ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮಾಕಾಪುರ ಗ್ರಾಮದ ಕಲಾವಿದ ವಿಜಯ ಕುಮಾರ ಸೋಪಿನಲ್ಲಿ ಶ್ರೀರಾಮನನ್ನು ರೂಪಿಸಿ ಗಮನ ಸೆಳೆದಿದ್ದಾರೆ.
ರಾಯಚೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆಯ ಸಮಯದಲ್ಲಿ ಭಕ್ತರು, ಕಲಾವಿದರು ಶ್ರೀರಾಮನ ಮೇಲಿನ ಅಭಿಮಾನ, ಭಕ್ತಿಯನ್ನು ತಮ್ಮದೇ ಆದ ರೀತಿಯಲ್ಲಿ ಹೊರಹಾಕುತ್ತಿದ್ದಾರೆ.
ಜಿಲ್ಲೆ ಲಿಂಗಸುಗೂರು ತಾಲೂಕಿನ ಮಾಕಾಪುರ ಗ್ರಾಮದ ಕಲಾವಿದ ವಿಜಯ ಕುಮಾರ ಅವರು 10 ರು. ಬೆಲೆಯ ಮೈ ಸೋಪಿನಲ್ಲಿ ಪ್ರಭು ಶ್ರೀರಾಮಲಲ್ಲಾ ಮೂರ್ತಿಯನ್ನು ರೂಪಿಸಿ ಭಕ್ತಿ ಮರೆದಿದ್ದಾರೆ. ಒಟ್ಟು 3 ಗಂಟೆಯಲ್ಲಿ ಗುಂಡುಪಿನ್ ಬಳಸಿ ಸೋಪಿನಲ್ಲಿ ಪ್ರಭು ಶ್ರೀರಾಮಚಂದ್ರರ ವಿನ್ಯಾಸವನ್ನು ಮೂಡಿಸಿದ್ದಾರೆ.21 ಸಾವಿರ ರಾಮ ನಾಮಗಳೊಂದಿಗೆ ಮೂಡಿಬಂದ ಸುಂದರ ಶ್ರೀರಾಮರಾಯಚೂರು: ದೇಶದೆಲ್ಲಡೆ ಅಯೋಧ್ಯೆ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣೆನೆ ಪ್ರಾರಂಭಗೊಂಡಿದೆ. ಲೋಕದೆಲ್ಲೆಡೆ ಶ್ರೀ ರಾಮನ ಭಕ್ತರು ವಿವಿಧ ರೀತಿಯಲ್ಲಿ ತಮ್ಮ ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ. ರಾಯಚೂರು ನಗರ ನಿವಾಸಿ ಎಂಎಸ್ಸಿ ವಿದ್ಯಾರ್ಥಿನಿಯಾಗಿರುವ ಅನುಷಾ ಕೀಲಿಯವರ ಕುಂಚದಲ್ಲಿ ಶ್ರೀರಾಮನ ಮೂರ್ತಿ ಅರಳಿದೆ. ಕರ್ಣ ಕುಂಡಲಿ, ಕಿರೀಟ, ಧನುರ್ಧಾರಿಯಾಗಿ ರಾಮ ಕಂಗೊಳಿಸುತ್ತಿದ್ದು, ಸುಮಾರು 21,500 ರಾಮ ನಾಮಗಳಿಂದ ಶ್ರೀ ರಾಮನ ಸುಂದರ ಚಿತ್ರ ಹೊರಹೊಮ್ಮಿದೆ. ಕೇವಲ ಮೂರು ದಿನಗಳಲ್ಲಿ ರಾಮ ಈ ಸುಂದರ ಆಕೃತಿ ಪಡೆದಿದ್ದಾನೆ. ರಾಮನಾಮ ಜಪದೊಂದಿಗೆ ಅಯೋಧ್ಯೆ ರಾಮಲಲ್ಲಾಗೆ ಇದನ್ನು ಸಮರ್ಪಿಸಲಾಗಿದೆ. ಇವರ ಭಕ್ತಿ ಮತ್ತು ಕುಶಲತೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇವರ ಪ್ರತಿಭೆಯ ಮೂಲಕ ಮತ್ತಷ್ಟು ದೇವರ ಚಿತ್ರ ಮೂಡಿಬರಲಿ ಎಂಬ ಆಶಯ ವ್ಯಕ್ತವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.