ಮುಂಡಗೋಡ: ಅರ್ಜಿ ಹಾಕಿ ಸನ್ಮಾನ ಮಾಡಿಸಿಕೊಳ್ಳುವಂತಹ ಈ ಕಾಲದಲ್ಲಿ ಅಂತಹ ಗೋಜಿಗೆ ಹೋಗದೆ ನಿರಂತರವಾಗಿ ನಿಸ್ವಾರ್ಥ ಮನೋಭಾವನೆಯಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಕೀರ್ತಿ ದಿ. ರವಿ ಆಲದಕಟ್ಟಿ ಅವರಿಗೆ ಸಲ್ಲುತ್ತದೆ. ಅಂತಹ ಅದ್ಭುತವಾದ ಕಲಾವಿದನನ್ನು ಕಳೆದುಕೊಂಡು ರಂಗಭೂಮಿ ಬಡವಾಗಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ತಿಳಿಸಿದರು.
ತಾಲೂಕಿನ ಚಿಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶ್ರೀ ಗುರು ಕಲಾವಿದರ ಬಳಗ ಮುಂಡಗೋಡ ಹಾಗೂ ಚಿಗಳ್ಳಿ ಗ್ರಾಮದ ಸಮಸ್ತ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ರವಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಯಾವುದೇ ಆಸೆ- ಆಮಿಷ ಸನ್ಮಾನಗಳಿಗೆ ಸೋತು ಕಾರ್ಯಕ್ರಮವನ್ನು ಮಾಡಿದವರಲ್ಲ, ಫಲಾಪೇಕ್ಷೆ ಇಲ್ಲದೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.
ಪೌರಾಣಿಕ ನಾಟಕ ರಂಗಭೂಮಿ ಗಾರುಡಿಗ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ ಸದಸ್ಯರ ಅರಳಿಕೊಂಡ ಶಿವಣ್ಣ ಮಾತನಾಡಿ, ಕಲೆಯನ್ನು ಗೌರವಿಸಿದಾಗ ಮಾತ್ರ ಕಲಾವಿದರಿಗೆ ನಿಜವಾದ ಗೌರವ ಸಿಗುತ್ತದೆ ಎಂದರು.ಡಾ. ಪಿ.ಪಿ. ಛಬ್ಬಿ ಮಾತನಾಡಿದರು. ಫಕೀರೇಶ ಕೊಂಡಾಯ, ರಾಜು ಹಿರೇಮಠ ಗಿರೀಶ್ ಬಿ.ವಿ., ವಿನಾಯಕ್ ಶೇಟ್, ಪದ್ಮಶ್ರೀ ಶೇಟ್, ಜೆ.ಪಿ. ಪ್ರಕಾಶ ಹುಬ್ಬಳ್ಳಿ, ಹನುಮಂತ ಸಾಲಿ, ಸದಾನಂದ ಲಾಡನವರ, ಎಂ.ಎಚ್. ಕುಲಾಲ್, ಮೋಹನ್ ಮಾಸ್ಟರ, ವಿರುಪಾಕ್ಷ ಸಾಗರ, ಶರಣಯ್ಯ ಬೇಗೂರು, ಮಾನಪ್ಪ ಹಾನಗಲ್, ಷಣ್ಮುಖಯ್ಯ, ಮಾಚಣ್ಣ ಭಟ್, ಮಹಾಬಲೇಶ್ವರ ನಾಯ್ಕ, ಎಂ.ಎನ್. ನಾಯ್ಕ, ವಿವೇಕಾನಂದ ನಾಯ್ಕ, ಗಿರೀಶ್ ದಾಂಡೇಲಿ, ರಾಜಾರಾಮ್ ಭಟ್, ಮಧುಕುಮಾರ್ ನಾಯ್ಕ, ವಿನಾಯಕ ಕೊಂಡ್ಲಿ, ಗಣಪತಿ ಗಡಮನೆ, ನಾಗೇಶ್ ಪಟಗಾರ, ಮಾರುತಿ ನಾಯಕ್, ರವಿ ಭಟ್, ನಾಗೇಂದ್ರ ಟೋಪೋಜಿ, ಬಸು ಮೂಡೂರು, ದುರ್ಗೇಶ್, ರವಿ ಪೂಜಾರಿ, ಸಚಿನ್ ದೀಕ್ಷಿತ, ವಿ.ಪಿ. ಹೆಬ್ಬಾರ್, ಮಂಜುನಾಥ ನಡಿಗೇರಿ, ಸಂದೀಪ್ ಕಾರವಾರ, ಪ್ರಿಯಾಂಕ ಕಾರವಾರ, ಪದ್ಮಶ್ರೀ ವಿನಾಯಕ್ ಶೇಟ್, ರೇಣುಕಾ ರಾಣಿಬೆನ್ನೂರು, ಅನಿತಾ ಹುಬ್ಬಳ್ಳಿ, ಸಿದ್ದು ಮುಂಡಗೋಡ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಶಂಬು ಕಿರುತೆಪ್ಪನವರ್ ಪ್ರಾರ್ಥನ ಗೀತೆ ಹಾಡಿದರು, ವಿನಾಯಕ್ ಶೇಟ್ ನಿರೂಪಿಸಿದರು. ಗಿರೀಶ್ ಬಿ.ವಿ. ವಂದಿಸಿದರು.