ಆರ್ಯ ವೈಶ್ಯ ಸಮಾಜ ನಂಬಿಕಸ್ತ ಸಮುದಾಯ: ಅರುಣ್ ಕುಮಾರ್‌

KannadaprabhaNewsNetwork |  
Published : Jul 03, 2025, 12:32 AM IST
ಈ ವರದಿಗೆ ಪೋಟೋ ಇದೆ ಪೈಲ್ ನಂ,30ಕೆಸಿಎನ್ಜಿ1: ಚನ್ನಗಿರಿಯಲ್ಲಿ ನಡೆದ ಶ್ರೀ ವಾಸವಿ ಸೇವಾ ಟ್ರಸ್ಟಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು  ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಕಡಿಮೆ ಜನಸಂಖ್ಯೆ ಇದರೂ ಗುರು-ಹಿರಿಯರ ಜೊತೆ ಉತ್ತಮವಾದ ಬಾಂಧವ್ಯಗಳನ್ನು ಇಟ್ಟುಕೊಂಡು ಸೌಹಾರ್ಧಯುತವಾಗಿ ಬಾಳುತ್ತೀರುವ ಆರ್ಯವೈಶ್ಯ ಸಮಾಜವು ನಂಬಿಕಸ್ತ ಸಮಾಜವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ರಾಜ್ಯದಲ್ಲಿ ಕಡಿಮೆ ಜನಸಂಖ್ಯೆ ಇದರೂ ಗುರು-ಹಿರಿಯರ ಜೊತೆ ಉತ್ತಮವಾದ ಬಾಂಧವ್ಯಗಳನ್ನು ಇಟ್ಟುಕೊಂಡು ಸೌಹಾರ್ಧಯುತವಾಗಿ ಬಾಳುತ್ತೀರುವ ಆರ್ಯವೈಶ್ಯ ಸಮಾಜವು ನಂಬಿಕಸ್ತ ಸಮಾಜವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕುಮಾರ್ ಹೇಳಿದರು.

ಭಾನುವಾರ ಸಂಜೆ ಇಲ್ಲಿನ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಶ್ರೀ ವಾಸವಿ ಸೇವಾ ಟ್ರಸ್ಟಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಈ ಪಟ್ಟಣದಲ್ಲಿ ನಮ್ಮ ಸಮಾಜದ 42 ಮನೆಗಳಿದ್ದು, ನಮ್ಮದೇ ಆದಂತಹ ಪ್ರಾಮಾಣಿಕವಾದ ವ್ಯವಹಾರಗಳಿಂದ ಪ್ರಗತಿಯತ್ತ ಮುನ್ನಡೆಯುತ್ತೀರುವ ಸಮಾಜವಾಗಿದೆ ಎಂದರು.

ಕಡಿಮೆ ಜನ ಸಂಖ್ಯೆ ಇದ್ದರೂ ಪಟ್ಟಣದಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ ಶ್ರೀ ಮಂತ ದೇವಾಲಯವಾಗಿದ್ದು ಪ್ರತಿ ತಿಂಗಳು 2.5 ಲಕ್ಷ ರು. ಆದಾಯ ಬರುವಂತಹ ದೇವಾಲಯವಾಗಿದೆ. ರಾಜ್ಯದಲ್ಲಿ 300 ದೇವಾಲಯಗಳನ್ನು ಹೊಂದಿರುವ ನಮ್ಮ ಸಮಾಜ ರಾಜ್ಯದ ಜನಸಂಖ್ಯೆಯಲ್ಲಿ 4.67 ಲಕ್ಷದಷ್ಟು ಜನ ಸಂಖ್ಯೆ ಇದ್ದು, ಈಗ 6 ಲಕ್ಷ ಜನಸಂಖ್ಯೆ ಇದೆ, ಕಡಿಮೆ ಜನ ಸಂಖ್ಯೆ ಇದ್ದರೂ ಶಕ್ತಿಮೀರಿ ಕೆಲಸ ಮಾಡುತ್ತಿದ್ದೇವೆ ಎಂದರು.

ಪ್ರತಿ ತಿಂಗಳ ದುಡಿಮೆಯ ಆಧಾಯದಲ್ಲಿ ದಾನ, ಧರ್ಮಗಳನ್ನು ಮಾಡುತ್ತಿದ್ದು, ಈ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ ಎಂದರು.

ತಾಲೂಕು ಬಿಜೆಪಿ ಪಕ್ಷದ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಆರ್ಯವೈಶ್ಯ ಸಮಾಜವು ವ್ಯಾಪಾರ-ವ್ಯವಹಾರಗಳಲ್ಲಿ ತನ್ನದೆ ಆದಂತಹ ಪ್ರಮಾಣಿಕತೆಯನ್ನು ಇಟ್ಟುಕೊಂಡು ಇತರೆ ಸಮಾಜದವರನ್ನು ಸ್ನೇಹ ಭಾವಗಳಿಂದ ಕಾಣುತ್ತಾ ನಂಬಿಕಸ್ತ ಸಮಾಜವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ವಾಸವಿ ಸೇವಾ ಟ್ರಸ್ಟಿನ ನೂತನ ಅಧ್ಯಕ್ಷ ಎಚ್.ಎಸ್.ಚಂದನ್ ಶೆಟ್ಟಿ, ಸಿಂದೂರ ಎಂಬ ಹೆಸರಿನಲ್ಲಿ ಸಮಾಜದ ಎಲ್ಲಾ ಮಹಿಳೆಯರಿಗೆ ಶ್ರಾವಣ ಮಾಸದಲ್ಲಿ ಅರಿಶಿಣ-ಕುಂಕುಮದ ಉಡುಗೋರೆಯಾಗಿ ಪ್ರತಿ ವರ್ಷವು 501 ರು. ನೀಡುವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ ಎಂದರು.

ಸಮಾಜದ ಪ್ರಮುಖರಾದ ಡಾ.ಎಚ್.ಎಸ್.ಶ್ರೀನಿವಾಸಮೂರ್ತಿ, ಆರ್.ಸಿ.ಪ್ರಭಕರ್, ಆರ್.ಜೆ.ಶ್ರೀನಿವಾಸಮೂರ್ತಿ, ವೈ.ಎಸ್.ಸುನೀಲ್, ಹೇಮಶ್ರೀನಿವಾಸ್, ಜಿ.ಯು.ನಾಗೇಂದ್ರಪ್ರಸಾದ್, ರಾಘವೇಂದ್ರಶೆಟ್ಟಿ, ಪುರಸಭೆಯ ಸದಸ್ಯೆ ಸವಿತಾ ರಾಘವೇಂದ್ರಶೆಟ್ಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ