ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಪೂರ್ಣ ಸತ್ಯವಲ್ಲ

KannadaprabhaNewsNetwork |  
Published : Sep 14, 2025, 01:06 AM IST
ಅರಿಹಂತರ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಪರಿಪೂರ್ಣ ಸತ್ಯವಲ್ಲ. ನೋಡಿಕೊಂಡು ಹೋದರೆ ಅದು ನಿಮ್ಮ ದಿಕ್ಕನ್ನೆ ತಪ್ಪಿಸುತ್ತದೆ. ವಿದ್ಯಾರ್ಥಿಗಳು ಜಾಣನಾದರೆ ಸಾಲದು ಬುದ್ಧಿವಂತನಾಗಬೇಕು. ಜಾಣತನ ಕಾಲೇಜಿನ ಪಠ್ಯ ಪುಸ್ತಕಗಳ ವಿಷಯಕ್ಕೆ ಸಂಬಂಧಿಸಿದರೆ ನೀವು ಏನನ್ನು ಸಾಧಿಸಿದಂತೆ ಆಗುವುದಿಲ್ಲ. ಬುದ್ಧಿವಂತನಾದರೆ ನೀವು ಜೀವನದಲ್ಲಿ ಗೆಲುವನ್ನು ಸಾಧಿಸಬಹುದು ಎಂದು ಡಿವೈಎಸ್ಪಿ ಬಾಹುಬಲಿ ನಂದಗಾವಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಪರಿಪೂರ್ಣ ಸತ್ಯವಲ್ಲ. ನೋಡಿಕೊಂಡು ಹೋದರೆ ಅದು ನಿಮ್ಮ ದಿಕ್ಕನ್ನೆ ತಪ್ಪಿಸುತ್ತದೆ. ವಿದ್ಯಾರ್ಥಿಗಳು ಜಾಣನಾದರೆ ಸಾಲದು ಬುದ್ಧಿವಂತನಾಗಬೇಕು. ಜಾಣತನ ಕಾಲೇಜಿನ ಪಠ್ಯ ಪುಸ್ತಕಗಳ ವಿಷಯಕ್ಕೆ ಸಂಬಂಧಿಸಿದರೆ ನೀವು ಏನನ್ನು ಸಾಧಿಸಿದಂತೆ ಆಗುವುದಿಲ್ಲ. ಬುದ್ಧಿವಂತನಾದರೆ ನೀವು ಜೀವನದಲ್ಲಿ ಗೆಲುವನ್ನು ಸಾಧಿಸಬಹುದು ಎಂದು ಡಿವೈಎಸ್ಪಿ ಬಾಹುಬಲಿ ನಂದಗಾವಿ ಹೇಳಿದರು.ಅರಿಹಂತ ಕಾಲೇಜಿನಲ್ಲಿ ನಡೆದ ದತ್ತಿ ಉಪನ್ಯಾಸ ಹಾಗೂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ಅಪಾರವಾದ ಇತಿಹಾಸವಿದ್ದು, ಹಿಂದಿನ ರಾಜ ಮಹಾರಾಜರ ಆಸ್ಥಾನದ ಕವಿಗಳು ಜೈನರಾಗಿದ್ದರು. ವಿಶ್ರಾಂತ ಕುಲಪತಿ ಡಾ.ಹೆಚ್.ಬಿ.ವಾಲಿಕಾರ ಸುಮಾರು 16 ಜೈನ ಕವಿಗಳನ್ನು ಗುರುತಿಸಿ ಅವರ ಕೃತಿಗಳು ಜೈನ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯ, ಪೊನ್ನನ ಶಾಂತಿ ಪುರಾಣ, ರನ್ನನ ಅಜಿತ ಪುರಾಣ, ಗದಾಯುದ್ಧ, ನಾಗವರ್ಮನ ವರ್ಧಮಾನ ಪುರಾಣ, ಶಾಂತಿನಾಥನ ಸುಕಮಾರ ಚರಿತೆ, ನಾಗಚಂದ್ರನ ಮಲ್ಲಿನಾಥ ಪುರಾಣ, ರಾಮಚಂದ್ರ ಚರಿತೆ ಪುರಾಣ, ಬ್ರಹ್ಮಶಿವ ಸಮಯ ಪರೀಕ್ಷೆ, ನಯನಸೇನನ ಧರ್ಮಾಮೃತ ಸೇರಿ ಹೀಗೆ 16 ಜೈನ ಕವಿಗಳನ್ನು ಗುರುತಿಸಿದ್ದಾರೆ. ಅರಿಹಂತ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಮಹಾವೀರ ಸಗರಿ ಅವರು 32 ಜೈನ ಕವಿಗಳನ್ನು ಗುರುತಿಸಿದ್ದಾರೆ ಎಂದು ಹೇಳಿದರು.

ಅರಿಹಂತ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷರಾದ ಮಹಾವೀರ ಸಗರಿ ಮಾತನಾಡಿ, ದತ್ತಿ ದಾನಿಗಳ ಹೆಸರಿನಲ್ಲಿ ಪ್ರತಿ ವರ್ಷ ನಿರಂತರವಾಗಿ ಕಾರ್ಯಕ್ರಮ ಜರುಗಿಸುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಪ್ರಗತಿಪರ ರೈತ ಸುಭಾಷಗೌಡ ಪಾಟೀಲ ಮನಗೂಳಿ, ಮಹಾದಾನಿ ತವನಪ್ಪಬಾಬಾ ಮುತ್ತಿನ, ಅಲ್ಪಸಂಖ್ಯಾತರ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಅಪ್ಪಾಸಾಹೇಬ ಮುತ್ತಿನ, ಚಡಚಣದ ಉದ್ಯಮಿ ಗುಣಧರ ರಾಜೇಂದ್ರ ಮುತ್ತಿನ, ವರ್ಷಾ ಮುತ್ತಿನ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್.ಬಿ.ಕನ್ನೂರ, ಅಬ್ದುಲ್ ರೆಹಮನ್ ಬಿದರಕುಂದಿ, ರಾಜಶೇಖರ ಮ್ಯಾಗೇರಿ, ಬಸವರಾಜ ಕಟ್ಟಿಮನಿ, ಜೈನ ಸಮಾಜದ ಮುಂಖಡರಾದ ಜಿನದತ್ತ ಆಲದಿ, ಎ.ಟಿ.ತಂಗಾ ವಿಜಯಪುರ, ಗೋಮಟೇಶ್ವರ ಸಗರಿ, ಬಾಹುಬಲಿ ಗೋಗಿ, ಮಾಣಿಕ ಸಗರಿ, ಅಜೀತ ಗೊಂಗಡಿ, ಮಹಾವೀರ ಮಂಕಣಿ, ರಮೇಶ ದೊಡ್ಡಮನಿ, ಮಹಾವೀರ ದಶರಥ, ಹೀರಾಚಂದ ಅಳಗಿ, ಸುನಿಲ ಸಗರಿ, ಲಲಿತಾ ಸಗರಿ, ಸುನಿತಾ ಸಗರಿ, ನಮ್ರತಾ ಸಗರಿ, ಅಕ್ಷತಾ ಸಗರಿ ಹಾಗೂ ಪ್ರಾಚಾರ್ಯ ವಿಪುಲ್ ಸಗರಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಡಿಗೇರ ವಕೀಲರು ನಿರೂಪಿಸಿದರು, ರಾಜನಾರಾಯಣ ನಲವಡೆ ಪ್ರಾಸ್ತವಿಕ ನುಡಿಗಳನ್ನಾಡಿದರು, ಹೆಚ್.ಎಸ್.ಗೌಡರ ಸ್ವಾಗತಿಸಿದರು, ರೋಹಿಣಿ ನಾಯ್ಕೊಡಿ ವಂದಿಸಿದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ