ಮಂಗಳೂರು ವಿಮಾನ ನಿಲ್ದಾಣದಲ್ಲಿ 42.90 ಲಕ್ಷ ರು.ಗಳ ಚಿನ್ನ ವಶ

KannadaprabhaNewsNetwork |  
Published : Nov 10, 2023, 01:01 AM ISTUpdated : Nov 10, 2023, 01:02 AM IST

ಸಾರಾಂಶ

ಮಂಗಳೂರು ವಿಮಾನ ನಿಲ್ದಾಣದಲ್ಲಿ ೪೨.೯೦ ಲಕ್ಷ ಮೌಲ್ಯದ ಚಿನ್ನ ವಶ

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಅ.31ರಿಂದ ನ.5 ರ ನಡುವೆ ಮೂವರು ಪ್ರಯಾಣಿಕರಿಂದ ಒಟ್ಟು 42,90,060 ಲಕ್ಷ ರು. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.

ಅ.31ರಿಂದ ನ.2ರ ನಡುವೆ ದುಬೈನಿಂದ ಮಂಗಳೂರಿಗೆ ಏರ್‌ ಇಂಡಿಯಾದ ವಿಮಾನದ ಮೂಲಕ ಬಂದಿಳಿದ ಇಬ್ಬರಿಂದ ಒಟ್ಟು 17,49,660 ರು. ಮೌಲ್ಯದ 228 ಗ್ರಾಂ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಪೇಸ್ಟ್‌ ರೂಪದ ಚಿನ್ನ ಹಾಗೂ ಚಿನ್ನದ ಸರವನ್ನು ಒಳ ಉಡುಪು, ಸಾಕ್ಸ್‌ ಗಳಲ್ಲಿ ಬಚ್ಚಿಟ್ಟು ಸಾಗಿಸಲಾಗುತ್ತಿತ್ತು.

ಇನ್ನೊಂದು ಪ್ರಕರಣದಲ್ಲಿ ನ.5ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಕೇರಳ ಮೂಲದ ಪ್ರಯಾಣಿಕ ಚಾಕಲೇಟ್‌ ರೂಪದಲ್ಲಿ ಚಿನ್ನದ ಪೌಡರ್‌ ಮಾಡಿಕೊಂಡು ಬಂದು ಸಿಕ್ಕಿಬಿದ್ದಿದ್ದಾನೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕನ ಟ್ರಾಲಿ ಬ್ಯಾಗನ್ನು ಕಸ್ಟಮ್ಸ್‌ ಅಧಿಕಾರಿಗಳು ಸ್ಕ್ಯಾನ್‌ ಮಾಡಿ ಸಂಶಯ ಬಂದಿದ್ದರಿಂದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಟಿಫ್ನಿ ಎಕ್ಲೇರ್ಸ್‌ ಹೆಸರಿನ ಚಾಕಲೇಟ್‌ ಪ್ಯಾಕೆಟ್‌ ಕಂಡುಬಂದಿದೆ. ಚಾಕಲೇಟ್‌ ತೆರೆದು ನೋಡಿದಾಗ ಹಳದಿ ಬಣ್ಣದ ಪೌಡರ್‌ ಕಂಡು ಬಂದಿತ್ತು. 24 ಕ್ಯಾರೆಟ್‌ ಶುದ್ಧ ಚಿನ್ನವನ್ನು ಪೌಡರ್‌ ರೂಪಕ್ಕಿಳಿಸಿ ಬೇರೊಂದು ಹುಡಿಯ ಜೊತೆಗೆ ಮಿಕ್ಸ್‌ ಮಾಡಿ, ಬೆಳ್ಳಿಯ ಕಲರಿನ ಪ್ಲಾಸ್ಟಿಕ್‌ ಪೇಪರಿನಲ್ಲಿ ಕಟ್ಟಿಡಲಾಗಿತ್ತು.

ಈ ರೀತಿಯ ಏಳು ಚಾಕಲೇಟ್‌ ಪತ್ತೆಯಾಗಿದ್ದು 420 ಗ್ರಾಮ್‌ ಚಿನ್ನ ಇರುವುದನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಇದರ ಮಾರುಕಟ್ಟೆಮೌಲ್ಯ 25,49,400 ರು. ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌