ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮಚಂದ್ರಾಪುರ ಆಯೋಜಿಸಿರುವ ಶಂಕರ ಪಂಚಮೀ ಕಾರ್ಯಕ್ರಮ ಪ್ರಯುಕ್ತ ಕೇರಳದ ಕಾಲಡಿಯಿಂದ ಆಗಮಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯರ ಶ್ರೀ ಮಹಾಪಾದುಕೆ ಇರುವ ಅದ್ವೈತ ರಥ ಬುಧವಾರ ನಗರ ಪ್ರವೇಶಿಸಿದ್ದು, ಗಾಂಧಿ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
- ಶಂಕರ ಪಂಚಮೀ ಕಾರ್ಯಕ್ರಮ ಪ್ರಯುಕ್ತ ಕೇರಳದ ಕಾಲಡಿಯಿಂದ ಯಾತ್ರೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮಚಂದ್ರಾಪುರ ಆಯೋಜಿಸಿರುವ ಶಂಕರ ಪಂಚಮೀ ಕಾರ್ಯಕ್ರಮ ಪ್ರಯುಕ್ತ ಕೇರಳದ ಕಾಲಡಿಯಿಂದ ಆಗಮಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯರ ಶ್ರೀ ಮಹಾಪಾದುಕೆ ಇರುವ ಅದ್ವೈತ ರಥ ಬುಧವಾರ ನಗರ ಪ್ರವೇಶಿಸಿದ್ದು, ಗಾಂಧಿ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಕೂಡಲಿ ಶೃಂಗೇರಿ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳು ಪಾದುಕೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ರಥವು ಅಶೋಕ ರಸ್ತೆ ಮೂಲಕ ಜಯದೇವ ವೃತ್ತದ ಕೂಡಲಿ ಶ್ರೀ ಶಂಕರ ಮಠ ತಲುಪಿತು. ಭಕ್ತರು ಪಾದುಕೆ ದರ್ಶನ ಪಡೆದು ಪುನೀತರಾದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.