ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ₹15 ಸಾವಿರ ನಿಶ್ಚಿತ ಗೌರವಧನ ನಿಗದಿ, ನಗರ ಆಶಾಗಳಿಗೆ ಕನಿಷ್ಠ ₹2 ಸಾವಿರ ಗೌರವಧನ ಹೆಚ್ಚಿಸಬೇಕು, ರಾಜ್ಯಾದ್ಯಂತ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು, ಮೊಬೈಲ್ ಕೆಲಸಗಳ ಮೊದಲು ಕೈಬಿಡಬೇಕು. ಮೊಬೈಲ್ ಡೇಟಾ ಒದಗಿಸಿ, ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿಪಡಿಸಬೇಕು. ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಚ್ಯುಟಿ, ಪಿಎಫ್-ಇಎಸ್ಐ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬಿತ್ಯಾದಿ ಬೇಡಿಕೆಗಳಿಗಾಗಿ ಪ್ರತಿಭಟಿಸಲಾಗುವುದು ಎಂದು ಮಂಜುನಾಥ ತಿಳಿಸಿದರು.
ಎಐಯುಟಿಯುಸಿ ಮುಖಂಡರಾದ ತಿಪ್ಪೇಸ್ವಾಮಿ ಅಣಬೇರು, ಸಂಘದ ಪರ್ವೀನ್ ಬಾನು, ಬಿ.ಹಾಲಮ್ಮ, ಎಸ್.ಆರ್.ಇಂದಿರಾ, ಹಳದಮ್ಮ ಇತರರು ಇದ್ದರು.- - - -2ಕೆಡಿವಿಜಿ4: