ಸಿದ್ದಲಿಂಗ ಕಿಣಗಿ
ಜಿಲ್ಲೆಯಲ್ಲಿ ಎಲ್ಲಿಯೂ ನಿರ್ಮಾಣಗೊಳ್ಳದ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭದ ವೃತ್ತ ಸಿಂದಗಿಯಲ್ಲಿ ನಿರ್ಮಾಣವಾಗುತ್ತಿರುವುದು ಪಟ್ಟಣದ ಜನತೆಗೆ ಖುಷಿ ತಂದಿದೆ. ಜತೆಗೆ ಈ ಕಾರ್ಯ ಕೈಗೆತ್ತಿಕೊಂಡಿರುವ ಶಾಸಕ ಅಶೋಕ ಮನಗೂಳಿ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಆಲಮೇಲ ರಸ್ತೆಯ ಬಳಿಯಿರುವ 1994 ರಲ್ಲಿ ದಿ.ಎಂ.ಸಿ.ಮನಗೂಳಿ ಅವರ ಅಧಿಕಾರವಧಿಯಲ್ಲಿ ನಿರ್ಮಾಣಗೊಂಡಿರುವ ಗಾಂಧಿ ವೃತ್ತವನ್ನು ಪ್ರಸ್ತುತ ಸ್ಥಳಾಂತರಿಸಿ, ಹಿಂದಿನ ಬದಿಯಲ್ಲಿ ಭವ್ಯವಾಗಿ ಗಾಂಧಿ ವೃತ್ತ ನಿರ್ಮಾಣ ಮಾಡಲಾಗುತ್ತಿದೆ. ಈ ಸ್ಥಳಾಂತರಿಸಿದ ಜಾಗದಲ್ಲಿ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭದ ವೃತ್ತ ಇನ್ನೇನು ಕೆಲವೇ ತಿಂಗಳಲ್ಲಿ ತಲೆ ಎತ್ತಲಿದೆ. ಈಗಾಗಲೇ ಕಾಮಗಾರಿ ಕಾರ್ಯ ಭರದಿಂದ ಸಾಗಿದ್ದು, 2026ರ ಜನವರಿ 26ರ ಗಣರಾಜ್ಯೋತ್ಸವದಂದು ಬಹುತೇಕ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.ಏನಿದು ಅಶೋಕ ಸ್ತಂಭ?:
ಶಾಸಕ ಅಶೋಕ ಮನಗೂಳಿ ಕನಸಿದು:
ಈ ಲಾಂಛನ ನಮ್ಮ ದೇಶದ ಪ್ರತಿಕವಾಗಿದೆ. ಇದೊಂದು ರಾಷ್ಟ್ರಪ್ರೇಮದ ಕಾರ್ಯ. ಎಲ್ಲ ಸರ್ಕಾರಿ ಕಚೇರಿಗಳು ಇದೆ ದಾರಿಯಲ್ಲಿ ಇರುವುದರಿಂದ ಈ ಜಾಗೆ ಸೂಕ್ತವಾಗಿದೆ. ಅಶೋಕ ಸ್ತಂಭ ನಿರ್ಮಾಣವು ಸುಮಾರು ₹15 ಲಕ್ಷ ವೆಚ್ಚದ ಕಾಮಗಾರಿಯಲ್ಲಿ ನಡೆಯುತ್ತಿದೆ. ನೂತನ ಗಾಂಧಿ ವೃತ್ತದ ಕಾರ್ಯವು ಅಂದಾಜು ₹20 ಲಕ್ಷ ವೆಚ್ಚದಲ್ಲಿದ್ದು ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. ಸಿಂದಗಿ ಮತಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಮಂಜೂರಾದ ಕಾಮಗಾರಿಗಳು ಬೇಗನೆ ಆಗುವುದಿಲ್ಲ. ಕೆಲವು ತಾಂತ್ರಿಕ ತೊಂದರೆಗಳು ಬರುವುದು ಸ್ವಾಭಾವಿಕ. ಸಾರ್ವಜನಿಕರ ಸಹಕಾರ ಮುಖ್ಯವಾಗಿ ಬೇಕು ಹಂತ ಹಂತವಾಗಿ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವುದೇ ನನ್ನ ಮೊದಲ ಗುರಿ.
ಸಿಂದಗಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಶೋಕ ಸ್ತಂಭದ ಕಾರ್ಯ ಒಂದು ಇತಿಹಾಸ. ಶಾಸಕರ ಈ ಸೃಜನಶೀಲತೆ ಅಭಿವೃದ್ಧಿಗೆ ಪೂರಕವಾಗಿದೆ. ರಾಷ್ಟ್ರಪ್ರೇಮವನ್ನು ಮೆರೆಸುವ ಕಾರ್ಯ ಇದಾಗಿದ್ದು ಅವರ ಕಾರ್ಯ ಯೋಜನೆಗಳೊಂದಿಗೆ ನಾವು ಸದಾ ಜೊತೆಗಿದ್ದೇವೆ. ಆದಷ್ಟು ಬೇಗನೆ ಅಶೋಕ ಸ್ತಂಭ ಮತ್ತು ನೂತನ ಗಾಂಧಿ ವೃತ್ತ ನಿರ್ಮಾಣವಾಗಲಿದೆ.