ಕನ್ನಡಪ್ರಭ ವಾರ್ತೆ ಪಾಂಡವಪುರ
ಸಂಘದ ಆಡಳಿತ ಮಂಡಳಿ ಉತ್ತಮ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಸಂಘಕ್ಕೆ ಬಿಎಂಸಿ ಘಟಕಕ್ಕೆ ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ಆರಂಭಕ್ಕೆ ಪ್ರಾಮಾಣಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕಿನ 7500 ರಬ್ಬರ್ ಮ್ಯಾಟ್‌ಗಳು ಮಂಜೂರಾಗಿವೆ. ಮತ್ತಷ್ಟು ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ರಬ್ಬರ್ ಮ್ಯಾಟ್‌ಗಳು, ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರಗಳನ್ನು ಸಹ ವಿತರಿಸಲಾಗುವುದು ಎಂದರು.ಡೇರಿಗಳಲ್ಲಿ ರಾಜಕೀಯ ಮಾಡದೆ ಎಲ್ಲರು ಜತೆಗೂಡಿ ಸಂಘದ ಅಭಿವೃದ್ಧಿಗೆ ಕೆಲಸ ಮಾಡಬೇಕು. ನಮ್ಮ ಒಕ್ಕೂಟದಿಂದ ಹಾಲು ದೆಹಲಿ, ಜಾರ್ಖಾಂಡ್, ಉತ್ತರ್‌ಕಾಂಡ್ ರಾಜ್ಯಗಳಿಗೆ ಹಾಲು ಪೂರೈಕೆಯಾಗುತ್ತಿದೆ. ಹಾಗಾಗಿ ಒಕ್ಕೂಟಕ್ಕೆ ಗುಣಮಟ್ಟದ ಹಾಲುಪೂರೈಕೆ ಮಾಡಬೇಕು ಎಂದರು.
ಈ ವೇಳೆ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿದರು. ಮಾರ್ಗವಿಸ್ತಾರ್ಣಾಧಿಕಾರಿ ಉಷಾ, ಡೇರಿ ಅಧ್ಯಕ್ಷೆ ಸರ್ವಮ್ಮ, ಉಪಾಧ್ಯಕ್ಷೆ ಆಶಾರಾಣಿ, ನಿರ್ದೇಶಕರಾದ ನಾಗಮಣಿ, ವಸಂತ, ಪುಟ್ಟಮಣಿ, ಪ್ರಮೀಳ, ಲೀಲಾವತಿ, ಶೋಭಾ ಬಿ.ಸಿ., ಪ್ರೇಮ, ಕಾರ್ಯದರ್ಶಿ ಹೇಮಾಕ್ಷಿ, ಶೈಲಾ, ಲಲಿತಮ್ಮ, ಮುಖಂಡರಾದ ಸಿದ್ದಲಿಂಗಪ್ಪ, ಶಿವಸ್ವಾಮಿ, ನಂಜಪ್ಪ, ಶಿವಲಿಂದರಾಧ್ಯ, ಬಿ.ಸಿ.ಲೋಕೇಶ್, ಈರಾಜ್, ಶಿವಣ್ಣ, ಕೆ.ಚಂದ್ರಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಕೈಸಲಾಮೂರ್ತಿ, ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕರಾದ ಬಿ.ಡಿ.ಚಂದ್ರಶೇಖರ್, ಶೈಲಾಮಹದೇವಪ್ಪ, ಉಮೇಶ್, ಅನು, ವರದರಾಜು, ರಮೇಶ್, ಚಂದ್ರು, ರವಿ ಸೇರಿದಂತೆ ಹಲವರು ಇದ್ದರು.