ನವಲಗುಂದ: ಸರ್ಕಾರ ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿಯ ವರೆಗೆ ಕಾರ್ಮಿಕರಂದು ಪರಿಗಣಿಸಿ ಎಲ್ಲ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಾಸಿಕ ಕನಿಷ್ಠ ₹15000 ಪ್ರೋತ್ಸಾಹ ಧನ ನೀಡಬೇಕು, ಆಶಾ ಕಾರ್ಯಕರ್ತೆಯರು ಬಲಿಷ್ಟವಾದ ಮುಖಂಡತ್ವದೊಂದಿಗೆ ಒಗ್ಗಟ್ಟನ್ನು ಬೆಸೆದುಕೊಂಡು, ಹೋರಾಟದ ಸ್ಪಷ್ಟ ವಿಚಾರ, ನಿಲುವುಗಳೊಂದಿಗೆ ಉನ್ನತ ಹಂತಕ್ಕೆಗುರಿ ಮುಟ್ಟುಬೇಕಾಗಿ ಎಂದರು.
ಜಿಲ್ಲಾಧ್ಯಕ್ಷೆ ಭುವನಾ ಬಳ್ಳಾರಿ ಮಾತನಾಡಿ, ಆಶಾ ಕಾರ್ಯಕರ್ತರ ಪ್ರಥಮ ರಾಜ್ಯ ಮಟ್ಟದ ಸಮ್ಮೇಳನ ಕಲಬುರ್ಗಿಯಲ್ಲಿ ಸೆ. 13 ಮತ್ತು 14ರಂದು ನಡೆಯುತ್ತಿದ್ದು, ತಾಲೂಕಿನ ಎಲ್ಲ ಆಶಾ ಕಾರ್ಯಕರ್ತರು ಭಾಗವಹಿಸುವಂತೆ ಕರೆ ನೀಡಿದರು.ಇದೆ ವೇಳೆ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆಯರ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸರೋಜಾ ಮಡಿವಾಳರ, ಉಪಾಧ್ಯಕ್ಷರಾಗಿ ರೇಣುಕಾ ಬೋಗಾರ, ರೇಣುಕಾ ಹಣಸಿ, ರೇಣುಕಾ ಕುಂಬಾರ, ವಿಜಯಲಕ್ಷ್ಮೀ, ಸವಿತಾ ಕುಡಕಲಕಟ್ಟಿ ಕಾರ್ಯದರ್ಶಿಯಾಗಿ ಗೀತಾ ಸೂರ್ಯವಂಶಿ, ಜಂಟಿ ಕಾರ್ಯದರ್ಶಿಯಾಗಿ ಶಶಿಕಲಾ ಹೊಳ್ಳೆನ್ನವರ, ವಿದ್ಯಾ ಮೈತ್ರಿ ನಾಗಣ್ಣರ ಅವರನ್ನು ಆಯ್ಕೆ ಮಾಡಲಾಯಿತು.