ಪಾಂಚಜನ್ಯ ಗಣಪತಿ ಅದ್ಧೂರಿ ವಿಸರ್ಜನಾ ಮೆರವಣಿಗೆ

KannadaprabhaNewsNetwork |  
Published : Sep 24, 2026, 01:30 AM IST
 ಪಾಂಚಜನ್ಯ ಗಣೇಶ ವಿಸರ್ಜನಾ ಮಹೋತ್ಸವ | Kannada Prabha

ಸಾರಾಂಶ

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಸೆಪ್ಟೆಂಬರ್ 14ರಂದು ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಿದ್ದು, 9 ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊನೆಯ ದಿನ ಬುಧವಾರ ಮಧ್ಯಾಹ್ನದ ವೇಳೆಗೆ ಬೃಹತ್ ಶೋಭಾಯಾತ್ರೆ ಪ್ರಾರಂಭವಾಯಿತು.

ಕಲಾತಂಡದೊಡನೆ ಬೃಹತ್ ಶೋಭಯಾತ್ರೆ, ಡಿಜೆ ಸದ್ದಿಗೆ ಕುಣಿತ

ಕನ್ನಡ ಪ್ರಭವಾರ್ತೆ ಹಾಸನ

ಪ್ರತಿವರ್ಷದಂತೆ ಈ ವರ್ಷವೂ ಕೂಡ ಪಾಂಚಜನ್ಯ ಗಣಪತಿ ವಿಸರ್ಜನಾ ಮಹೋತ್ಸವ ಅಂಗವಾಗಿ ಬುಧವಾರ ಬೃಹತ್ ಶೋಭಯಾತ್ರೆ ಕಲಾತಂಡದೊಡನೆ ನಡೆದು, ಡಿಜೆ ಸದ್ದಿಗೆ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಸೆಪ್ಟೆಂಬರ್ 14ರಂದು ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಿದ್ದು, 9 ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊನೆಯ ದಿನ ಬುಧವಾರ ಮಧ್ಯಾಹ್ನದ ವೇಳೆಗೆ ಬೃಹತ್ ಶೋಭಾಯಾತ್ರೆ ಪ್ರಾರಂಭವಾಯಿತು.

ಶ್ರೀರಾಮನ ವಿಗ್ರಹ, ಗೋವುಗಳು, ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ, ಕೆಂಪೇಗೌಡರ ಪ್ರತಿಮೆ, ಬ್ಯಾಂಡ್ ಸೆಟ್, ವಾದ್ಯಗೋಷ್ಠಿ, ಕೇಸರಿ ಬಾವುಟದ ಪ್ರದರ್ಶನ ಆಕರ್ಷಣೆ ಒಂದು ಕಡೆಯಾದರೇ ಮತ್ತೊಂದು ಕಡೆ ಡಿಜೆ ಸದ್ದಿಗೆ ಪುರುಷರು ಮತ್ತು ಮಹಿಳೆಯರು ಹೆಜ್ಜೆ ಹಾಕಿ ಗಮನಸೆಳೆದರು. ಇನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿಗೆ ಬಂಕ್ ಹೊಡೆದು ಪಾಂಚಜನ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಪ್ರೀತಂ ಜೆ. ಗೌಡ ಮಾಧ್ಯಮದೊಂದಿಗೆ ಮಾತನಾಡಿ, ಹಿಂದೂ ಮಹಾ ಗಣಪತಿ ವಿಸರ್ಜನಾ ಮಹೋತ್ಸವದ ಶೋಭಯಾತ್ರೆಗೆ ಅಧಿಕೃತವಾಗಿ ಚಾಲನೆ ದೊರಕಿದೆ. ಅನೇಕ ಸಮಾಜ ಸೇವಕರು, ಜನಪ್ರತಿನಿಧಿಗಳು ಸೇರಿದಂತೆ ಅನೇಕ ಪಕ್ಷದ ಮುಖಂಡರು ಭಾಗಿಯಾಗಿದ್ದಾರೆ. ಪಕ್ಷವನ್ನು ಮೀರಿ, ಸಮಾಜವನ್ನು ಒಗ್ಗೂಡಿಸಿ ಎಲ್ಲರನ್ನೂ ಒಟ್ಟಿಗೆ ಕೊಂಡೂಯ್ಯುವಂತಹ ಈ ಕಾರ್ಯದಲ್ಲಿ ಇಡೀ ಸಮಾಜ ಶೋಭಾಯಾತ್ರೆಯಲ್ಲಿ ಒಂದಾಗುತ್ತಿದೆ ಎಂದು ಹೇಳಿದರು. ಜಿಲ್ಲೆ ಎಲ್ಲ ಸಮಸ್ತ ಜನರಿಗೆ ಗಣಪತಿ ಒಳಿತನ್ನು ಮಾಡಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ

ತಿಳಿಸಿದರು.

ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ವಾಸು, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಖಜಾಂಚಿ ಲಾವಣ್ಯ, ನಿರ್ದೇಶಕ ಶರತ್, ರಕ್ಷಿತ್ ಭಾರಧ್ವಜ್, ಆರ್.ಎಸ್.ಎಸ್. ಮುಖಂಡ ಮೋಹನ್, ಶೋಭನ್ ಬಾಬು, ಶಾಲ್ ಅಗರವಾಲ್, ಮೋಹನ್, ಅವಿನಾಶ್, ಪ್ರಣವ್ ಭಾರಧ್ವಜ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾಭ್ಯಾಸ ವೇಳೆ ಕಲಿಕೆ ತುಡಿತ, ಉತ್ಸಾಹ ಸ್ವಾಭಿಮಾನದ ಬದುಕಿಗೆ ಸಹಕಾರಿ: ಡಾ. ಕೃಷ್ಣೇಗೌಡ
ಪ್ರತಾಪ ಸಿಂಹರಿಂದ ದಲಿತ ಸಮಿತಿಗೆ ಅಪಮಾನ: ದಸಂಸ ಜಿಲ್ಲಾ ಸಂಚಾಲಕ ಅರೇಹಳ್ಳಿ ನಿಂಗರಾಜು ಆಕ್ಷೇಪ