ಮದ್ದೂರು ತಾಲೂಕಿನಲ್ಲಿ 22 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮುದಾಯವಿದೆ. ಸಮುದಾಯದಕ್ಕೆ ಅನುಕೂಲವಾಗಲು ನಗರ ವ್ಯಾಪ್ತಿ ಸ್ಮಶಾನ ಮತ್ತು ರಸ್ತೆ ಅಭಿವೃದ್ಧಿಗೆ ಶೀಘ್ರ ಚಾಲನೆ ನೀಡಲಾಗುವುದು.
ಕನ್ನಡಪ್ರಭ ವಾರ್ತೆ ಮದ್ದೂರು
ಶ್ರೀಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದು, ಸಂಘದ ನೂತನ ಕಟ್ಟಡಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ನಗರದ ಶ್ರೀಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ 22 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮುದಾಯವಿದೆ. ಸಮುದಾಯದಕ್ಕೆ ಅನುಕೂಲವಾಗಲು ನಗರ ವ್ಯಾಪ್ತಿ ಸ್ಮಶಾನ ಮತ್ತು ರಸ್ತೆ ಅಭಿವೃದ್ಧಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.
ಶ್ರೀಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಶಿವಸಿದ್ಧೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸಹಕಾರ ತತ್ವದಡಿ ಸಂಘವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಸದಸ್ಯರಿಗೆ ಹಲವು ರೀತಿಯಲ್ಲಿ ಆರ್ಥಿಕ ಅನುಕೂಲವಾಗುತ್ತಿರುವುದು ಸಂತೋಷದ ವಿಷಯ ಎಂದರು.
ಸಂಘದ ಅಧ್ಯಕ್ಷ ಪಿ.ರಾಜಶೇಖರ್ ಮಾತನಾಡಿ, ಸಂಘದ ನಿರ್ದೇಶಕರು ಹಾಗೂ ಷೇರುದಾರರ ಸಹಕಾರದಿಂದ ಸಂಘವು ಲಾಭದಾಯಕವಾಗಿ ನಡೆಯುತ್ತಿದೆ. ಶೀಘ್ರ ಸಂಘದ ಕಟ್ಟಡ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಯತ್ತ ಸಂಘವನ್ನು ಕೊಡಯ್ಯಲಾಗುವುದು ಎಂದರು.
ಸಂಘದ ಮಾಜಿ ಅಧ್ಯಕ್ಷ ಬಿ.ವಿ.ಮಂಜುನಾಥ್ ಸಂಘ ಬೆಳೆದು ಬಂದ ಬಗ್ಗೆ ಸಭೆಯಲ್ಲಿ ವಿವರಿಸಿದರು. ಎಸ್.ಐ.ಹೊನ್ನಲಗೆರೆ ಶಿವ ಕ್ಷೇತ್ರ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ,ಸಂಘದ ಉಪಾಧ್ಯಕ್ಷ ಸಿದ್ದಲಿಂಗಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಮಣಿ, ಎಸ್.ವ್ಯಾಸ ವಿಶ್ವ ವಿದ್ಯಾಲಯ ಕುಲಾಧಿಪತಿ ಡಾ.ಎಚ್.ಆರ್.ದಯಾನಂದ್ ಸ್ವಾಮಿ, ಉದ್ಯಮಿಗಳಾದ ಕೆ.ಎಚ್.ವೀರಭದ್ರಪ್ಪ, ಎಂ.ಆರ್.ಉಮಾಪತಿ ಬೆಂಗಳೂರು, ಸಹಕಾರ ಇಲಾಖೆಯ ಎಚ್.ಆರ್.ನಾಗಭೂಷಣ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.
ಸೆ. ೨೬ ಕ್ಕೆ ಡಾ.ಅರ್ಜುನಪುರಿ ಅಪ್ಪಾಜಿಗೌಡ, ಡಾ.ಪಾ.ಶ.ಶ್ರೀನಿವಾಸ ದತ್ತಿ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ಮಂಡ್ಯಡಾ.ಅರ್ಜುನಪುರಿ ಅಪ್ಪಾಜಿಗೌಡ ಅಭಿಮಾನಿ ಬಳಗ, ಸುಶೀಲಾ ಮತ್ತು ಡಾ. ಪಾ.ಶ.ಶ್ರೀನಿವಾಸ ಅಭಿಮಾನಿ ಬಳಗ ಹಾಗೂ ಕರ್ನಾಟಕ ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟ (ರಿ.), ಮಂಡ್ಯ ಇವರ ಸಹಯೋಗದಲ್ಲಿ ಡಾ. ಅರ್ಜುನಪುರಿ ಅಪ್ಪಾಜಿಗೌಡ ಸ್ಮಾರಕ ೧೦ನೇ ದತ್ತಿ ಪ್ರಶಸ್ತಿ ಮತ್ತು ಸುಶೀಲಾ ಹಾಗೂ ಡಾ. ಪಾ.ಶ.ಶ್ರೀನಿವಾಸ ಸ್ಮಾರಕ ೭ನೇ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ಸೆ. ೨೯ರ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ನಗರದ ಗಾಂಧಿಭವನದಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ. ರಾಮಲಿಂಗಯ್ಯ ವಹಿಸಲಿದ್ದಾರೆ. ಡಾ. ಅರ್ಜುನಪುರಿ ಅಪ್ಪಾಜಿಗೌಡ ಪತ್ರಕರ್ತರ ಪ್ರಶಸ್ತಿಗೆ ಮದ್ದೂರಿನ ಹಿರಿಯ ಪತ್ರಕರ್ತ ಶಿವನಂಜಯ್ಯ ಮತ್ತು ಡಾ. ಪಾ.ಶ. ಶ್ರೀನಿವಾಸ ಸಾಹಿತ್ಯ ಪ್ರಶಸ್ತಿಗೆ ಚಿಂತಕರಾದ ಕೆ.ಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಗಿದೆ.ಪ್ರಖ್ಯಾತ ಶಸ್ತ್ರ ತಜ್ಞ ವೈದ್ಯ ಡಾ. ವಿ.ಎಲ್.ನಂದೀಶ್ ಪ್ರಶಸ್ತಿ ವಿತರಣೆ ಮಾಡಲಿದ್ದು, ನಿವೃತ್ತ ವಿಷಯ ಪರಿವೀಕ್ಷಕ ನಂಜರಾಜು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಕರಾವಳಿ ಒಕ್ಕೂಟದ ಅಧ್ಯಕ್ಷ ಸುಧಾಕರಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಡಾ. ಪ್ರದೀಪ್‌ಕುಮಾರ್ ಹೆಬ್ರಿ ಅವರ ‘ಸಾಹಿತ್ಯವೇ ಬದುಕ ರಸದೌತಣ’ ಕೃತಿಯನ್ನು ಸಾಹಿತಿ ಡಾ.ಎಸ್. ಶ್ರೀನಿವಾಸ ಶೆಟ್ಟಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.