ಕಲಾವಿದ ಕೆ. ಗುಡ್ಡಪ್ಪ ಜೋಗಿಗೆ ನಾಗೇಗೌಡ ಪ್ರಶಸ್ತಿ

KannadaprabhaNewsNetwork |  
Published : Nov 13, 2024, 12:07 AM IST
ಫೋಟೋ 12 ಎ, ಎನ್, ಪಿ 1 ಆನಂದಪುರ  ಕಿನ್ನೂರಿ ಜಾನಪದ ಕಲಾವಿದ ಗುಡ್ಡಪ್ಪ ಜೋಗಿ | Kannada Prabha

ಸಾರಾಂಶ

ಆನಂದಪುರ ಸಮೀಪದ ಹೊಸೂರು ಗ್ರಾಮದ ಹಿರಿಯ ಕಿನ್ನೂರಿ ಜಾನಪದ ಕಲಾವಿದ ಕೆ. ಗುಡ್ಡಪ್ಪ ಜೋಗಿಗೆ ಕರ್ನಾಟಕ ಜಾನಪದ ಪರಿಷತ್ ರಾಜ್ಯ ಮತ್ತು ರಾಷ್ಟ್ರಮಟ್ಟದ ಅತ್ಯುತ್ತಮ ನಾಡೋಜ ಎಚ್.ಎಲ್. ನಾಗೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರು ಮೂಲತಃ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದವರು.

ಕನ್ನಡಪ್ರಭ ವಾರ್ತೆ ನಂದಪುರಆನಂದಪುರ ಸಮೀಪದ ಹೊಸೂರು ಗ್ರಾಮದ ಹಿರಿಯ ಕಿನ್ನೂರಿ ಜಾನಪದ ಕಲಾವಿದ ಕೆ. ಗುಡ್ಡಪ್ಪ ಜೋಗಿಗೆ ಕರ್ನಾಟಕ ಜಾನಪದ ಪರಿಷತ್ ರಾಜ್ಯ ಮತ್ತು ರಾಷ್ಟ್ರಮಟ್ಟದ ಅತ್ಯುತ್ತಮ ನಾಡೋಜ ಎಚ್.ಎಲ್. ನಾಗೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರು ಮೂಲತಃ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದವರು.

ಇವರು 1991 -92 ರಲ್ಲಿ ಸಾಕ್ಷರತಾ ಆಂದೋಲನ ನಿಮಿತ್ತ ಬಾ ತಂಗಿ ಬಾ ನಮ್ಮ ಶಾಲೆಗೆ ಎಂಬ ಹಾಡನ್ನು ಸ್ವಂತ ರಚನೆ ಮಾಡಿ, ಹಳ್ಳಿ ಹಳ್ಳಿಗಳಲ್ಲಿ ಹಾಡುತ್ತಾ ಹೆಣ್ಣು ಮಕ್ಕಳು ಶಿಕ್ಷಣ ಕಲಿಯುವಂತೆ ಜಾಗೃತಿ ಮೂಡಿಸಿದ್ದರು.

ದೂರದರ್ಶನ, ಆಕಾಶವಾಣಿ ಕಲಾವಿದರಾಗಿ, ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ಉಳಿವಿಗಾಗಿ ಜಾಗೃತಿ ಗೀತೆಗಳು, ಮಾರಣಾಂತಿಕ ರೋಗಗಳ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಜಾಗೃತಿ ಜಾಥ, ಹೊತ್ತು ಬರಬಾರದು ಎಂಬ ಕಾರ್ಯಕ್ರಮಗಳೊಂದಿಗೆ ಜಾನಪದ ಕಲೆಗಳಲ್ಲಿ ನಿರಂತರವಾಗಿಸೇವೆ ಸಲ್ಲಿಸುತ್ತಿರುವ ಇವರ ಸೇವೆಯನ್ನು ಗುರುತಿಸಿ ಸರ್ಕಾರ 1999-2000 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. 2014-15ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ದೊರೆತಿದ್ದು, ಹೀಗೆ ಹತ್ತು ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಕೆ. ಗುಡ್ಡಪ್ಪ ಜೋಗಿಯವರಿಗೆ ನವಂಬರ್ 22ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಾಡೋಜ ಎಚ್. ಎಲ್ ನಾಗೇಗೌಡ ಪ್ರಶಸ್ತಿ ಪ್ರದಾನವಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ