ಕನ್ನಡಪ್ರಭ ವಾರ್ತೆ ಕಲಬುರಗಿ
ಬಯಲ ಬೆಳಕು ಪ್ರೊ. ವಿ.ಜಿ. ಅಂದಾನಿ ಅವರ 75ನೇ ವರ್ಷದ ವಜ್ರಮಹೋತ್ಸವದ ಸಮಾರಂಭ ಅಂಗವಾಗಿ ಏರ್ಪಡಿಸಿದ ಪ್ರೊ. ವಿ.ಜಿ. ಅಂದಾನಿಯವರಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾಕೃತಿಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತವೆ, ಶಿಷ್ಯವೃಂದ ಹೀಗೆ ಗುರುಗಳ ಹುಟ್ಟುಹಬ್ಬವನ್ನುಅರ್ಥಪೂರ್ಣವಾಗಿಆಚರಿಸುವುದು ಸಂತಸದ, ಸಂಭ್ರಮದ ಸಂಗತಿಎಂದುಅಭಿಪ್ರಾಯಪಟ್ಟರು.ಪ್ರೊ.ಬಸವರಾಜ ಮುಸಾವಳಗಿ ಮಾತನಾಡಿ, ನಾಡಿನ ಕಲಾಕ್ಷೇತ್ರಕ್ಕೆ ಅಂದಾನಿಯವರ ಕೊಡುಗೆ ಅನನ್ಯವಾಗಿದೆ. ಅಂದಾನಿಯವರು ತಮ್ಮ ವಿದ್ಯಾರ್ಥಿಗಳ ಕೋರ್ಸ್ ಮುಗಿಯುವರೆಗೂ ವಹಿಸುವ ಕಾಳಜಿ, ನೀಡುವ ಮಾರ್ಗದರ್ಶನ ಅಮೂಲ್ಯವಾಗಿದೆ ಎಂದು ಬಣ್ಣಿಸಿದರು. ಇದು ಗುರು ಶಿಷ್ಯರ ಅವಿನಾಭಾವ ಸಂಬಂಧಕ್ಕೆ ಕಾರಣವಾಗುತ್ತದೆ ಎಂದರು.ವಿಶ್ರಾಂತ ಉಪನ್ಯಾಸಕರು, ದಿ ಐಡಿಯಲ್ ಫೈನ್‍ಆರ್ಟ ಇನ್ಸಸ್ಟಿಟ್ಯೂಟ್ ಕಲಬುರಗಿ ಡಾ.ಪೂರ್ಣಿಮಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಪ್ರೊ. ವಿ.ಜಿ. ಅಂದಾನಿ, ವೀರೇಂದ್ರ ಶಹಾ, ರಾಜಶೇಖರ ಕೆ.ಪಾಟೀಲ ಉಪಸ್ಥಿತರಿದ್ದರು. ಕಿರಣ ಪಾಟೀಲ, ಪ್ರಾರ್ಥಿಸಿದರು. ಕೆ.ಎಂ. ಲೋಕಯ್ಯ ಸ್ವಾಗತಿಸಿ ನಿರೂಪಿಸಿದರು. ರಾಶಿ ಆರ್. ಪಾಟೀಲ ವಂದನಾರ್ಪಣೆ ಮಾಡಿದರು.
ಹಿರಿಯ ಕಲಾವಿದ ಡಾ. ವಿಜಯ ಹಾಗರಗುಂಡಗಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾ ಕಂಬಾರ ಪ್ರಾರ್ಥಿಸಿದರು. ಚಂದ್ರಹಾಸ ಜಾಲಿಹಾಳ ಸ್ವಾಗತಿಸಿ ಪ್ರಾಸ್ತಾವಿಕ ಮಾತಾಡಿದರು. ದೌಲತರಾಯ ದೇಸಾಯಿ ನಿರೂಪಿಸಿದರು. ಸಿದ್ದು ಮರಗೋಳ ವಂದಿಸಿದರು. ಅರವಿಂದ ಗುರೂಜಿ, ಬಸವರಾಜಜಾನೆ, ಮಂಜುಳಾ ಜಾನೆ, ಸುಬ್ಬಯ್ಯ ನೀಲಾ, ವಿ.ಬಿ. ಬಿರಾದಾರ ಚಿತ್ರಶೇಖರಕಂಠಿ, ಎಂ.ಸಂಜೀವ, ನಾರಾಯಣ ಜೋಶಿ, ಶರಣು ಪಟ್ಟಣಶೆಟ್ಟಿ, ಈರಣ್ಣಾಕಂಬಾರ ಮಹ್ಮದ ಅಯಾಜುದ್ದಿನ್ ಪಟೇಲ, ಸಂಸ್ಥೆಯ ಸಿಬ್ಬಂದಿ ವಿದ್ಯಾರ್ಥಿಗಳು ಅಂದಾನಿ ಪರಿವಾರ ಮುಂತಾದವರು ಇದ್ದರು.