ ಭಾಷೆಯಾಗಿ ವಿಶಾಲವಾಗಿ ಬೆಳೆದಿದೆ ಎಂದು ಸದಾನಂದ ಮಾವಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅರೆಭಾಷೆಯು ಒಂದು ಸಮುದಾಯ ಅಥವಾ ಸಮಾಜಕ್ಕೆ ಸೀಮಿತವಾಗದೆ, ಎಲ್ಲರ ಸ್ಥಳೀಯ ಭಾಷೆಯಾಗಿ ವಿಶಾಲವಾಗಿ ಬೆಳೆದಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಹೇಳಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕಾಸರಗೋಡು ಜಿಲ್ಲೆಯ ಬಂದಡ್ಕ ಗ್ರಾಮದವರ ಸಹಕಾರದಲ್ಲಿ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಮಂಟಪ ಸಭಾಭವನದಲ್ಲಿ ಭಾನುವಾರ ನಡೆದ ‘ಅರೆಭಾಷೆ ಗಡಿನಾಡ ಉತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಂದಡ್ಕದಲ್ಲಿ ನಡೆದ ಅರೆಭಾಷೆ ಗಡಿನಾಡ ಉತ್ಸವದಲ್ಲಿ ಇಲ್ಲಿನ ಸ್ಥಳೀಯರು ಹಬ್ಬದ ರೀತಿ ಸಂತಸದಿಂದ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗಡಿ ಭಾಗದಲ್ಲಿ ಅರೆಭಾಷೆ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಸುಳ್ಯ ತಾಲೂಕಿನ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ.ಎಸ್.ಗಂಗಾಧರ ಅವರು ಕಾರ್ಯಕ್ರಮದಲ್ಲಿ ಹೊಂಬಾಳೆ ಅರಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಅರೆಭಾಷೆ ಮಾತನಾಡುವರು ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು, ಮೈಸೂರು ಹಾಗೂ ಬೆಂಗಳೂರಿನಲ್ಲಿ ನೆಲೆಸಿದ್ದು, ಸ್ಥಳೀಯ ಭಾಷೆಯ ಜತೆಗೆ ಅರೆಭಾಷೆಯನ್ನು ಮಾತನಾಡಿ ಉಳಿಸಿ ಬೆಳೆಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಅರೆಭಾಷೆ ಉಳಿಸಿ ಬೆಳೆಸುವುದು ಅರೆಭಾಷಿಕರ ಜವಾಬ್ದಾರಿ ಆಗಿದೆ. ಆದ್ದರಿಂದ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಚ್ಚಿನ ಗಮನಹರಿಸಬೇಕು ಎಂದರು.

ಗಡಿಭಾಗದಲ್ಲಿ ಅರೆಭಾಷೆ ಉಳಿಸಿ ಬೆಳೆಸುವ ಬಗ್ಗೆ ಮಾತನಾಡಿದ ಲೇಖಕಿ ಸ್ಮಿತಾ ಅಮೃತ ರಾಜ್ ಅವರು ಅರೆಭಾಷೆಯು ಸಮುದಾಯದ ಭಾಷೆಯಾಗಿರದೆ, ಪರಿಸರದ ಹಾಗೂ ವ್ಯವಹಾರಿಕ ಭಾಷೆಯಾಗಿ ಬೆಳೆದಿರುವುದು ಶ್ಲಾಘನೀಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಅರೆಭಾಷೆಯು ಬದುಕಿನ ಭಾಷೆಯಾಗಿ ಬೆಳೆಯಬೇಕು. ಹಾಗೆಯೇ ಸ್ವತಂತ್ರ್ಯ ಭಾಷೆಯಾಗಿ ಬೆಳೆಯಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಿದೆ ಎಂದರು.

ಸ್ಥಳೀಯ ಸಂಸ್ಕೃತಿ ಶ್ರೀಮಂತವಾಗಿದ್ದಲ್ಲಿ ಭಾಷೆ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಅರೆಭಾಷೆ ಹೆಚ್ಚು ಹೆಚ್ಚು ಮಾತನಾಡಬೇಕು ಎಂದು ಸ್ಮಿತಾ ಅಮೃತರಾಜ್ ಅವರು ವಿವರಿಸಿದರು.

ಹಿಂದೆ ಅರೆಭಾಷೆ ಮಾತನಾಡಿದರೆ ಸಮಾಜ ತಿಳಿಯುತ್ತದೆ ಎಂಬ ಅಳುಕಿತ್ತು, ಆದರೆ ಕಾಲ ಬದಲಾಗಿದೆ. ಸರ್ಕಾರವು ಸಹ ಅರೆಭಾಷೆ ಅಕಾಡೆಮಿ ಸ್ಥಾಪಿಸುವ ಮೂಲಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಉಳಿಸಿ ಬೆಳೆಸಲು ಸಹಕಾರ ನೀಡಿದೆ ಎಂದು ಸ್ಮಿತಾ ಅಮೃತರಾಜ್ ಅವರು ನುಡಿದರು.

ನಾಡಿನಲ್ಲಿ ಅರೆಭಾಷೆ ಬೆಳವಣಿಗೆಗೆ ಕೋಡಿ ಕುಶಾಲಪ್ಪ ಗೌಡ, ಪುರುಷೋತ್ತಮ ಬಿಳಿಮಲೆ, ಎಂ.ಜಿ.ಕಾವೇರಮ್ಮ, ಭವಾನಿ ಶಂಕರ್ ಹೊದ್ದೇಟಿ, ಗಂಗಾಧರ ಮಾಸ್ತರರು ಶ್ರಮಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಅಕಾಡೆಮಿ ಸ್ಥಾಪನೆ ನಂತರ ಅರೆಭಾಷೆಯಲ್ಲಿ ಪುಸ್ತಕ ಪ್ರಕಟಣೆ, ಸಂಶೋಧನೆ, ಅನುವಾದ, ಪದಕೋಶ, ವಿಶ್ವಕೋಶ ಸೇರಿದಂತೆ ಹಲವು ಹೊತ್ತಿಗೆ ಹೊರತಂದಿರುವುದು ಹಾಗೂ ಅರೆಭಾಷೆಯಲ್ಲಿ ನಾಟಕ ಪ್ರದರ್ಶನ ಹೀಗೆ ಹಲವು ಕಾರ್ಯಕ್ರಮ ಆಯೋಜಿಸುವ ಮೂಲಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಉತ್ತೇಜನಕ್ಕೆ ಸಹಕಾರಿಯಾಗಿದೆ ಎಂದರು.

ಅರೆಭಾಷೆಯನ್ನು ಸುಮಾರು 6 ಲಕ್ಷ ಜನರು ಮಾತನಾಡುತ್ತಿದ್ದು, ಅರೆಭಾಷೆ ಅಂತ:ಕರಣದ ಭಾಷೆಯಾಗಬೇಕು ಎಂದು ಸ್ಮಿತಾ ಅಮೃತರಾಜ್ ಅವರು ಪ್ರತಿಪಾದಿಸಿದರು.

ಅರೆಭಾಷೆ ಮಾತನಾಡುವ ಪ್ರದೇಶಗಳಲ್ಲಿ ''''''''''''''''ಅರೆಭಾಷೆ ಒಕ್ಕೂಟ'''''''''''''''' ಸ್ಥಾಪಿಸಬೇಕು. ''''''''''''''''ಅಮರ ಸುಳ್ಯ ಕ್ರಾಂತಿ'''''''''''''''' ಇತಿಹಾಸ ಪುಟದಲ್ಲಿ ದಾಖಲಾಗಿದ್ದು, ಇದರ ಸ್ಮರಣೆ ಸದಾ ನಡೆಯಬೇಕು ಎಂದರು.

ಅಕಾಡೆಮಿ ವತಿಯಿಂದ ‘ಹಿಂಗಾರ’ ತ್ರೈಮಾಸಿಕ ಹೊತ್ತಿಗೆ ತರಲಾಗುತ್ತಿದ್ದು, ಅರೆಭಾಷೆ ಮಾತನಾಡುವ ಎಲ್ಲರೂ ಮನೆಗೆ ತರಿಸಿಕೊಂಡು ಓದುವಂತಾಗಬೇಕು, ಜೊತೆಗೆ ಅರೆಭಾಷೆಯಲ್ಲಿ ಬರೆಯುವಂತಾಗಬೇಕು ಎಂದು ಸಲಹೆ ಮಾಡಿದರು.

ಸಾಮಾಜಿಕ ಮಾಧ್ಯಮದಲ್ಲಿ ಅರೆಭಾಷೆಯನ್ನು ಹೆಚ್ಚು ಹೆಚ್ಚು ಬಳಸುವಂತಾಗಬೇಕು. ಇದರಿಂದ ಮತ್ತಷ್ಟು ಭಾಷಾ ಬೆಳವಣಿಗೆ ಹೆಚ್ಚಲಿದೆ ಎಂದು ಸ್ಮಿತಾ ಅಮೃತರಾಜ್ ಅವರು ಅಭಿಪ್ರಾಯ ಪಟ್ಟರು.

ಕಾಸರಗೋಡು ಜಿಲ್ಲೆಯ ಕುತ್ತಿಕೋಲು ಗ್ರಾ.ಪಂ.ಅಧ್ಯಕ್ಷರಾದ ಮುರಳಿ, ಸದಸ್ಯರಾದ ತವನಂ, ಬಿ.ಕೃಷ್ಣನ್, ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ಸುಭಾಷ್ ಚಂದ್ರ ರೈ ಅವರು ಮಾತನಾಡಿದರು.

ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು, ಲತಾ ಪ್ರಸಾದ್ ಕುದ್ಪಾಜೆ, ಡಾ.ಎನ್.ಎ. ಜ್ಞಾನೇಶ್, ತೇಜಕುಮಾರ್ ಕುಡೆಕಲ್ಲು, ಚಂದ್ರಾವತಿ ಬಡ್ಡಡ್ಕ, ಪಿ.ಎಸ್.ಕಾರ್ಯಪ್ಪ, ಲೋಕೇಶ್ ಊರುಬೈಲ್, ಸಂದೀಪ್ ಪೂಳಕಂಡ, ವಿನೋದ್ ಮೂಡಗದ್ದೆ, ಮೋಹನ್ ಪೊನ್ನಚ್ಚನ ಇತರರು ಇದ್ದರು.

ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನ ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಸಂಘದ ತಂಡ ಹಾಗೂ ಸುಬ್ರಹ್ಮಣ್ಯ ಕೆ ಎಸ್ ಎಸ್ ಕಾಲೇಜಿನ‌ ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಸಂಘದವರು ಅರೆಭಾಷೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಗಮನ ಸೆಳೆದರು.

ಉದಯ ಭಾಸ್ಕರ ಸುಳ್ಯ, ಭವಾನಿ ಶಂಕರ ಅಡ್ತಲೆ, ದಿವ್ಯ ಟೀಚರ್, ಆನಂದ ಕಡೆಶಿವಾಲಯ, ವಿಶ್ವನಾಥ್ ಕುಲಾಲ್ ಮಿತ್ತೂರು, ಲತಾಶ್ರೀ ಸುಪ್ರೀತ್ ಮೊಂಟಡ್ಕ, ರವೀಶ್ ಪಡ್ಡಂಬೈಲು ಅವರು ಬಹುಭಾಷ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ