ಅಂತರ್ಜಲ ಸಂರಕ್ಷಣೆ: ಜಿಲ್ಲಾ ಮಟ್ಟದ ಕಲಾ ಚಿತ್ರ ಸ್ಪರ್ಧೆ

KannadaprabhaNewsNetwork |  
Published : Aug 18, 2026, 03:00 AM IST
ಅಂತರ್ಜಲ ಸಂರಕ್ಷಣೆ ಬಗ್ಗೆ ಕಲಾ ಚಿತ್ರ ಸ್ಪರ್ಧೆ ನಡೆಯಿತು | Kannada Prabha

ಸಾರಾಂಶ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಸೂಚನೆಯಂತೆ ಜಿಲ್ಲಾ ಅಂತರ್ಜಲ ಕಚೇರಿ ದ.ಕ. ಜಿಲ್ಲೆ ವತಿಯಿಂದ ‘ನಮ್ಮ ಭೂಮಿ- ನಮ್ಮ ನೀರು -ನಮ್ಮ ಶಕ್ತಿ’ ವಿಷಯದ ಬಗ್ಗೆ ಅಂತರ್ಜಲ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕಲಾ ಚಿತ್ರ ಸ್ಪರ್ಧೆ ನಗರದ ಕೊಡಿಯಾಲ್‌ಬೈಲ್ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ನಡೆಯಿತು.

ಮಂಗಳೂರು: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಸೂಚನೆಯಂತೆ ಜಿಲ್ಲಾ ಅಂತರ್ಜಲ ಕಚೇರಿ ದ.ಕ. ಜಿಲ್ಲೆ ವತಿಯಿಂದ ‘ನಮ್ಮ ಭೂಮಿ- ನಮ್ಮ ನೀರು -ನಮ್ಮ ಶಕ್ತಿ’ ವಿಷಯದ ಬಗ್ಗೆ ಅಂತರ್ಜಲ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕಲಾ ಚಿತ್ರ ಸ್ಪರ್ಧೆ ನಗರದ ಕೊಡಿಯಾಲ್‌ಬೈಲ್ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ನಡೆಯಿತು.ಸಂತ ಅಲೋಶಿಯಸ್ ಪ್ರೌಢಶಾಲೆ ಪ್ರಾಂಶುಪಾಲ ಫಾ. ಜಾನ್ಸನ್ ಪಿಂಟೋ ಉದ್ಘಾಟಿಸಿ ಮಾತನಾಡಿ, ನಮ್ಮ ಪರಿಸರದಲ್ಲಿ ಆಗುತ್ತಿರುವಂತಹ ಅತಿವೃಷ್ಟಿ ಅನಾವೃಷ್ಟಿ ಮತ್ತು ಅಂತರ್ಜಲದ ಕುಸಿತಕ್ಕೆ ನಮ್ಮ ಕೆಲವು ಕೃತ್ಯಗಳೇ ಕಾರಣವಾಗಿದೆ. ಆದ್ದರಿಂದ ಅದನ್ನು ಸರಿಪಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಅಂತರ್ಜಲ ಕಚೇರಿ ಹಿರಿಯ ಭೂ ವಿಜ್ಞಾನಿ ಶೇಕ್ ದಾವೂದ್ ಮಾತನಾಡಿ, ನಮ್ಮ ನೆಲ ಜಲವನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ಉಳಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಚಿತ್ರಕಲೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು ಎಂದರು.

ಶಿಕ್ಷಣಾಧಿಕಾರಿ ಮನೋರಮ ಆರ್. ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿನ ಮಹತ್ವ ಹಿಂದಿನಿಂದಲೂ ನಮ್ಮ ಪೂರ್ವಜರು ಅರಿತಿರುವುದರಿಂದಲೇ ನದಿಗಳನ್ನು ದೇವತೆಗಳೆಂದು ಪರಿಗಣಿಸಿ, ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂಕಲ್ಪಿಸುವಾಗ ಗಂಗೆ, ಯಮುನೆ ಇತ್ಯಾದಿ ನದಿಗಳ ಸ್ಮರಣೆ ಮಾಡುವ ಕ್ರಮ ಬೆಳೆದು ಬಂದಿದೆ. ನೀರಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ಆಹಾರ, ಆಮ್ಲಜನಕ ನೀರಿನಿಂದಲೇ ಸಾಧ್ಯವಾಗಿದೆ. ಅಂತಹ ಅಮೂಲ್ಯ ಸಂಪತ್ತನ್ನು ಉಳಿಸಲು ಜಾಗೃತಿ ಮೂಡಿಸುವ ಈ ಕಾರ್ಯಕ್ರಮ ಯಶಸ್ವಿಯಾಗಲಿ, ಉತ್ತಮ ಜಾಗೃತಿ ಮೂಡುವ ಕಲಾಕೃತಿ ಚಿತ್ರ ರೂಪದಲ್ಲಿ ಮೂಡಿಬರಲಿ ಎಂದರು.

ಅಲೋಶಿಯಸ್ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಲ್ಯಾನ್ಸಿ ಡಿಸೋಜ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಇದ್ದರು.

ಜಿಲ್ಲಾ ನೋಡಲ್ ಅಧಿಕಾರಿ ದೇವದಾಸ್ ಕೆ. ಕಾರ್ಯಕ್ರಮ ಸಂಯೋಜಿಸಿದ್ದರು. ವಿಷಯ ಪರಿವೀಕ್ಷಕ ಲಕ್ಷ್ಮೀನಾರಾಯಣ ಪ್ರಸ್ತಾವನೆಗೈದರು. ಸಂಸ್ಥೆಯ ಚಿತ್ರಕಲಾ ಶಿಕ್ಷಕ ಜಾನ್ ಚಂದ್ರನ್ ನಿರೂಪಿಸಿದರು. ಶಿಕ್ಷಣ ಸಂಯೋಜಕಿ ಅನಿತಾ ವಂದಿಸಿದರು.

ಜಿಲ್ಲೆಯ 7 ವಲಯಗಳಿಂದ ವಿಜೇತರಾದ 21 ವಿದ್ಯಾರ್ಥಿಗಳಿಗೆ ಕಲಾಚಿತ್ರ ಸ್ಪರ್ಧೆ ಏರ್ಪಡಿಸಲಾಯಿತು. ವಿವಿಧ ವಲಯಗಳ ಚಿತ್ರಕಲಾ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ಬಂಟ್ವಾಳ, ಹರೀಶ್ ಕುಮಾರ್ ಮಂಗಳೂರು ದಕ್ಷಿಣ, ಪ್ರಸನ್ನ ಕುಮಾರ್ ಮಂಗಳೂರು ಉತ್ತರ ವಲಯ ತೀರ್ಪುಗಾರರಾಗಿ ಸಹಕರಿಸಿದರು.

ಫಲಿತಾಂಶ: ಪ್ರಥಮ ಸ್ಥಾನ ಲಿಖಿತಾ ಕೆ. (ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ, ತೆಂಕಿಲ ಪುತ್ತೂರು), ದ್ವಿತೀಯ ಸ್ಥಾನ ಆದ್ಯಾ ಪಿ.ಬಿ. (ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕುಕ್ಕಾಜೆ. ಬಂಟ್ವಾಳ), ತೃತೀಯ ಸ್ಥಾನ ಅಜಿತ್ ಎಸ್ ಕಾಮತ್, ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಕಿಲ್ಪಾಡಿ. ಮಂಗಳೂರು ಉತ್ತರ).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ಬಿ.ನಾಗೇಂದ್ರ ವಜಾಕ್ಕೆ ಆಗ್ರಹ
ರೋಗ ನಿರೋಧಕ ಶಕ್ತಿ ವೃದ್ಧಿಗೆ ಇಮ್ಯೂನಿಟಿ ಬೂಸ್ಟರ್ ಕಿಟ್‌ ಬಳಸಿ