ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಶತಮಾನೋತ್ಸವ ಆಚರಿಸಿಕೊಂಡ ಶ್ರೀಕೃಷ್ಣರಾಜೇಂದ್ರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಾಮಾನ್ಯ ಜನರ ಸಂಘಟನೆ, ಸಂವರ್ಧನೆಗೊಳಿಸಿ ಆರ್ಥಿಕ ಸ್ಥಿತಿ ಸುಧಾರಿಸುವ ಮೂಲಕ ಸುಸ್ಥಿತಿಯ ಜೀವನಕ್ಕೆ ಕೊಂಡೊಯ್ಯುವಲ್ಲಿ ಸಹಕಾರ ಕ್ಷೇತ್ರ ಪಾತ್ರ ಗಣನೀಯವಾಗಿದೆ ಎಂದರು.
ಪಟ್ಟಣದ ಶ್ರೀಕೃಷ್ಣರಾಜೇಂದ್ರ ಸಹಕಾರ ಸಂಘವು ಕಳೆದ ಹಲವು ವರ್ಷಗಳಿಂದ ಸುಧೀರ್ಘವಾಗಿ ಲಾಭದಿಂದ ನಡೆಯುತ್ತಿದೆ. ಇದಕ್ಕೆ ಆಡಳಿತ ಮಂಡಳಿ ಪಾರದರ್ಶಕ ಆಡಳಿತವೇ ಕಾರಣ. ಮುಖ್ಯವಾಗಿ ಸಕಾಲದಲ್ಲಿ ಸಹಕಾರ ಶಿಕ್ಷಣ ನಿಧಿಯನ್ನು ಪಾವತಿ ಜಿಲ್ಲೆಯಲ್ಲಿಯೇ ಮಂಚೂಣಿ ಸ್ಥಾನದಲ್ಲಿದೆ ಎಂದು ಶ್ಲಾಘೀಸಿದರು.ಸಂಘದ ಅಧ್ಯಕ್ಷ ವಸಂತ್ ಕುಮಾರ್ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆ ವತಿಯಿಂದ ಪಾವತಿಸುವ ಸಹಕಾರ ಶಿಕ್ಷಣ ನಿಧಿ ಚೆಕ್ ಅನ್ನು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಂ.ನಂದೀಶ್ ಅವರಿಗೆ ಹಸ್ತಾಂತರಿಸಿದರು.
ಈ ವೇಳೆಸಂಘದ ಉಪಾಧ್ಯಕ್ಷ ನಾರಾಯಣಸ್ವಾಮಿ, ನಿರ್ದೇಶಕರಾದ ಎಸ್.ರಘು, ಉಮೇಶ್, ಲಕ್ಷ್ಮಣ್ ಸಿಂಗ್, ಕುಬೇರ್ ಸಿಂಗ್, ಪರಮೇಶ್, ಎಸ್.ಟಿ.ರಾಜು, ಮಹದೇವನಾಯಕ ಇತರರು ಉಪಸ್ಥಿತರಿದ್ದರು.
ಕೆ.ಆರ್.ಪೇಟೆ:ಸಹಕಾರ ಸಂಘಗಳ ಮೂಲಕ ಶೇರುದಾರ ರೈತರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.
ಬಹಳ ಶ್ರಮದಿಂದ ಸಂಘವನ್ನು ಸ್ಥಾಪಿಸಲಾಗಿದೆ. ಇದರ ಉಳಿವಿಗೆ ಎಲ್ಲರೂ ಶ್ರಮಿಸಬೇಕು. ಯಾವುದೆ ರೀತಿಯಲ್ಲಿಯೂ ಭಿನ್ನಾಭಿಪ್ರಾಯವನ್ನು ಹೊಂದಬಾರದು. ಸಮಸ್ಯೆಗಳಿದ್ದರೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.ಈ ವೇಳೆ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.