ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾಪಟುಗಳಾಗಿ

KannadaprabhaNewsNetwork | Published : Apr 30, 2024 2:04 AM

ಸಾರಾಂಶ

ನಾವು ವಿದ್ಯೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಿವೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೆ ನೀಡಿದರೆ ಉತ್ತಮ ಕ್ರೀಡಾಪಟುಗಳಾಗಿ ಬೆಳಕಿಗೆ ಬರಲು ಕಾರಣವಾಗುತ್ತದೆ. ನೀವುಗಳು ಹೆಚ್ಚಾಗಿ ಕ್ರೀಡಾ ಕೂಟಗಳಲ್ಲಿ ಭಾಗವಹಿಸಬೇಕು

ಕನ್ನಡಪ್ರಭ ವಾರ್ತೆ ಕೋಲಾರನಮ್ಮ ಜೀವನ ಶೈಲಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಈ ದಿಶೆಯಲ್ಲಿ ಹೆಚ್ಚಾಗಿ ಕ್ರೀಡಾಕೂಟಗಳಲ್ಲಿ ತಾವು ತೊಡಗಿಸಿಕೊಂಡರೆ ಆರೋಗ್ಯ ಕಾಪಾಡಿಕೊಂಡು, ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮಲು ಸಾಧ್ಯ ಎಂದು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಕೆ.ಆರ್. ರಾಘವೇಂದ್ರ ಹೇಳಿದರು.ಬೆಂಗಳೂರು ನಗರದ ಚಾಮರಾಜಪೇಟೆಯ ಟಿ.ಆರ್.ಮಿಲ್‌ನ ಜಿಂಕೆ ಪಾರ್ಕ್ ಸಮೀಪವಿರುವ ರಾಜೀವ್ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ನಗರ ನೆಟ್ ಬಾಲ್ ಅಸೋಸಿಯೇಷನ್ ಹಾಗೂ ಯೂನಿಕ್ ಸ್ಪೋರ್ಟ್ಸ್ ಅಕಾಡೆಮಿಯಿಂದ ಪ್ರಥಮ ಸೀನಿಯರ್ ಜಿಲ್ಲಾ ಮಟ್ಟದ ನೆಟ್ ಬಾಲ್ ಪುರುಷ ಹಾಗೂ ಮಹಿಳೆಯರ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕ್ರೀಡೆಗೂ ಆದ್ಯತೆ ನೀಡಿ

ನಾವು ವಿದ್ಯೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಿವೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೆ ನೀಡಿದರೆ ಉತ್ತಮ ಕ್ರೀಡಾಪಟುಗಳಾಗಿ ಬೆಳಕಿಗೆ ಬರಲು ಕಾರಣವಾಗುತ್ತದೆ. ನೀವುಗಳು ಹೆಚ್ಚಾಗಿ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಕೀರ್ತಿ ತನ್ನಿ ಎಂದು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್. ಮುನಿಯಪ್ಪ ಕಿವಿಮಾತು ಹೇಳಿದರು.ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಾಜವೇಲು, ಪೊಲೀಸ್ ಇಲಾಖೆಯ ರಾಷ್ಟ್ರೀಯ ಓಟಗಾರ ಜಗದೀಶ್, ಅಂತರಾಷ್ಟ್ರೀಯ ಏಷ್ಯನ್ ಕಬ್ಬಡಿ ತಂಡದ ಚಿನ್ನದ ಪದಕ ವಿಜೇತ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೊಲೀಸ್ ಇಲಾಖೆಯ ಉಷಾರಾಣಿ, ರಾಷ್ಟ್ರೀಯ ಓಟಗಾರ ಹಾಗೂ ಧಾರವಾಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಲಾಸ್, ಬಾಗಲಕೋಟೆ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಯಲಗಣ್ಣ, ಕೆ.ಎ.ಎ. ಸಮಿತಿ ಸದಸ್ಯ ರೆಡ್ಡಿ ಇದ್ದರು.

೨೯ಕೆಎಲ್‌ಆರ್-೪

ಬೆಂಗಳೂರಿನ ಚಾಮರಾಜಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನೆಟ್ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು.

Share this article