ಕೊಪ್ಪಳ/ಕುಕನೂರು:
ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಹತ್ಯೆಗೈದ ಪಾಕಿಸ್ತಾನದ ಹೇಡಿಗಳಿಗೆ ಆಪರೇಷನ್ ಸಿಂಧೂರು ಮೂಲಕ ನರಕ ತೋರಿಸಿದ ಭಾರತೀಯ ಸೈನ್ಯ ವಿಜಯಗಾತಿಯನ್ನು ಸಂಭ್ರಮಿಸಿದ ಜನರು ಕೊಪ್ಪಳ ಹಾಗೂ ಕುಕನೂರನಲ್ಲಿ ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ ಸೈನಿಕರು ಕಾರ್ಯಕ್ಕೆ ಘೋಷಣೆ ಕೂಗಿದರು.ಕೊಪ್ಪಳದ ಭಾಗ್ಯನಗರದ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಸರ್ಕಲ್‌ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಆಪರೇಶನ ಸಿಂದೂರ ಹೆಸರಿನಲ್ಲಿ ಉಗ್ರಗಾಮಿಗಳ ಅಡಗುತಾಣವನ್ನೇ ಧ್ವಂಸ ಮಾಡಿರುವ ಸೈನಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ತಂಟೆಗೆ ಬಂದರೇ ಏನಾಗುತ್ತದೆ ಎನ್ನುವುದನ್ನು ಮುಟ್ಟಿ ನೋಡಿಕೊಳ್ಳುವಂತೆ ಸೈನಿಕರು ತಿರುಗೇಟು ನೀಡಿದ್ದಾರೆ ಎಂದರು.
ಪದೇಪದೇ ನಾಗರಿಕರ ಮೇಲೆ ದಾಳಿ ಮಾಡುವುದು, ಭಯೋತ್ಪಾದಕ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಪಾಕಿಸ್ತಾನಕ್ಕೆ ಸರಿಯಾಗಿಯೇ ಪಾಠ ಕಲಿಸಬೇಕು ಎಂದು ಒತ್ತಾಯಿಸಲಾಯಿತು.ಈ ವೇಳೆ ಭಾಗ್ಯನಗರ ಪಪಂ ಸದಸ್ಯರಾದ ಪರಶುರಾಮ್ ನಾಯಕ, ಜಗದೀಶ ಮಾಲಗಿತ್ತಿ, ಮುಖಂಡರಾದ ಡಾಕ್ಟರ್ ಕೊಟ್ರೇಶ್ ಶೇಡ್ಮಿ, ಸುರೇಶ ದೊಣ್ಣೆ , ಏಕನಾಥ ಬಾವಿಕಟ್ಟಿ, ಕೊಟ್ರೇಶ ಕವಲೂರು, ಸುರೇಶ ಪೆದ್ದಿ , ಸುರೇಶ ದರಗದಕಟ್ಟಿ, ಜೀತು ಗಾಲ ಪ್ರೇಮನಾಥ, ನಾಗರಾಜ್ ಕನಕರಾಜ, ಚಂದ್ರಶೇಖರ ಅರಿಕೇರಿ, ಮಲ್ಲೇಶ ಬುಲ್ಟಿ, ಉಮೇಶ ಮುಂಡಾಸದ, ಚಂದ್ರು ಮಾಳೋದಿ, ಗಿರೀಶ ಪಾನಘಂಟಿ ಇದ್ದರು.
ಭಾರತ ಪ್ರತೀಕಾರ:ಕುಕನೂರಿನ ಅಂಬೇಡ್ಕರ್ ವೃತ್ತದಲ್ಲಿ ನಡೆದ ವಿಯೋತ್ಸವದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಕರಬಸಯ್ಯ ಬಿನ್ನಾಳ, ಹಿಂದೂ ಮಹಿಳೆಯರ ಸಿಂಧೂರ ಅಳಿಸಿಹಾಕಿದ ಪಾಕಿಸ್ತಾನಕ್ಕೆ ತಕ್ಕ ಪಾಠ ಆಗಿದೆ. ಪಹಲ್ಗಾಮ್ ಉಗ್ರರಿಗೆ ಭಾರತ ಪ್ರತೀಕಾರ ನೀಡಿದೆ ಎಂದರು. ಪಾಕಿಸ್ತಾನದ ಸರ್ವನಾಶ ಸನೀಹ ಇದೆ. ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ಸೈನಿಕರು ಧ್ವಂಸಗೊಳಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಕಡೆ ಸೈನ್ಯಕರು ದಾಳಿ ನಡೆಸಿ ಸಿಂಧೂರ ಅಳಿಸಿದವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.
ನಗರ ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಹಾಳಕೇರಿ ಮಾತನಾಡಿ, ಪ್ರವಾಸದಲ್ಲಿದ್ದ ಪ್ರವಾಸಿಗರ ಮೇಲಿನ ದಾಳಿ ಭಾರತೀಯರ ನಿದ್ದೆಗೇಡಿಸಿತ್ತು. ಇದೀಗ ಆ ನೋವಿಗೆ ನೆಮ್ಮದಿ ಸಿಕ್ಕಿದೆ. ಸೇನೆ ಕಾರ್ಯ ಹಾಗೂ ಪ್ರಧಾನಿ ಮೋದಿ ಕಾರ್ಯ ಶ್ಲಾಘನೀಯ ಎಂದರು.ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಮಹೇಶ ಕಲ್ಮಠ, ವೀರೇಶ ಸಬರದ ಸೇರಿದಂತೆ ಇತರರು ಇದ್ದರು.ತಕ್ಕ ಉತ್ತರ:
ದೇಶದ ಜನರು ನಿದ್ದೆಯಲ್ಲಿರುವಾಗಲೇ ಸೈನಿಕರು ಉಗ್ರರ ತಾಣಗಳ ಮೇಲೆ ದಾಳಿ ನಡೆಸಿ ತಕ್ಕ ಉತ್ತರ ನೀಡುವ ಮೂಲಕ ತನ್ನ ಶೌರ್ಯವನ್ನು ಜಗತ್ತಿಗೆ ಮತ್ತೆ ತೋರಿಸಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಎಸ್ ಶ್ಲಾಘಿಸಿದರು. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಹಲ್ಗಾಮ್‌ನಲ್ಲಿ 26 ಹಿಂದೂ ಪ್ರವಾಸಿಗರನ್ನು ಹತ್ಯೆಗೈದ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ಪೈಶಾಚಿಕ ಕೃತ್ಯದ ಬಳಿಕ ಭಾರತೀಯರ ರಕ್ತ ಕುದಿಯುತ್ತಿತ್ತು. ಪ್ರತಿಯೊಬ್ಬರ ಮನದಲ್ಲಿ ಪ್ರತೀಕಾರದ ಜ್ವಾಲೆ ಉರಿಯುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ, ಉಗ್ರರು ಮತ್ತು ಅವರ ಹಿಂದೆ ಇರುವವರು ಊಹೆ ಮಾಡದ ರೀತಿಯ ಶಿಕ್ಷೆ ಅನುಭವಹಿಸಲಿದ್ದಾರೆ ಎಂದು ಸ್ಪಷ್ಟ ಸಂದೇಶ ನೀಡಿದ್ದರು. ಅದನ್ನು ಅಪರೇಷನ್ ಸಿಂಧೂರ ಮೂಲಕ ಸೇನೆ ನಿಜಗೊಳಿಸಿದೆ. ಉಗ್ರರ ಹುಟ್ಟಡಗಿಸುವ ರೀತಿಯಲ್ಲಿ ಸೇನೆ ಬಲವಾದ ಪೆಟ್ಟು ನೀಡಿದೆ ಎಂದು ಹೇಳಿದ್ದಾರೆ. ಭಯೋತ್ಪಾದಕರಿಗೆ ಸರಿಯಾದ ರೀತಿಯಲ್ಲಿ ಮರ್ಮಾಘಾತ ನೀಡಿರುವ ಸೇನೆ, ಪ್ರಧಾನಿ, ಕೇಂದ್ರ ಗೃಹ ಸಚಿವರು, ರಕ್ಷಣಾ ಸಚಿವರಿಗೆ , ರಕ್ಷಣಾ ಇಲಾಖೆಗೆ ಅಭಿನಂದನೆ ಸಲ್ಲಿಸುವೆ ಎಂದು ಹೇಳಿದ್ದಾರೆ.ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯಕ್ಕೆ ಪ್ರತಿಯಾಗಿ ಆಪರೇಶನ್ ಸಿಂಧೂರ ನಡೆಸಿರುವುದು ಶ್ಲಾಘನೀಯವಾಗಿದ್ದು, ದೇಶವೇ ಹೆಮ್ಮೆ ಪಡುವ ಸಂಗತಿ. ಈ ವಿಷಯದಲ್ಲಿ ರಾಜಕೀಯ ಮಾಡದೆ, ಎಲ್ಲರೂ ದೇಶದ ಸೈನಿಕರಿಗೆ ಹಾಗೂ ಪ್ರಧಾನಿ ನರೇಂದ್ರ ಅವರಿಗೆ ಬೆಂಬಲವಾಗಿ ನಿಲ್ಲಬೇಕು.ಸಂಗಣ್ಣ ಕರಡಿ ಮಾಜಿ ಸಂಸದಆಪರೇಷನ್ ಸಿಂಧೂರನಿಂದ ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿ ಸಿಗಲಿದೆ. ನಮ್ಮ ಸೈನಿಕರ ಕಾರ್ಯ ಶ್ಲಾಘನೀಯವಾಗಿದ್ದು, ಅವರಿಗ ನಿಜಕ್ಕೂ ಅಭಿನಂದನೆ ಸಲ್ಲಿಸಬೇಕು. ಪಕ್ಷದ ಟ್ವೀಟ್ ಕುರಿತು ನಾನು ಏನು ಹೇಳುವುದಿಲ್ಲ. ಪಕ್ಷದ ಹೈಕಮಾಂಡ್ ಅದನ್ನು ನೋಡಿಕೊಳ್ಳುತ್ತದೆ ಮತ್ತು ಪ್ರತಿಕ್ರಿಯೇ ನೀಡುತ್ತಾರೆ. ಈಗಗಾಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೈನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಘವೇಂದ್ರ ಹಿಟ್ನಾಳ ಶಾಸಕ