ಕನ್ನಡಪ್ರಭ ವಾರ್ತೆ ಕಲಬುರಗಿ
ಕಲೆಗಳು ಸಮಾಜಕ್ಕೆ ಮೆರುಗು ನೀಡುತ್ತವೆ. ಆ ನಿಟ್ಟಿನಲ್ಲಿ ಅವುಗಳ ಪಾತ್ರ ಹಿರಿದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಯಲ ಬೆಳಕು ಪ್ರೊ. ವಿ.ಜಿ. ಅಂದಾನಿ ಅವರ 75ನೇ ವರ್ಷದ ವಜ್ರಮಹೋತ್ಸವ ಸಮಾರಂಭ ಅಂಗವಾಗಿ ಬಯಲ ಬೆಳಕು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಸ್ಥೆಗಳನ್ನು ಶ್ರದ್ಧೆಯಿಂದ ಕಟ್ಟಬೇಕಾಗುವ ಅವಶ್ಯಕತೆ ಸಾರಿದ ಅವರು ಸಂಸ್ಥೆಗಳ ಸಂರಕ್ಷಣೆಯ ಹೊಣೆ ಮಹತ್ವದ್ದು, ಅಂದಾನಿ ಅವರ ಅಭಿನಂದನಾ ಗ್ರಂಥವನ್ನು ಪ್ರಶಂಸಿದ ಅವರು ಈ ಕಾರ್ಯಕ್ರಮ ಸುತ್ತಾರ್ಹ ಎಂದರು.ಕಲಬುರಗಿ ನೂತನ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು.
ಬಯಲು ಬೆಳಕು ಅಭಿನಂದನಾ ಗ್ರಂಥ ಹಾಗೂ ಪ್ರೊ ವಿಜಿ ಅಂದಾನಿ ಕುರಿತು ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಎಂ.ಎಸ್. ಮೂರ್ತೂರ್ ಮಾತನಾಡಿ, ಮೌಲ್ಯಧಾರಿತ ಹಾಗೂ ನೇತಿಕ ಪ್ರಜ್ಞೆಯುಳ್ಳ ಕಲೆಗೆ ಘನತೆ ಬರುತ್ತದೆ. ಅಂದಾನಿ ಅವರು ಕಲಾ ವ್ಯಾಮೋಹಿ ಆಗಿದ್ದು ಕಲಾ ಕ್ಷೇತ್ರಕ್ಕೆ ಅಮೋಘವಾದ ಕೊಡುಗೆ ನೀಡುವಲ್ಲಿ ಅವಿರತ ಶ್ರಮಪಟ್ಟಿದ್ದಾರೆ ಎಂದರು. ಬಯಲು ಬೆಳಕು ಗ್ರಂಥಗಳಲ್ಲಿ ಮೂಡಿಬಂದಿರುವ ಲೇಖನಗಳು ಮಾರ್ಗದರ್ಶನವಾಗಿವೆ ಎಂದರು ತೆಲಂಗಾಣ ರಾಜ್ಯ ಎಂ.ಎಲ್.ಸಿ. ಸುರಭಿ ವಾಣಿ ದೇವಿ ಅಂದಾನಿ ಸಾಧನೆ ಪ್ರಶಂಸಿದರು.ವೇದಿಕೆ ಮೇಲೆ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಮಪ್ರಭು ಪಾಟೀಲ, ದಿ ಐಡಿಯಲ್ ಫೈನ್ ಆರ್ಟ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಾಟೀಲ, ಗೌತಮ ಅಂದಾನಿ ಇದ್ದರು. ಸಮಾರಂಭದಲ್ಲಿ ಹಿರಿಯ ಚಿತ್ರಕಲಾವಿದ ಡಾ ಜೆಎಸ್ ಖಂಡೇರಾವ ಹಾಗೂ ಕಲಾ ಪೋಷಕ ಶರಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು.
ಚಿತ್ರಕಲಾ ಸ್ಪರ್ಧೆ ವಿಜೇತರು: 5ರಿಂದ 7 ನೇತರಗತಿ ಸೇಡಂ ತಾಲೂಕಿನ ಆದರ್ಶ ವಿದ್ಯಾಲಯ ಗಂಗೋತ್ರಿ ಮಲ್ಲಿಕಾರ್ಜುನ, ಕಲಬುರಗಿ ಎನ್‌ವಿ ಆಕ್ಟ್ ಇಂಟರನ್ಯಾಷನಲ್ ಶಾಲೆ ಸಂಜನಾ ಮನ್ನೇರಿ, ಕಲಬುರಗಿ ಎಸ್ ಬಿಆರ್ ಸೃಜನ ಎಂ ನರೋಣ. 8ರಿಂದ10ನೇ ತರಗತಿ ಚಿತ್ತಾಪುರ ತಾಲೂಕಿನ ಎಂಡಿಆರೆಸ್ ಶಿವಕುಮಾರ, ಕಲಬುರಗಿ ಎಸ್ ಆರ್ ಎನ್ ಮೆಹತಾ ಸಿಬಿಎಸ್ ಶಾಲೆ ವಿನಾಯಕ ಬಿ.ಕಲಬುರಗಿ ಆರ್ಯನ್ ಇಂಗ್ಲಿಷ್ ಮಾಧ್ಯಮ ಶಾಲೆ ವಾತ್ಸಲ್ಯ., 11 ಮತ್ತು 12ನೇ ತರಗತಿ ಕಲಬುರಗಿ ಎಸ್ ಬಿಆರ್ ಪಿಯು ಕಾಲೇಜ ಅದೀತಿ ರಾಜ್ಯ ಮಟ್ಟದ ಚಿತ್ರಕಲಾ ಮಹಾವಿದ್ಯಾಲಯ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆ ಪ್ರಶಸ್ತಿ ವಿಜೇತರು.