ಕಲಾವಿದರು-ಸಂಘಟನೆಯಿಂದ ಕಲೆ ಉಳಿವು: ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ

KannadaprabhaNewsNetwork |  
Published : Jan 20, 2024, 02:03 AM IST
ಫೋಟೋ ಜ.೧೯ ವೈ.ಎಲ್.ಪಿ. ೦೧ | Kannada Prabha

ಸಾರಾಂಶ

ಯಕ್ಷಗಾನದಂತಹ ಶ್ರೇಷ್ಠ ಕಲೆ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ. ಈ ಹಿನ್ನೆಲೆಯಲ್ಲಿ ಕಲಾಸೇವೆಗಾಗಿ ಪರಿಶ್ರಮ ಪಡುವ ಸಂಘಟನೆಗಳೊಂದಿಗೆ ಕಲಾಭಿಮಾನಿಗಳು ಕೈಜೋಡಿಸಬೇಕು.

ಯಲ್ಲಾಪುರ

ಕಲೆ ಉಳಿಸಿ, ಬೆಳೆಸಲು ಕ್ರಿಯಾಶೀಲ ಸಂಘಟನೆ, ಕಲಾವಿದರು ಹಾಗೂ ಕಲಾಭಿಮಾನಿಗಳು ಒಂದಾದರೆ ಮಾತ್ರ ಸಾಧ್ಯ ಎಂದು ಟಿಎಂಎಸ್‌ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.ಅವರು ತಾಲೂಕಿನ ಕರಡಿಪಾಲ್‌ನಲ್ಲಿ ಇಬ್ಬನಿ ಫೌಂಡೇಶನ್ ಮಾಗೋಡ ಹಾಗೂ ಜನಪ್ರಿಯ ಟ್ರಸ್ಟ್ ಕಂಚನಳ್ಳಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಯಕ್ಷವೃಕ್ಷ-೨೦೨೪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯಕ್ಷಗಾನದಂತಹ ಶ್ರೇಷ್ಠ ಕಲೆ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ. ಈ ಹಿನ್ನೆಲೆಯಲ್ಲಿ ಕಲಾಸೇವೆಗಾಗಿ ಪರಿಶ್ರಮ ಪಡುವ ಸಂಘಟನೆಗಳೊಂದಿಗೆ ಕಲಾಭಿಮಾನಿಗಳು ಕೈಜೋಡಿಸಬೇಕು ಎಂದರು.ತಾಳಮದ್ದಲೆ ಅರ್ಥಧಾರಿ ನರಸಿಂಹ ಭಟ್ಟ ಕುಂಕಿಮನೆ ಹಾಗೂ ಪ್ರಸಿದ್ಧ ಚಂಡೆವಾದಕ ಪ್ರಮೋದ ಹೆಗಡೆ ಕಬ್ಬಿನಗದ್ದೆ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಡಾ. ಶಿವರಾಮ ಭಾಗ್ವತ ಮಣ್ಕುಳಿ ಅಭಿನಂದನಾ ಮಾತನಾಡಿದರು. ಯಕ್ಷವೃಕ್ಷ ಅಭಿಯಾನವನ್ನು ಪತ್ರೆಗಿಡ ನೀಡುವುದರೊಂದಿಗೆ ಚಾಲನೆ ನೀಡಲಾಯಿತು.ಎಲ್‌ಎಸ್‌ಎಂಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಅಧ್ಯಕ್ಷತೆ ವಹಿಸಿದ್ದರು. ಟಿಎಂಎಸ್‌ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಗ್ರಾಪಂ ಅಧ್ಯಕ್ಷೆ ಭವಾನಿ ಸಿದ್ದಿ, ಸದಸ್ಯ ಟಿ.ಆರ್. ಹೆಗಡೆ, ಪತ್ರಕರ್ತ ನರಸಿಂಹ ಸಾತೊಡ್ಡಿ, ಶ್ರೀನಿವಾಸ ಕೋಡ್ನಗುಡ್ಡೆ, ಎನ್.ಎಂ. ಹೆಗಡೆ ಹಾದಿಮನೆ, ಗಜಾನನ ಕೋಣೆಮನೆ, ಬ್ಬಣ್ಣ ಕಂಚಗಲ್, ಇಬ್ಬನಿ ಫೌಂಡೇಶನ್ ಅಧ್ಯಕ್ಷ ವಿ.ಎನ್. ಹೆಗಡೆ ಹಾದಿಮನೆ, ಜನಪ್ರಿಯ ಟ್ರಸ್ಟ್ ಅಧ್ಯಕ್ಷ ಮಹೇಶ ಭಟ್ಟ ಕಂಚನಳ್ಳಿ, ಮಂಜುನಾಥ ಜೋಶಿ ಇದ್ದರು.ಆನಂತರ ಪ್ರಸಿದ್ಧ ಕಲಾವಿದರು ಪ್ರಸ್ತುತಪಡಿಸಿದ ಮಾರುತಿ ಪ್ರತಾಪ ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ಸುರೇಶ ಶೆಟ್ಟಿ, ಅನಂತ ಹೆಗಡೆ ದಂತಳಿಗೆ ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆವಾದಕರಾಗಿ ಪ್ರಮೋದ ಹೆಗಡೆ ಕಬ್ಬಿನಗದ್ದೆ ಕಾರ್ಯನಿರ್ವಹಿಸಿದರು. ಮುಮ್ಮೇಳದ ಕಲಾವಿದರಾಗಿ ಗೋಪಾಲಆಚಾರಿ ತೀರ್ಥಹಳ್ಳಿ (ಕೃಷ್ಣ), ಭಾಸ್ಕರ ಗಾಂವ್ಕರ ಬಿದ್ರೆಮನೆ (ಬಲರಾಮ), ಸದಾಶಿವ ಮಲವಳ್ಳಿ (ಸತ್ಯಭಾಮೆ), ಶ್ರೀಧರ ಭಟ್ಟ ಕಾಸರಕೋಡ (ವಿದೂಷಕ), ಶಶಾಂಕ ಪಟೇಲ (ಹನುಮಂತ), ಮಂಜುನಾಥ ಹೆಗಡೆ ಹಿಲ್ಲೂರು (ನಾರದ), ದೀಪಕ ಭಟ್ಟ ಕುಂಕಿ (ಸಖಿ) ವಿವಿಧ ಪಾತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ