ಮೋದಿ ಜನ್ಮದಿನಕ್ಕೆ ಅಶೋಕ್‌ ನೇತೃತ್ವ ಪದ್ಮನಾಭನಗರ ಕೆರೆಯಲ್ಲಿ ಗಂಗಾರತಿ

KannadaprabhaNewsNetwork |  
Published : Sep 21, 2026, 03:45 AM IST
Gaudanapalya Lake 1 | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನ ಮತ್ತು ಅವರ ಸಾರ್ವಜನಿಕ ಸೇವೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಆಗಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರ ನೇತೃತ್ವದಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೌಡನಪಾಳ್ಯ ಕೆರೆಯಲ್ಲಿ ಭಾನುವಾರ ರಾತ್ರಿ ಭಕ್ತಿಪೂರ್ವಕ ತೆಪ್ಪೋತ್ಸವ ಮತ್ತು ಗಂಗಾರತಿ ನಡೆಸಲಾಯಿತು.

-ಗಣೇಶ, ದುರ್ಗಮ್ಮ ದೇವಿ ಮೂರ್ತಿ ಕೂರಿಸಿ ತೆಪ್ಪೋತ್ಸವಕನ್ನಡಪ್ರಭ ವಾರ್ತೆ ಬೆಂಗಳೂರು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನ ಮತ್ತು ಅವರ ಸಾರ್ವಜನಿಕ ಸೇವೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಆಗಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರ ನೇತೃತ್ವದಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೌಡನಪಾಳ್ಯ ಕೆರೆಯಲ್ಲಿ ಭಾನುವಾರ ರಾತ್ರಿ ಭಕ್ತಿಪೂರ್ವಕ ತೆಪ್ಪೋತ್ಸವ ಮತ್ತು ಗಂಗಾರತಿ ನಡೆಸಲಾಯಿತು.

ಹೂವು ಮತ್ತು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡ ತೆಪ್ಪದಲ್ಲಿ ಗಣೇಶಮೂರ್ತಿ ಮತ್ತು ದುರ್ಗಮ್ಮ ದೇವಿಯ ಮೂರ್ತಿ ಕೂರಿಸಿ ತೆಪ್ಪೋತ್ಸವ ನೇರವೇರಿಸಲಾಯಿತು. ಇದೇ ವೇಳೆ ಕಾಶಿಯಿಂದ ಆಗಮಿಸಿದ್ದ ಪುರೋಹಿತರ ತಂಡವು ಸುಮಾರು 30 ನಿಮಿಷಗಳ ಕಾಲ ಗಂಗಾರತಿ ಮಾಡಿದರು. ಇದೇ ವೇಳೆ ಸ್ಥಳೀಯ ಶಾಸಕರು ಆಗಿರುವ ಆರ್‌.ಅಶೋಕ್‌ ಅವರು ಪುನರುಜ್ಜೀವನಗೊಂಡಿರುವ ಗೌಡನಪಾಳ್ಯ ಕೆರೆ ಉದ್ಘಾಟಿಸಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವಿವಿಧ ಬಡಾವಣೆಗಳಿಂದ ಬಂದಿದ್ದ ಸಾವಿರಾರು ಜನರು ಕೆರೆ ಸುತ್ತ ಜಮಾಯಿಸಿ ತೆಪ್ಪೋತ್ಸವ ಮತ್ತು ಗಂಗಾರತಿ ಕಣ್ತುಂಬಿಕೊಂಡರು. ಇಸ್ಕಾನ್‌ ದೇವಾಲಯದ ಭಜನಾ ತಂಡದ ಸದಸ್ಯರು ಭಜನಾ ಗೀತೆಗಳನ್ನು ಹಾಡಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲ ಸಾರ್ವಜನಿಕರಿಗೂ ಲಾಡು ಪ್ರಸಾದ ವಿತರಿಸಲಾಯಿತು.

ಕೆರೆ ಅಭಿವೃದ್ಧಿಯಿಂದ ಅಂತರ್ಜಲ ವೃದ್ಧಿ: ಸಂಸದ ತೇಜಸ್ವಿ ಸೂರ್ಯ

ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನ ನಡೆಯುತ್ತಿದೆ. ಸ್ಥಳೀಯ ಶಾಸಕ ಆರ್‌.ಅಶೋಕ್‌ ಅವರ ನೇತೃತ್ವದಲ್ಲಿ ಗೌಡನಪಾಳ್ಯ ಕೆರೆ ಪುನರುಜ್ಜೀವನಗೊಳಿಸಲಾಗಿದೆ. ಇದರಿಂದ ಸುತ್ತಮುತ್ತಲ ಬೋರ್‌ ವೆಲ್‌ಗಳ ಅಂತರ್ಜಲ ವೃದ್ಧಿಯಾಗಲಿದೆ. ಜತೆಗೆ ತೆಪ್ಪೋತ್ಸವ ಮತ್ತು ಗಂಗಾರತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ರಿಯಲ್‌ ಎಸ್ಟೇಟ್ ದಂಧೆಗಾಗಿ ನಗರದ ಕೆರೆಗಳು ಮತ್ತು ಉದ್ಯಾನಗಳನ್ನು ನುಂಗಲು ಹೊರಟಿದೆ. ಆರ್.ಅಶೋಕ್‌ ಅವರು ಕೆರೆ ಪುನರುಜ್ಜೀನಗೊಳಿಸಿದ ಮಾದರಿ ಬೇಕಾ ಅಥವಾ ಕೆರೆ, ಉದ್ಯಾನಗಳನ್ನು ನುಂಗುವ ಮಾದರಿ ಬೇಕಾ ಎಂದು ಜನರೇ ತೀರ್ಮಾನಿಸಬೇಕು. ನಗರದ ಕೆರೆ, ಉದ್ಯಾನಗಳನ್ನು ಉಳಿಸಲು ಜನ ಜಾಗೃತರಾಗಬೇಕು ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್‌ ಶ್ರೀನಿವಾಸ್‌, ಮಾಜಿ ಉಪಮೇಯರ್‌ ಎಲ್‌.ಶ್ರೀನಿವಾಸ್‌, ಬಿಬಿಎಂಪಿ ಮಾಜಿ ಸದಸ್ಯರಾದ ಆಂಜನಪ್ಪ, ಎ.ಎಚ್‌.ಬಸವರಾಜ್‌, ವೆಂಕಟಸ್ವಾಮಿ ನಾಯ್ಡು, ಸಂಗಾತಿ ವೆಂಕಟೇಶ್, ಉಮೇಶ್‌ ಕಬ್ಬಾಳ್‌, ಚೋಳರಾಜು, ಪ್ರಮೀಳಾ ಆರ್.ಆಶೋಕ್‌, ಶರತ್‌ ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

-ಬಾಕ್ಸ್‌-)))))

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ

ಆಗಬೇಕು: ವಿಪಕ್ಷ ನಾಯಕ ಅಶೋಕ್‌

ದೇಶವೇ ಕುಟುಂಬ ಎಂದು ಭಾವಿಸಿ ದೇಶ ಸೇವೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎಂದು ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಭಾನುವಾರ ರಾತ್ರಿ ಗೌಡನಪಾಳ್ಯ ಕೆರೆಯಲ್ಲಿ ತೆಪ್ಪೋತ್ಸವ ಮತ್ತು ಗಂಗಾರತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಪರಿಸರ ಉಳಿಸಲು ಪ್ರಧಾನಿ ಮೋದಿ ಅವರು ಹಲವು ಕೆಲಸ ಮಾಡುತ್ತಿದ್ದಾರೆ. ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ ಪುಣ್ಯ ಪುರುಷ ಪ್ರಧಾನಿ ನರೇಂದ್ರ ಮೋದಿ. ಭಾರತ ಪ್ರಧಾನಿ ಮೋದಿ ಅವರ ನೇತ್ವದಲ್ಲಿ ವಿಶ್ವಗುರುವಾಗುವ ಹಾದಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ದೇಶ ಸೇವೆಗೆ ಬದುಕು ಮೂಡಿಪಾಗಿಟ್ಟಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಿ ಆಯ್ಕೆ ಆಗಬೇಕು. ಅವರು ಹೆಚ್ಚು ಕಾಲ ಬದುಕಿ ಈ ದೇಶದ ಸೇವೆ ಮಾಡಬೇಕು. ಅವರಿಗೆ ಮತ್ತಷ್ಟು ಆಯಸ್ಸು ಮತ್ತು ಆರೋಗ್ಯ ವೃದ್ಧಿಸಲಿ ಎಂದು ನಾವೆಲ್ಲ ಪ್ರಾರ್ಥಿಸೋಣ ಎಂದು ಹೇಳಿದರು.

-ಚಿತ್ರ ಶೀರ್ಷಿಕೆ-))))

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗೌಡನಪಾಳ್ಯ ಕೆರೆಯಲ್ಲಿ ಭಾನುವಾರ ರಾತ್ರಿ ಸ್ಥಳೀಯ ಶಾಸಕ ಆರ್‌.ಅಶೋಕ್‌ ಅವರ ನೇತೃತ್ವದಲ್ಲಿ ತೆಪ್ಪೋತ್ಸವ ಮತ್ತು ಗಂಗಾರತಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಣಮಟ್ಟದ ವೈದ್ಯಕೀಯ ಸೇವೆ ಸರ್ಕಾರದ ಗುರಿ: ಡಿಕೆ
ಜೈವಿಕ ಇಂಧನದ ಕುರಿತು ಜಪಾನ್‌ ಅಧಿಕಾರಿಗಳ ಜತೆ ಸುಧೀಂದ್ರ ಚರ್ಚೆ