ಕಲಾವಿದರಿಗೆ ಜನರ, ಸರ್ಕಾರದ ಪ್ರೋತ್ಸಾಹ ಅಗತ್ಯ: ಸಿದ್ದಣ್ಣ ತಮ್ಮಣ್ಣೋರ್

KannadaprabhaNewsNetwork |  
Published : Aug 04, 2025, 11:45 PM IST
ವಡಗೇರಾ ಪಟ್ಟಣದ ಪಟ್ಟಣದ ಶ್ರೀ ಆಂಜಿನೇಯ ದೇವಸ್ಥಾನ ಆವರಣದಲ್ಲಿ ಯಾದಗಿರಿಯ ಗುರು ಪುಟ್ಟರಾಜರ ಸಾಂಸ್ಕೃತಿಕ ಸಂಸ್ಥೆ ಯಾದಗಿರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು (ಯಾದಗಿರಿ) ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಸಂಗೀತ ಮೇಳ ಕಾರ್ಯಕ್ರಮದಲ್ಲಿ ಕಲಾವಿರದ ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಕಲೆ- ಕಲಾವಿದರಿಗೆ ಜನತೆ ಹಾಗೂ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ವಡಗೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಣ್ಣ ತಮ್ಮಣ್ಣೋರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಲೆ- ಕಲಾವಿದರಿಗೆ ಜನತೆ ಹಾಗೂ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ವಡಗೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಣ್ಣ ತಮ್ಮಣ್ಣೋರ್ ಅಭಿಪ್ರಾಯಪಟ್ಟರು.

ಜಿಲ್ಲೆಯ ವಡಗೇರಾ ಪಟ್ಟಣದ ಶ್ರೀ ಆಂಜನೇಯ ದೇವಸ್ಥಾನ ಆವರಣದಲ್ಲಿ ಯಾದಗಿರಿಯ ಗುರು ಪುಟ್ಟರಾಜರ ಸಾಂಸ್ಕೃತಿಕ ಸಂಸ್ಥೆ ಯಾದಗಿರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು (ಯಾದಗಿರಿ) ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಸಂಗೀತ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾತ್ರೆ, ದೇವಸ್ಥಾನಗಳ ಮಹೋತ್ಸವ ಸಂದರ್ಭದಲ್ಲಿ ಅನೇಕ ಕಲಾವಿದರು ಬರುತ್ತಾರೆ. ಅವರಿಗೆ ಕಲೆಯೇ ಕೃಷಿಯಾಗಿದೆ. ಹೇಗೆ ರೈತರಿಗೆ ಒಕ್ಕಲುತನವೇ ಕಸುಬಾಗಿದೆಯೋ ಹಾಗೆ ಇವರಿಗೆ ಕಲೆಯೇ ಜೀವನಾಧಾರವಾಗಿರುತ್ತದೆ. ಇದಕ್ಕೆ ಜನತೆ ಸರ್ಕಾರ ಸೇರಿ ಎಲ್ಲರೂ ಪ್ರೋತ್ಸಾಹಿಸಬೇಕೆಂದು ನುಡಿದರು.

ಕರವೇ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಶರಣು ಇಟಗಿ ಮಾತನಾಡಿ, ಕಲಾವಿದರಿಗೆ ಸಮಸ್ಯೆ ಇದ್ದರೆ ಕರವೇ ಗಮನಕ್ಕೆ ತಂದರೆ ನಾವು ಸದಾ ಹೋರಾಟಕ್ಕೆ ಸಿದ್ಧರಿರುತ್ತೇವೆ. ಕಲಾವಿದರ ಹಿತಕ್ಕಾಗಿ ಕರವೇ ಹೋರಾಟ ನಡೆಸುತ್ತದೆ ಎಂದು ಹೇಳಿದರು. ಸರ್ಕಾರ ಸಂಸ್ಕೃತಿ ಇಲಾಖೆ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಕಾರ್ಯಕ್ರಮವನ್ನು ಸಂಗುಗೌಡ ಮಾಲಿ ಪಾಟೀಲ್, ಬಸವರಾಜ ಸೊನ್ನದ ಸಾಹುಕರ್ ಜ್ಯೋತಿ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನಗೌಡ ಬೀರನಕಲ್, ಬಸವರಾಜ ನೀಲಹಳ್ಳಿ ಇನ್ನಿತರರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ಗುರುಪುಟ್ಟರಾಜ ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿ ಮಹೇಶ ವಹಿಸಿದ್ದರು.

ನಂತರ ಜರುಗಿದ ಕಾರ್ಯಕ್ರಮದಲ್ಲಿ ಕಲಾವಿದರಾದ ಸಿದ್ದು ಕಲ್ಯಾಣ ಹಾಗೂ ತಂಡ (ತತ್ವಪದ), ರಾಕೇಶ ಯಾದಗಿರಿ (ವಚನ ಗೀತೆ), ಮಹೇಶ ಯಾದಗಿರಿ ಹಾಗೂ ಶರಣು ವಟಾರ್ (ಜಾನಪದ ಗೀತೆ ಗಾಯನ), ಅಂಬಾ ಮಹೇಶ್ವರಿ ಹುಲಕಲ್ (ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ), ಮಲ್ಲಯ್ಯ ಸ್ವಾಮಿ ಹಿರೇಮಠ ಶಹಾಪೂರ (ಭಾವಗೀತೆ), ಮಲ್ಲಿಕಾರ್ಜುನ ರಾಮಸಮುದ್ರ (ಸುಗಮ ಸಂಗೀತ), ಪ್ರದರ್ಶನ ನೀಡಿದರು. ರಾಜುಕಟ್ಟಿಮನಿ ಗದಗ ತಬಲಾ ಸಾಥ್ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ