ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ನಿವೃತ್ತ ಮುಖ್ಯಶಿಕ್ಷಕ ಕೃಷ್ಣಮೂರ್ತಿ ವಿ.ಎ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಭಾಗವತ ರಘುರಾಮ ಹೊಳ್ಳ, ಕಲಾವಿದ ಜಬ್ಬಾರ್ ಸಮೋ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಕಲಾವಿದ, ಬರಹಗಾರ ರವಿಶಂಕರ ಭಟ್ ವಳಕ್ಕುಂಜ ಅವರಿಗೆ ವಿಶೇಷ ಗೌರವ ನೀಡಲಾಯಿತು. ಹಿರಿಯ ಮದ್ದಳೆವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಯಕ್ಷನಿಧಿ ಸಮರ್ಪಿಸಲಾಯಿತು. ಕರಾಟೆ ಪಟು, ಕಿರಿಯ ತೀರ್ಪುಗಾರ ಮಂಗಳೂರಿನ ಆದ್ಯ ಅನಿಲ್ ಕುಮಾರ್‌ಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.
ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತಸರ ರಘುನಾಥ ಎಲ್.ವಿ., ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ ಮಾತನಾಡಿದರು. ಗೌರವಾಧ್ಯಕ್ಷ ವೇದಮೂರ್ತಿ ಕೆ. ಪ್ರಭಾಕರ ಭಟ್, ಕಿರಣ್ ಮಂಜನಬೈಲು ಉಪಸ್ಥಿತರಿದ್ದರು. ಚೈತನ್ಯ ಮಂಗೇಬೆಟ್ಟು, ಸಂಚಾಲಕ ಸದಾಶಿವ ನೆಲ್ಲಿಮಾರ್, ಸುರೇಂದ್ರ ಭಟ್ ಪತ್ರಗಳನ್ನು ವಾಚಿಸಿದರು. ಯಕ್ಷ ಚೈತನ್ಯದ ಅಧ್ಯಕ್ಷ ಕೃಷ್ಣಮೂರ್ತಿ ಕಟೀಲು ಸ್ವಾಗತಿಸಿದರು. ಶಿವದತ್ತ ನಿರೂಪಿಸಿದರು. ಕಾರ್ಯದರ್ಶಿ ಕೃಷ್ಣಮೂರ್ತಿ ಮಾಯಣ ವಂದಿಸಿದರು.