ಧಾರವಾಡ: ಆಧುನಿಕ ಯುಗದಲ್ಲಿ ವೇಗವಾಗಿ ಹೆಚ್ಚು ಬಳಕೆಯಲ್ಲಿರುವ ಹಾಗೂ ಶೀಘ್ರವಾಗಿ ಜ್ಞಾನ ಹಂಚುತ್ತಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಈ ಕೃತಕ ಬುದ್ದಿಮತ್ತೆ (ಎಐ) ಕ್ರಿಯಾಶೀಲವಾಗಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಛಾಪು ಮೂಡಿಸಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.
ಬಳಸುವ ಕಾರ್ಯ ಗೊತ್ತಿರಲಿ:
ಎಐ ಮೂಲಕ ಎಂತಹ ಮಾಹಿತಿ ಸಹ ಪಡೆಯಬಹುದು. ಯಾವ ಮಾಹಿತಿ ಬೇಕು ಎಂಬುದನ್ನು ಸರಿಯಾಗಿ ಅದಕ್ಕೆ ಹೇಳುವ ಕಲೆ ಮಾತ್ರ ನಮಗೆ ಗೊತ್ತಿರಬೇಕು. ಕಲಿಯುವ ವಿಧಾನ ಬದಲಾಯಿಸಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹೆಚ್ಚು ಕೃತಕ ಬುದ್ದಿಮತ್ತೆ ಬಳಕೆಯಾಗುತ್ತಿದೆ. ಯಾವುದೇ ವಿಷಯದ ಬಗ್ಗೆ ಅಕ್ಷರಗಳ ಅಥವಾ ಬಾಯಿ ಮಾತು ಅಥವಾ ವಿಡಿಯೋ ಮೂಲಕವೂ ಈ ತಂತ್ರಜ್ಞಾನ ಕರಾರುವಕ್ಕಾಗಿ ಮಾಹಿತಿ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಣದ ಕಠಿಣ ಸವಾಲುಗಳನ್ನು ಐಎ ಸುಲಭವಾಗಿ ಬಗೆಹರಿಸುತ್ತದೆ. ಉನ್ನತ ಶಿಕ್ಷಣದಲ್ಲಿ ಇತ್ತೀಚೆಗೆ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳಿಗೆ, ಶಿಕ್ಷಕರು-ಉಪನ್ಯಾಸಕರಿಗೆ ಈ ತಂತ್ರಜ್ಞಾನ ಪ್ರಯೋಜನವಾಗುತ್ತಿದ್ದು, ಪಠ್ಯಕ್ರಮ ರಚನೆ, ಪಠ್ಯಕ್ಕೆ ಬೇಕಾದ ಮಾಹಿತಿ, ವರ್ಚುವಲ್ ಬೋಧನೆ ಹಾಗೂ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲೂ ಎಐ ತಂತ್ರಜ್ಞಾನ ಬಳಸುವಷ್ಟು ಕರಾರುವಕ್ಕಾಗಿದೆ ಎಂದು ಪ್ರಾತ್ಯಕ್ಷಿಕೆ ಮೂಲಕ ರವಿ ಹೆಗಡೆ ವಿವರಿಸಿದರು.ಸಾಕಷ್ಟು ಆ್ಯಪ್‌ಗಳಿವೆ:
ಕಲಿತರೂ ಅನಕ್ಷರಸ್ಥರು:
ಸಮ್ಮೇಳನಕ್ಕೆ ಚಾಲನೆ ನೀಡಿದ ಕರ್ನಾಟಕ ವಿವಿ ಪ್ರಭಾರ ಕುಲಪತಿ ಪ್ರೊ.ಜಯಶ್ರೀ ಎಸ್., ಕೋವಿಡ್ -19 ನಂತರ ಶಿಕ್ಷಣದಲ್ಲಿ ಹೆಚ್ಚು ಡಿಜಿಟಲ್ ತಂತ್ರಜ್ಞಾನ ಹಾಸುಹೊಕ್ಕಾಯಿತು. ಯಾವ ಹಂತದ ಶಿಕ್ಷಣ ಕಲಿತು ಡಿಜಿಟಲ್ ಜ್ಞಾನ ಹೊಂದದೇ ಇದ್ದರೆ ಆತ ಅನಕ್ಷರಸ್ಥ ಎನ್ನುವಂತಾಗಿದೆ. ಈಗಿನ ವಿದ್ಯಾರ್ಥಿಗಳು ಜಾಗತಿಕವಾಗಿ ಸ್ಪರ್ಧೆಯೊಡ್ಡಲು ಕಂಪ್ಯೂಟರ್, ಮೊಬೈಲ್, ಎಐ ತಂತ್ರಜ್ಞಾನದ ಮಾಹಿತಿ ಇರಲೇಬೇಕು. ಅಂದ ಮಾತ್ರಕ್ಕೆ ಡಿಜಿಟಲ್‌ಗೆ ಅಂಟಿಕೊಂಡು ಇರದೇ ಕಾಳಜಿಯಿಂದ ಬಳಸಲು ಸಲಹೆ ನೀಡಿದರು.ಕಾಲೇಜಿನ ಪ್ರಾಚಾರ್ಯ ಡಾ. ರಾಜಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸಂಯೋಜಕ ಪ್ರೊ.ಜೆ.ಪಿ.ಯಂಡಿಗೇರಿ, ಪ್ರೊ. ಪುಷ್ಪಾ ಬಸನಗೌಡರ, ಪ್ರೊ. ಸಿ.ಕೆ. ಹುಬ್ಬಳ್ಳಿ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬಸವರಾಜ ಆನೆಗುಂದಿ ವೇದಿಕೆ ಮೇಲಿದ್ದರು.
ಅಂದ ವಿದ್ಯಾರ್ಥಿ ಅಯ್ಯಪ್ಪ ಸ್ವಾಗತ ಗೀತೆ ಪ್ರಸ್ತುತಪಡಿಸಿದರು. ನಂತರ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನ ಕುರಿತು ಪ್ರಬಂಧ ಮಂಡಿಸಿದರು. ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಂಜೀವ ಮಾಲಗತ್ತಿ, ಪತ್ರಕರ್ತ ಬಸವರಾಜ ಹೊಂಗಲ ತಾಂತ್ರಿಕ ಗೋಷ್ಠಿಗಳನ್ನು ನಿರ್ವಹಿಸಿದರು.