ಕನ್ನಡಪ್ರಭ ವಾರ್ತೆ ರಾಮನಾಥಪುರ
ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಪುಷ್ಕರಣಿ ಹಾಗೂ ಚತುರ್ಯುಗಮೂರ್ತಿ ಶ್ರೀರಾಮೇಶ್ವರ ದೇವಾಲಯದ ಪಕ್ಕದಲ್ಲಿ ನಿರ್ಮಾಣವಾಗಿರುವ ಶೃಂಗೇರಿ ಶಾಖಾ ಮಠದ ಶ್ರೀ ಭಾರತೀತೀರ್ಥ ಕೃಪಾಭವನದಲ್ಲಿ ಗೌರವ ಸಮರ್ಪಣೆ ಪಡೆದ ನಂತರ ಕಾಮಗಾರಿ ನಡೆಯುತ್ತಿರುವ ದೇವಾಲಯಗಳ ನಿರ್ಮಾಣದ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಸುಮಾರು 2 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶೃಂಗೇರಿ ಮಠದ ಜಾಗದಲ್ಲಿ ದೇವಾಲಯ ಹಾಗೂ ಮಠದ ಅಭಿವೃದ್ಧಿಗೆ ಸಹಾಯ ಸಹಕಾರ ನೀಡಲಾಗುವುದು. ಅಲ್ಲದೇ ಹೆಚ್ಚಿನ ರೀತಿಯಲ್ಲಿ ಇನ್ನೂ ಹಲವಾರು ಭಕ್ತರಿಂದ ಸಹಾಯ ಸಹಕಾರ ಕೊಡಿಸುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶೃಂಗೇರಿ ಶ್ರೀ ಶಂಕರಮಠದ ವ್ಯವಸ್ಥಾಪಕರಾದ ಕೊಣನೂರು ಕೆ. ಗಣೇಶ್ ಹಿರಿಯ ಪತ್ರಕರ್ತ ಎಂ.ಎನ್. ಕುಮಾರಸ್ವಾಮಿ ಮುಂತಾದವರು ಇದ್ದರು.