ದಾವಣಗೆರೆ: ಆಷಾಢ ಮಾಸದಲ್ಲಿ ಶುಕ್ರವಾರ ಅಜ್ಜಿಹಬ್ಬ ಆಚರಿಸಿ ಹೋಳಿಗೆ ಎಡೆಕೊಡುವುದು ದಾವಣಗೆರೆಯಲ್ಲಿರುವ ಸಂಪ್ರದಾಯ. ಅದರಂತೆ ಆಷಾಢ ತಿಂಗಳಲ್ಲಿ ಬರುವ ನಾಲ್ಕು ಶುಕ್ರವಾರಗಳು ಮುಗಿದ ಬಳಿಕ ಅಜ್ಜಿ ಹಬ್ಬ ಮಾಡಲಾಗುತ್ತದೆ.
ನಿಟುವಳ್ಳಿಯ ಶೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿಯೇ ದೇವಿ ಮೂರ್ತಿ ಪ್ರತಿಷ್ಠಾಪಿಸಿ, ಮಣ್ಣಿನ ಕುಡಿಕೆಯಲ್ಲಿ ಬೇವಿನ ಸೊಪ್ಪು ಇಟ್ಟು ಪೂಜೆ ಸಲ್ಲಿಸಿದ ನಂತರ ಅದನ್ನು ದೇವಸ್ಥಾನದ ಪಾದಗಟ್ಟೆಗೆ ತರಲಾಯಿತು. ಸಂಜೆ 4 ಗಂಟೆ ಆಗುತ್ತಿದ್ದಂತೆಯೆ ತಾಯಂದಿರು ಮಕ್ಕಳೊಂದಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದರು.
ಸಿಹಿ ಪದಾರ್ಥ ನೈವೇದ್ಯೆ ಮಾಡಲು ಬಾಳೆ ಎಲೆಯಲ್ಲಿ ತರಲಾಗಿತ್ತು. ಎಡೆ ನೀಡಿ ಬಂದವರು ಅಮ್ಮನವರಿಗೆ ಪ್ರದಕ್ಷಣೆ ಹಾಕಿ ಧನ್ಯತಾಭಾವ ತಾಳಿದರು. ಭಕ್ತರು ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.- - - -26ಕೆಡಿವಿಜಿ44, 45ಃ: