ದೇಶ ರಕ್ಷಣೆಗೆ ಆರ್ಯವೈಶ್ಯರು ಸಿದ್ಧ

KannadaprabhaNewsNetwork |  
Published : May 08, 2025, 12:34 AM IST
ಕ್ಯಾಪ್ಷನ7ಕೆಡಿವಿಜಿ33 ವಾಸವಿ ಜಯಂತಿಯಂದು ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರಿಗೆ ಅಲಂಕಾರ ಮಾಡಿರುವುದು.........ಕ್ಯಾಪ್ಷನ7ಕೆಡಿವಿಜಿ34 ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜದ ಹೆಣ್ಣುಮಕ್ಕಳು ಸಿಂಧೂರ ನೀಡುವ ಮೂಲಕ ದೇಶ, ಹೆಣ್ಣುಮಕ್ಕಳ ರಕ್ಷಣೆಗಾಗಿ ನಾವೂ ನಿಮ್ಮೊಂದಿಗೆ ಇರುತ್ತೇವೆ ಎಂಬ ಸಂದೇಶ ನೀಡಿದರು. | Kannada Prabha

ಸಾರಾಂಶ

ನೂರಾರು ವರ್ಷಗಳ ಇತಿಹಾಸದಿಂದಲೂ ಶ್ರೀ ಕನ್ಯಕಾ ಪರಮೇಶ್ವರಿ ಸನ್ನಿಧಿಯಲ್ಲಿ ಶ್ರೀ ವಾಸವಿ ಜಯಂತಿ ಆಚರಿಸಲಾಗುತ್ತಿದೆ. ಈ ವರ್ಷ ಪಹಲ್ಗಾಂನಲ್ಲಿ ನಡೆದ ಘಟನೆಯಿಂದ ವಿಷದ ವಾತಾವರಣ ದೇಶದ ಮೇಲೆ ಆಗಿದೆ. ಇದರ ಪರಿಣಾಮವಾಗಿ ದೇಶದ ಪ್ರತಿಯೊಬ್ಬರ ರಕ್ಷಣೆಗಾಗಿ ನಾವಿದ್ದೇವೆ ಎಂದು ಆರ್ಯವೈಶ್ಯ ಸಮಾಜದ ಹೆಣ್ಣುಮಕ್ಕಳು ಸಿಂಧೂರ ನೀಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ಹೇಳಿದ್ದಾರೆ.

- ವಾಸವಿ ಜಯಂತ್ಯುತ್ಸವದಲ್ಲಿ ಪ್ರಭಾಕರ್‌ । ಸಿಂಧೂರ ನೀಡುವ ಮೂಲಕ ಪ್ರತಿಜ್ಞೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನೂರಾರು ವರ್ಷಗಳ ಇತಿಹಾಸದಿಂದಲೂ ಶ್ರೀ ಕನ್ಯಕಾ ಪರಮೇಶ್ವರಿ ಸನ್ನಿಧಿಯಲ್ಲಿ ಶ್ರೀ ವಾಸವಿ ಜಯಂತಿ ಆಚರಿಸಲಾಗುತ್ತಿದೆ. ಈ ವರ್ಷ ಪಹಲ್ಗಾಂನಲ್ಲಿ ನಡೆದ ಘಟನೆಯಿಂದ ವಿಷದ ವಾತಾವರಣ ದೇಶದ ಮೇಲೆ ಆಗಿದೆ. ಇದರ ಪರಿಣಾಮವಾಗಿ ದೇಶದ ಪ್ರತಿಯೊಬ್ಬರ ರಕ್ಷಣೆಗಾಗಿ ನಾವಿದ್ದೇವೆ ಎಂದು ಆರ್ಯವೈಶ್ಯ ಸಮಾಜದ ಹೆಣ್ಣುಮಕ್ಕಳು ಸಿಂಧೂರ ನೀಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ಹೇಳಿದರು.

ನಗರದ ಎಸ್.ಕೆ.ಪಿ. ರಸ್ತೆಯ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಬುಧವಾರ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘ, ಶ್ರೀ ವಾಸವಿ ಯುವಜನ ಸಂಘ, ಶ್ರೀ ವಾಸವಿ ಯುವತಿಯರ ಸಂಘ, ಶ್ರೀ ವಾಸವಿ ಭಜನಾ ಸಂಘ ಇತರೆ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ವಾಸವಾಂಬ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಣ್ಣುಮಕ್ಕಳಿಗೆ ಸಿಂಧೂರ ಕೊಟ್ಟರೆ ಆ ಸಿಂಧೂರ ಪರಿಣಾಮಕಾರಿಯಾಗಿ ಮೂಡುತ್ತದೆ. ಈ ಸಿಂಧೂರದ ಮೂಲಕ ಭಾರತ ಹೆಣ್ಣುಮಕ್ಕಳ ರಕ್ಷಣೆಗಾಗಿ ನಿಂತಿದೆ ಎಂಬ ಸಂದೇಶವನ್ನು "ಆಪರೇಷನ್ ಸಿಂಧೂರ " ಹೆಸರಿನ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೊಟ್ಟಿದ್ದಾರೆ. ನಮ್ಮ ಸಮಾಜದಲ್ಲಿ ವೈದ್ಯರು, ವ್ಯಾಪಾರಸ್ಥರು, ಇತರರು ಇದ್ದು, ದೇಶ ಸೇವೆ ಸಂದರ್ಭ ಹಣದ ಅವಶ್ಯಕತೆ ಇದ್ದರೆ ನೆರವು ನೀಡುವುದಾಗಿಯೂ ತಿಳಿಸಿದರು.

ದೇವಸ್ಥಾನ ಸಂಘದ ಆಜೀವ ಗೌರವಾಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್ ಮಾತನಾಡಿದರು. ಈ ಸಂದರ್ಭ ಮಹಿಳೆಯರು, ಯುವತಿಯರು ಬಿಳಿವಸ್ತ್ರದ ಮೇಲೆ ಕುಂಕುಮದಿಂದ ತಮ್ಮ ಹಸ್ತವನ್ನಿಟ್ಟು, ತಿಲಕವನ್ನು ಇಟ್ಟುಕೊಂಡು "ದೇಶದ ಜೊತೆಗೆ ನಾವು ನಿಮ್ಮೊಂದಿಗೆ ಇದ್ದೇವೆ " ಎಂದು ಘೋಷಿಸಿದರು.

ಈ ಸಂದರ್ಭ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಕಾರ್ಯಾಧ್ಯಕ್ಷ ಕಾಸಲ್ ಎಸ್.ಸತೀಶ, ಕಾರ್ಯದರ್ಶಿ ಜೆ.ರವೀಂದ್ರ ಗುಪ್ತ, ಸಹ ಕಾರ್ಯದರ್ಶಿ ಎ.ಎಸ್. ಸತ್ಯನಾರಾಯಣ ಸ್ವಾಮಿ, ಖಜಾಂಚಿ ಎಂ.ಕೆ. ನಾಗೇಂದ್ರ ಕುಮಾರ್, ಶ್ರೀ ವಾಸವಿ ಯುವಜನ ಸಂಘ, ಶ್ರೀ ವಾಸವಿ ಯುವತಿಯರ ಸಂಘ, ಶ್ರೀ ವಾಸವಿ ಭಜನಾ ಸಂಘ, ವಾಸವಿ ಕ್ಲಬ್ ಇಂಟರ್‌ ನ್ಯಾಷನಲ್ ದೇವನಗರಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಇದ್ದರು. ಸಂಜೆ ಅಲಂಕೃತ ಭವ್ಯ ಮಂಟಪದಲ್ಲಿ ಅಮ್ಮನವರ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.

- - -

(ಟಾಪ್‌ ಕೋಟ್‌)

ಭಾರತದ ರೈತರು, ಸೈನಿಕರು, ಪ್ರಜೆಗಳ ರಕ್ಷಣೆಗಾಗಿ ಆರ್ಯವೈಶ್ಯ ಜನಾಂಗದವರು ಈ ದೇಶದ ಬೆನ್ನೆಲುಬಾಗಿ ನಿಲ್ಲಬೇಕು. ಆದ್ದರಿಂದ ಕನ್ಯಕಾಪರಮೇಶ್ವರಿ ಅಮ್ಮನವರ ಪ್ರಾರ್ಥನೆಯೊಂದಿಗೆ ಸಂಕಲ್ಪದ ಮೂಲಕ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

- ಆರ್‌.ಎಲ್‌. ಪ್ರಭಾಕರ್‌, ಅಧ್ಯಕ್ಷ

- - -

-7ಕೆಡಿವಿಜಿ34: ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜದ ಹೆಣ್ಣುಮಕ್ಕಳು ಸಿಂಧೂರ ನೀಡುವ ಮೂಲಕ ದೇಶ, ಹೆಣ್ಣುಮಕ್ಕಳ ರಕ್ಷಣೆಗಾಗಿ ನಾವೂ ನಿಮ್ಮೊಂದಿಗೆ ಇರುತ್ತೇವೆ ಎಂಬ ಸಂದೇಶ ನೀಡಿದರು. -7ಕೆಡಿವಿಜಿ39:

ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜದ ಹೆಣ್ಣುಮಕ್ಕಳು ಸಿಂಧೂರ ನೀಡುವ ಮೂಲಕ ದೇಶ, ಹೆಣ್ಣುಮಕ್ಕಳ ರಕ್ಷಣೆಗಾಗಿ ನಾವೂ ನಿಮ್ಮೊಂದಿಗೆ ಇರುತ್ತೇವೆ ಎಂಬ ಸಂದೇಶ ನೀಡಿದರು.

- - -

-7ಕೆಡಿವಿಜಿ40:

ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ವಾಸವಿ ಜಯಂತಿ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸಿಂಧೂರ ಹಚ್ಚಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?