ಕನ್ನಡಪ್ರಭ ವಾರ್ತೆ ಅರಸೀಕೆರೆ
ಈ ನಡುವೆ ನಗರದ ಬಸವರಾಜೇಂದ್ರ ಪ್ರೌಢಶಾಲೆಯ ಆವರಣದಲ್ಲಿ ಇದ್ದ ನಗರಸಭೆಯ ಪಂಪ್‌ಹೌಸ್ ಕಟ್ಟಡವನ್ನು ತೆರವುಗೊಳಿಸಲು ಅಂದು ನಗರಸಭೆ ಅಧ್ಯಕ್ಷರಾಗಿದ್ದ ಗಿರೀಶ್ ಅವರು ಸಹಕಾರ ಕೊಡುವ ಮೂಲಕ ನಗರಸಭೆ ಆಸ್ತಿ ನಷ್ಟಕ್ಕೆ ಉದ್ದೇಶಪೂರ್ವಕವಾಗಿ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ, ಅಂದು ನಗರಸಭೆಯ ಆಯುಕ್ತರು ಮೈಸೂರು ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನ ವಿಚಾರಣೆ ನಡೆಸಿದ ಪೀಠವು ಗಿರೀಶ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಅಷ್ಟೇ ಅಲ್ಲದೆ ನಗರಸಭೆ ಸದಸ್ಯತ್ವದಿಂದಲೂ ವಜಾ ಮಾಡಿತ್ತು. ಇದನ್ನು ಗಿರೀಶ್ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಹೈಕೋರ್ಟ್ ಕೂಡ ಗಿರೀಶ್ ಅವರ ಪ್ರಸ್ತಾವನೆಯನ್ನು ತಿರಸ್ಕರಿಸಿ ಮೈಸೂರು ವಿಭಾಗಿಯ ಪೀಠವು ನೀಡಿದ್ದ ತೀರ್ಪನ್ನೇ ಎತ್ತಿ ಹಿಡಿದಿದ್ದರಿಂದ ಗಿರೀಶ್ ಅವರು ತಮ್ಮ ನಗರಸಭೆ ಸದಸ್ಯತ್ವವನ್ನು ಕಳೆದುಕೊಂಡಿದ್ದು ಕ್ಷೇತ್ರ ರಾಜಕಾರಣದಲ್ಲಿ ದೊಡ್ಡ ಮಠದ ಚರ್ಚೆಗೆ ಕಾರಣವಾಗಿತ್ತು.ಈ ನಡುವೆ 2024ರಲ್ಲಿ ನಗರಸಭೆಯ ಎರಡನೆಯ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುವಷ್ಟರಲ್ಲಿ ಕ್ಷೇತ್ರ ರಾಜಕಾರಣದಲ್ಲಿ ಬಹಳಷ್ಟು ಬದಲಾವಣೆಗಳಗಿದವು ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಶಾಸಕ ಶಿವಲಿಂಗೇಗೌಡ ಜೆಡಿಎಸ್‌ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರೆ ಮತ್ತೊಂದೆಡೆ ಬಿಜೆಪಿ ಮತ್ತು ಜೆಡಿಎಸ್ ಜೊತೆಯಾಗಿದ್ದರಿಂದ ನಗರಸಭೆ ಒಳಗೆ ಮತ್ತು ಹೊರಗೆ ಮತ್ತೊಂದು ರೀತಿಯ ನಾಟಕೀಯ ಬೆಳವಣಿಗೆಗಳಿಗೆ ವೇದಿಕೆಯಾಯಿತು. ಮೀಸಲಾತಿ ಆಧಾರದ ಮೇಲೆ ನಾವು ತಟಸ್ಥ ಜೆಡಿಎಸ್ ಸದಸ್ಯರು ಎಂದು ಹೇಳಿಕೊಂಡು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಹಿರಿಯ ಸದಸ್ಯ ಎಂ ಸಮೀವುಲ್ಲಾ ಮತ್ತು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಮನೋಹರ ಮೇಸ್ತ್ರಿ ನಾಮಪತ್ರ ಸಲ್ಲಿಸಿದರೆ ಜೆಡಿಎಸ್ ಪಕ್ಷದ ಹೈಕಮಾಂಡ್ ಸೂಚನೆ ಹಾಗೂ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ ನಾನು ಎಂದು ಸುಜಾತ ರಮೇಶ್ ಸ್ಪರ್ಧೆ ಮಾಡಿದ್ದರೂ ಚುನಾವಣೆಯಲ್ಲಿ ಸಮೀವುಲ್ಲಾ ಅಧ್ಯಕ್ಷ ಹಾಗೂ ಮನೋಹರ ಮೇಸ್ತ್ರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾನು ಚುನಾವಣೆ ಕಣದಲ್ಲಿದ್ದರೂ ಪಕ್ಷದ ವಿಪ್‌ನ್ನು ಉಲ್ಲಂಘಿಸಿ ಮತ ಚಲಾಯಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಸಮೀವುಲ್ಲಾ ಮತ್ತು ಮನೋಹರ್ ಮೇಸ್ತ್ರಿ ಅವರನ್ನು ವಜಾ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಸುಜಾತ ರಮೇಶ್ ಅವರ ಅರ್ಜಿ ವಿಚಾರಣೆ ನಡೆಸಿರುವ ಜಿಲ್ಲಾಧಿಕಾರಿಗಳು ಸುಜಾತ ರಮೇಶ್ ಅವರ ಅರ್ಜಿಯನ್ನು ವಜಾ ಮಾಡಿದೆ.
ಹೇಳಿಕೆ:1 ಕುರುಡು ಕಾಂಚಾಣ ಕುಣಿಯುತ್ತಲಿದೆ ಕಾಲಿಗೆ ಸಿಕ್ಕೋರ ತುಳಿಯುತ್ತಲಿದೆ. ಇದು ಪ್ರಸ್ತುತ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಾಗಿದೆ. ಇಬ್ಬರ ಸ್ವಾರ್ಥ ರಾಜಕಾರಣಕ್ಕಾಗಿ ನಗರ ಹಾಗೂ ಕ್ಷೇತ್ರದ ಅಭಿವೃದ್ಧಿ ಬಲಿಯಾಗುತ್ತಿದೆ. - ಗಿರೀಶ್ ನಗರಸಭೆ ಮಾಜಿ ಅಧ್ಯಕ್ಷಹೇಳಿಕೆ: 2ಜೆಡಿಎಸ್‌ನಿಂದ ಗೆದ್ದು ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಜಯವಾಗರಬಹುದು. ನಮ್ಮ ಹೋರಾಟ ನಿಲ್ಲುವುದಿಲ್ಲ ನಮ್ಮ ಪಕ್ಷದ ವರಿಷ್ಠ ಮಾರ್ಗದರ್ಶನದಲ್ಲಿ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತೇವೆ. - ಸುಜಾತ ರಮೇಶ್, ನಗರಸಭೆ ಸದಸ್ಯಹೇಳಿಕೆ: 3 ದೇಶವನ್ನು ಮುನ್ನಡೆಸುತ್ತಿರುವುದು ಚುನಾಯಿತ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಅಲ್ಲ. ದೇಶ ಮುನ್ನಡೆಯುತ್ತಿರುವುದು ಸಂವಿಧಾನದ ಚೌಕಟ್ಟಿನಲ್ಲಿ. ಕಾನೂನು ಕಟ್ಟಲೆಗಳಿಗಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ಜನಪ್ರತಿನಿಧಿಗಳಾಗಿರುವ ನಾವು ಅರಿತು ನಡೆಯಬೇಕು. ಎಂ.ಸಮೀವುಲ್ಲಾ, ನಗರಸಭೆ ಅಧ್ಯಕ್ಷ