ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಲಾವಿದ ತಿಪ್ಪೇಶ್ ಆಯ್ಕೆ:ಸುರೇಶ್‌

KannadaprabhaNewsNetwork |  
Published : May 19, 2025, 12:04 AM IST
18ಕೆಕೆಡಿಯು1. | Kannada Prabha

ಸಾರಾಂಶ

ಕಡೂರು, ಬರುವ ಮೇ 26 ರಂದು ಕರ್ನಾಟಕ ಜಾನಪದ ಪರಿಷತ್ತಿನಿಂದ ಕಡೂರು ತಾಲೂಕಿನ ಚಿಕ್ಕನಲ್ಲೂರಿನಲ್ಲಿ ನಡೆಯಲಿರುವ ನಾಲ್ಕನೇ ಜಾನಪದ ಸಮ್ಮೇಳನದ ಅಧ್ಯಕ್ಷರನ್ನಾಗಿ ಜಾನಪದ ಕಲಾವಿದ ತಿಪ್ಪೇಶ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಬರುವ ಮೇ 26 ರಂದು ಕರ್ನಾಟಕ ಜಾನಪದ ಪರಿಷತ್ತಿನಿಂದ ಕಡೂರು ತಾಲೂಕಿನ ಚಿಕ್ಕನಲ್ಲೂರಿನಲ್ಲಿ ನಡೆಯಲಿರುವ ನಾಲ್ಕನೇ ಜಾನಪದ ಸಮ್ಮೇಳನದ ಅಧ್ಯಕ್ಷರನ್ನಾಗಿ ಜಾನಪದ ಕಲಾವಿದ ತಿಪ್ಪೇಶ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್‌ ತಿಳಿಸಿದರು.

ಮೇ 26 ರ ಸೋಮವಾರ ಚಿಕ್ಕನಲ್ಲೂರಿನ ಕಲ್ಲೇಶ್ವರ ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ಸಮ್ಮೇಳನ ನಡೆಯಲಿದೆ. ತಿಪ್ಪೇಶ್ ಜಾನಪದ ಕಲಾವಿದರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಅವರ ನಿವಾಸಕ್ಕೆ ಚಿಕ್ಕ ಮಗಳೂರು ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳೊಂದಿಗೆ ತೆರಳಿ ಸಾಂಪ್ರದಾಯಿಕವಾಗಿ ಆಹ್ವಾನ ನೀಡಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆ ದಿನದ ಎಲ್ಲ ಕಾರ್ಯಕ್ರಮಗಳನ್ನು ತಮ್ಮ ನೇತೃತ್ವದಲ್ಲಿ ನಡೆಸಿಕೊಡಲು ಮನವಿ ಮಾಡಲಾಯಿತು ಎಂದರು.

ಸಮ್ಮೇಳನದ ಮುಖ್ಯ ಅತಿಥಿಗಳಾದ ಸಮಿತಿ ಮುಖಂಡ ಕ್ಷೇತ್ರಪಾಲ್ ಮಾತನಾಡಿ, ಜನಪದ ಸಂಸ್ಕೃತಿ ಸಾಹಿತ್ಯ ಕಲೆ ಅಳಿವಿನಂಚಿನಲ್ಲಿರುವ ಈ ಸಂದರ್ಭದಲ್ಲಿ ನಾಡಿನಾದ್ಯಂತ ಪ್ರತಿ ಗ್ರಾಮದಲ್ಲೂ ಜಾನಪದ ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಸಂಗೀತ ಉಳಿಸುವ ನಿಟ್ಟಿನಲ್ಲಿ ಇಂತಹ ಜಾನಪದ ಸಮ್ಮೇಳನ, ತರಬೇತಿ ಶಿಬಿರ, ಕಾರ್ಯಾಗಾರಗಳು, ಜಾನಪದ ಗೋಷ್ಠಿ ಗಳು, ಜಾನಪದ ಉಪನ್ಯಾಸ ನಡೆದಾಗ ಜಾನಪದ ಕಲೆ ಶಾಶ್ವತವಾಗಿ ಉಳಿಯುತ್ತದೆಂದು ಅಭಿಪ್ರಾಯಪಟ್ಟರು.

ಸಮ್ಮೇಳನದ ಅಧ್ಯಕ್ಷ ತಿಪ್ಪೇಶ್ ಮಾತನಾಡಿ, ನಾನು ಸುಮಾರು 35 ವರ್ಷಗಳ ಕಾಲ ಜಾನಪದ ಕಲೆ ಸಾಹಿತ್ಯ, ಸಂಸ್ಕೃತ ಸಂಗೀತಕ್ಕೆ ಸಲ್ಲಿಸಿದ ಸೇವೆಗೆ ಈ ದೊಡ್ಡ ಗೌರವ ನನಗೆ ಸಿಕ್ಕಿದೆ. ಜಾನಪದ ಕಲೆ ಸಾಹಿತ್ಯ ಸಂಗೀತ ಹುಟ್ಟಿದ್ದು ಗ್ರಾಮೀಣ ಪ್ರದೇಶದಲ್ಲಿ ಜಾನಪದದ ಬೇರು ಇರುವುದು ಗ್ರಾಮಾಂತರ ಪ್ರದೇಶದಲ್ಲಿ ಪಾಶ್ಚಾತ್ಯ ಸಂಸ್ಕೃತಿ, ಸಂಗೀತ, ಸಾಹಿತ್ಯದ ಅಬ್ಬರ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟು ಜಾನಪದ ಸಂಸ್ಕೃತಿ ಮೂಲ ಬೇರು ಒಣಗಿದೆ. ಆದ್ದರಿಂದ ಗ್ರಾಮೀಣ ಪ್ರದೇಶದ ಯುವಕ ಯುವತಿಯರು ಪಟ್ಟಣ ಪ್ರದೇಶಗಳು ಸೇರಿದಂತೆ ಈ ಸಂಸ್ಕೃತಿಯನ್ನು ಉಳಿಸಲು ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು.

ಜಾನಪದ ಸಾಹಿತಿ ರಾಜಪ್ಪ ಚಿಕ್ಕನಲ್ಲೂರು ಮಾತನಾಡಿ, ಡಾ. ಕರೀಮ್ ಖಾನ್, ಗೋ.ರು.ಚ. ದೇ ಜವರೇಗೌಡ, ಡಾ.ಹಮಾ ನಾಯಕ್, ಚಂದ್ರಶೇಖರ ಕಂಬಾರ ಹಾಗು ನೂರಾರು ಜಾನಪದ ವಿದ್ವಾಂಸರ ಸಾಹಿತ್ಯವನ್ನು ಇಂದಿನ ಯುವಕ ಯುವತಿ ಯರು ಹೆಚ್ಚು ಓದಿದಾಗ ಶಿಷ್ಟ ಸಾಹಿತ್ಯ, ಕನ್ನಡ ಭಾಷೆ ಹೆಮ್ಮರವಾಗಲು ಜನಪದ ಸಾಹಿತ್ಯ ಎಷ್ಟೊಂದು ಪ್ರೇರಣೆ ನೀಡಿದೆ ಎಂದು ತಿಳಿಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕ ಸ್ವಾಮಿ ಮಾತನಾಡಿ ನಮ್ಮ ಭಾರತೀಯ ಸಂಸ್ಕೃತಿ ಮೂಲ ಬೇರು ಜಾನಪದ. ಜಾನಪದದಿಂದ ಸ್ವಾಸ್ಥ್ಯ ಸಮಾಜವನ್ನು ಕಾಣಲು ಸಾಧ್ಯ. ಸಮಾಜದಲ್ಲಿ ಶಾಂತಿ, ಅಹಿಂಸೆ. ಧಾರ್ಮಿಕ ಸಹಿಷ್ಣುತೆ, ಕಾಪಾಡಬೇಕಾದರೆ ಜಾನಪದ ಸಂಸ್ಕೃತಿ ಮಾರ್ಗದಲ್ಲಿಯೇ ನಡೆಯಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರೇನಲ್ಲೂರು ಹೋಬಳಿ ಅಧ್ಯಕ್ಷ ಜಯಣ್ಣ, ತಾಲೂಕು ಅಧ್ಯಕ್ಷ ಜಗದೀಶ್ವರಾಚಾರ್, ಡಾ. ಮಾಳೇನಳ್ಳಿ ಬಸಪ್ಪ, ಗ್ರಾಪಂ ಸದಸ್ಯ ಲೋಕನಾಥ್, ಶಿವಕುಮಾರ್, ಮಲಿಯಪ್ಪ, ಪರಮೇಶ್ವರಪ್ಪ, ಮಹೇಶ್ವರಪ್ಪ, ಸಿದ್ದರಾಮಪ್ಪ, ಚಂದ್ರಮ್ಮ, ಸುನೀತಾ, ಗಿರಿಜಾ ವಿಶಾಲಾಕ್ಷಿ, ಮುಂತಾದ ಜಾನಪದ ಹಾಡುಗಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

18ಕೆಕೆಡಿಯು1.

ಕರ್ನಾಟಕ ಜಾನಪದ ಪರಿಷತ್ತಿನಿಂದ ಕಡೂರು ತಾಲೂಕು ಚಿಕ್ಕನಲ್ಲೂರಿನಲ್ಲಿ ನಡೆಯಲಿರುವ 4ನೇ ಜಾನಪದ ಸಮ್ಮೇಳನದ ಅಧ್ಯಕ್ಷರಾದ ತಿಪ್ಪೇಶ್ ರವರಿಗೆ ಆಹ್ವಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!