ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಕಾರ್ಯಕಾರಿಣಿ ಸದಸ್ಯ
ಹಿಂದೂ ಸಂಸ್ಕೃತಿ, ಪರಂಪರೆ ಉಳಿವಿಗೆ ಮಾತೃ ಶಕ್ತಿ ಕೊಡುಗೆ ಅಪಾರ ಎಂದು ಆರ್‌ಎಸ್‌ಎಸ್ ಕಾರ್ಯಕಾರಿಣಿ ಸದಸ್ಯ ಸತ್ಯನಾರಾಯಣ ಹೇಳಿದರು.
ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನದ ಯಾತ್ರಿನಿವಾಸದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿಂದೂ ಪರಿಷತ್‌ಗೆ ೬೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂ ಸಮಾಜ ಮಾತೃಶಕ್ತಿಯಿಂದಲೇ ಸಂರಕ್ಷಣೆಯಾಗಿದೆ. ಈಗಲೂ ಧರ್ಮ, ಸಂಸ್ಕೃತಿ, ಪರಂಪರೆ ನಮ್ಮ ತಾಯಂದಿರಿಂದ ಬೆಳಗುತ್ತಿದೆ. ಧರ್ಮದ ಉಳವಿಗೆ ಮಾತೃ ತನ್ನ ಮಕ್ಕಳನ್ನು ಜಾಗೃತಗೊಳಿಸುವ ಕೆಲಸ ಮಾಡುವ ಅನಿವಾರ್ಯವಿದೆ ಎಂದರು.ಅಲ್ಲದೇ ವಿಶ್ವ ಹಿಂದೂ ಪರಿಷತ್‌ಗೆ ೬೦ ವರ್ಷ ಪೂರೈಸಿದ್ದು, ದೇಶಾದ್ಯಂತಹ ಅನೇಕ ಹೋರಾಟಗಳನ್ನು ನಡೆಸುವ ಮೂಲಕ ಹಿಂದೂ ಧರ್ಮ, ಸಂಸ್ಕೃತಿ, ಸನಾತನವನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇಂತಹ ಸಂದರ್ಭದಲ್ಲಿ ವಿಎಚ್‌ಪಿ ಸಂಘಟನೆಗೆ ಯುವಕರು ಇನ್ನಷ್ಟು ಶಕ್ತಿ ತುಂಬುವ ಮೂಲಕ ಹಿಂದುತ್ವದ ಸೇವೆಗೈಯಲು ಕೈಜೋಡಿಸಬೇಕೆಂದು ತಿಳಿಸಿದರು.
ಪ್ರತಿ ಮನೆ-ಮನೆಯಲ್ಲಿ ವಿಶ್ವ ಹಿಂದೂ ಪರಿಷತ್ತಿಗೆ ಕಾರ್ಯಕರ್ತನಾಗುವ ನಿಟ್ಟಿನಲ್ಲಿ ಸಂಘಟನೆ ಬಲಪಡಿಸಬೇಕು. ಧರ್ಮ, ದೇಶದ ಉಳಿವಿಗೆ ವಿಎಚ್‌ಪಿಯಂತಹ ಸಂಘಟನೆಗಳ ಅಗತ್ಯವಿದೆ. ಸಂಘಟನೆಯಿಂದ ಇನ್ನಷ್ಟು ಧರ್ಮ ಕಾರ್ಯಗಳು ನಡೆಯಲಿದೆ ಎಂದು
ಹಾಲಪ್ಪಯ್ಯನಮಠದ ಅರ್ಚಕ ಸೋಮಶೇಖರಯ್ಯಸ್ವಾಮಿ ತಿಳಿಸಿದ್ದಾರೆ.