ಕನ್ನಡಪ್ರಭವಾರ್ತೆ ಶನಿವಾರಸಂತೆ
ರೈತ ಮುಖಂಡರಾದ ಹೆಗ್ಗಳ ಹೂವಯ್ಯ, ಪ್ರಸನ್ನ, ರಮೇಶ್, ದಿನೇಶ್, ಜಿತೇಂದ್ರ, ಮೊಗಪ್ಪ, ಲೋಕೇಶ್, ಲಕ್ಷ್ಮಣ, ನಾಗರಾಜ್, ಅಜಿತ್, ಅಶೋಕ್ ಅವರನ್ನು ಪೊಲೀಸರು ಕೊಡ್ಲಿಪೇಟೆ ಉಪ ಠಾಣೆಗೆ ಕರೆತಂದಿದ್ದರು. ಹೋರಾಟಗಾರರನ್ನು ಬಂಧಿಸಿರುವ ಮಾಹಿತಿ ತಿಳಿದ ಕೊಡ್ಲಿಪೇಟೆ ಮತ್ತು ಸುತ್ತಮುತ್ತಲಿನ ರೈತರು ಠಾಣೆ ಮುಂಭಾಗ ಜಮಾಯಿಸಿ ಸರ್ಕಾರ ಮತ್ತು ಪೊಲೀಸರ ವಿರುದ್ದ ಧಿಕ್ಕಾರಗಳನ್ನು ಕೂಗುತ್ತಾ ಬಂಧಿಸಿರುವ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.
ನಂತರ ಪ್ರತಿಭಟನೆಗಾರರು ರಾಜ್ಯ ಸರ್ಕಾರ ಬಿಡದಿಯಲ್ಲಿ ರೈತರ ಆಸ್ತಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಸಿ ಕಬಳಿಸುತ್ತಿರುವಂತೆ ಕೊಡಗಿನಲ್ಲೂ ಸಹ ಸಿ ಅಂಡ್ ಲ್ಯಾಂಡ್ ನೆಪ ಹೇಳಿ ರೈತರ ಆಸ್ತಿಯನ್ನು ಕಬಳಿಸಲು ಹೊರಟಿರುವ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಘೋಷಣೆಗಳನ್ನು ಕೂಗಿದರು. ಮುಂದಿನ ದಿನದಲ್ಲಿ ರೈತರಿಗೆ ನ್ಯಾಯ ಸಿಗದಿದ್ದರೆ ವಿಧಾನ ಸಭಾ ಮುಂಭಾಗ ರೈತರು ಪ್ರತಿಭಟನೆ ಮಾಡಲಾಗುತ್ತದೆ ಎಂದು ರೈತ ಮುಖಂಡ ಮತ್ತು ವಕೀಲ ದೀಪಕ್ ಸರ್ಕಾರವನ್ನು ಎಚ್ಚರಿಸಿದರು.ಪ್ರತಿಭಟನೆಗಾರರ ಒತ್ತಾಯಕ್ಕೆ ಮಣಿದ ಶನಿವಾರಸಂತೆ ವೃತ್ತ ನಿರೀಕ್ಷಕ ಕೃಷ್ಣರಾಜ್ ಬಂಧಿತ ಹೋರಾಟಗಾರರನ್ನು ಠಾಣೆಯಿಂದ ಬಿಡುಗಡೆಗೊಳಿಸಿದರು.