ವೇಣುವಾದನ ಕಾರ್ಯಕ್ರಮ
ರಾಮನಾಥಪುರ: ಸಂಗೀತದ ಕಂಪು ನಾಡಿನಲ್ಲೆಡೆ ಪಸರಿಸುವಂತಾಗಬೇಕು. ಸಂಗೀತ ಕಲೆಯನ್ನು ಪೋಷಿಸಿ ಬೆಳಸಬೇಕಾಗಿದೆ. ಈ ಆಸೆ ಈಡೆರಬೇಕಾದರೆ ಸರ್ಕಾರ ಹೆಚ್ಚು ಒತ್ತು ನೀಡುವಂತೆ ಮಾಜಿ ಸಚಿವ ಹಾಗೂ ಶಾಸಕ ಎ.ಮಂಜು ಒತ್ತಾಯಿಸಿದರು.
ರಾಮನಾಥಪುರ ಶ್ರೀರಾಮ ಸೇವಾ ಸಮಿತಿ ವತಿಯಂದ ಇಲ್ಲಿಯ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಕೊನೆಯ ದಿನದ ವೇಣುವಾದನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದ ನಂತರ ಮಾತನಾಡಿ, ‘ರಾಮನಾಥಪುರದ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ಸುಮಾರು ಶತಮಾನದಿಂದ ಇಂತಹ ಸಂಗೀತ, ಧಾರ್ಮಿಕ ಕಾರ್ಯಕ್ರಮಗಳು, ಪೂಜಾಕೈಂಕರ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.‘ಪ್ರತಿವರ್ಷವೂ 10 ದಿವಸಗಳಲ್ಲಿ ನಮಗೆ ಒಂದು ದಿವಸ ಮಹಾಪೂಜೆ ಸಂಗೀತ ಕಾರ್ಯಕ್ರಮ ಹಾಗೂ ದಾಸೋಹದ ವ್ಯವಸ್ಥೆ ಮಾಡಲು ಅನುವು ಮಾಡಿಕೊಟ್ಟಿದ್ದು ಇದರಿಂದ ನಮಗೂ ಸಂತೋಷವಾಗಿದೆ. ಇಂತಹ ಸಂಗೀತ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಉಲ್ಲಾಸ, ಸಂತೋಷ ನೀಡುತ್ತದೆ. 10 ದಿನ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಂಗೀತ ವಿದ್ವಾಂಸರನ್ನು ಕರೆಸಿ ಇಂತಹ ಸಂಗೀತೋತ್ಸವ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಸಿದರು.
ದೇವಾಲಯದ ಮುಖ್ಯ ಅರ್ಚಕ ಶ್ರೀನಿವಾಸ್ ಪೂಜಾ ಕೈಂಕರ್ಯ ನಡೆಸಿಕೊಟ್ಟರು.
ರಾಮನಾಥಪುರ ಸಂಗೀತೋತ್ಸವದ ಕಾರ್ಯಕ್ರಮದಲ್ಲಿ ಶ್ರೀರಾಮ ಸಮಿತಿಯವರು ಶಾಸಕ ಎ.ಮಂಜು ಹಾಗೂ ಪತ್ನಿ ತಾರಾಮಂಜು ಅವರನ್ನು ಗೌರವಿಸಿದರು.