ನೀರು ಬಿಡುವ ಭರವಸೆ; ಪ್ರತಿಭಟನೆ ಅಂತ್ಯ

KannadaprabhaNewsNetwork |  
Published : Nov 14, 2026, 02:45 AM IST
ಫೋಟೋ ಶೀರ್ಷಿಕೆ 13ಎಸ್‌ಡಿಟಿ1 ಸವದತ್ತಿಯ ಮಲಪ್ರಭಾ ಬಲದಂಡೆ ಕಾಲುವೆ ಜಾಕ್‌ವೆಲ್್ಲಗೆ ನುಗ್ಗುತ್ತಿರುವ ರೈತರನ್ನು ತಡೆಗಟ್ಟುತ್ತಿರುವ ಪೊಲೀಸರು.ಫೋಟೋ ಶೀರ್ಷಿಕೆ 13ಎಸ್‌ಡಿಟಿ2/3 ಸವದತ್ತಿಯ ಮಲಪ್ರಭಾ ಬಲದಂಡೆ ಕಾಲುವೆ ಜಾಕ್‌ವೆಲ್್ಲಗೆ ನುಗ್ಗುತ್ತಿರುವ ರೈತರನ್ನು ಪೊಲೀಸರು ವಶಪಡಿಸಿಕೊಂಡು ವ್ಯಾನ್‌ದಲ್ಲಿ ಕರೆದೊಯ್ಯುತ್ತಿರುವುದು. | Kannada Prabha

ಸಾರಾಂಶ

ರಾಜ್ಯದಲ್ಲಿ ಆವರಿಸಿರುವ ಬರಗಾಲದಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜನ ಜಾನುವಾರಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿದೆ. ಹೀಗಾಗಿ, ಅಚ್ಚುಕಟ್ಟು ಪ್ರದೇಶದ ಎಲ್ಲ ಕಾಲುವೆಗಳಿಗೆ ಕುಡಿಯುವ ನೀರನ್ನು ಹರಿಸಬೇಕೆಂದು ಒತ್ತಾಯಿಸಿ ಗುರುವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಸಿರುವ ರೈತರನ್ನು ಶುಕ್ರವಾರ ಸಂಜೆ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು

ಕನ್ನಡಪ್ರಭ ವಾರ್ತೆ ಸವದತ್ತಿ

ರಾಜ್ಯದಲ್ಲಿ ಆವರಿಸಿರುವ ಬರಗಾಲದಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜನ ಜಾನುವಾರಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿದೆ. ಹೀಗಾಗಿ, ಅಚ್ಚುಕಟ್ಟು ಪ್ರದೇಶದ ಎಲ್ಲ ಕಾಲುವೆಗಳಿಗೆ ಕುಡಿಯುವ ನೀರನ್ನು ಹರಿಸಬೇಕೆಂದು ಒತ್ತಾಯಿಸಿ ಗುರುವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಸಿರುವ ರೈತರನ್ನು ಶುಕ್ರವಾರ ಸಂಜೆ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ನಂತರ, ಶಾಸಕರು ಹಾಗೂ ಅಧಿಕಾರಿಗಳು ನೀರು ಬಿಡುವ ಭರವಸೆ ನೀಡಿದರು.ಪಟ್ಟಣದ ಬಲದಂಡೆ ಕಾಲುವೆಯ ಜಾಕ್‌ವೆಲ್‌ ಬಳಿ ಗೋಕಾಕ-ಧಾರವಾಡ ರಾಜ್ಯ ಹೆದ್ದಾರಿಯನ್ನು ಬಂದ್‌ ಮಾಡಿ ಶುಕ್ರವಾರವೂ ಪ್ರತಿಭಟನೆ ಮುಂದುವರಿಸಿದ ರೈತರು, ಕಾಲುವೆಗೆ ನೀರು ಬಿಡುವವರೆರೂ ಜಾಗ ಬಿಟ್ಟು ಕದಲುವದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸಂಜೆಯವರೆಗೂ ಮೇಲಾಧಿಕಾರಿಗಳಿಂದ ನೀರು ಬಿಡುವ ಕುರಿತು ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ರೈತರು ಜಾಕ್‌ವೆಲ್‌ಗೆ ನುಗ್ಗಿ ತಾವೇ ನೀರನ್ನು ಕಾಲುವೆಗೆ ಹರಿಸಲು ಮುಂದಾದಾಗ ಪೊಲೀಸರು ರೈತರನ್ನು ವಶಕ್ಕೆ ಪಡೆದು ಪೊಲೀಸ್ ವ್ಯಾನ್‌ನಲ್ಲಿ ಪ್ರತಿಭಟನಾ ಸ್ಥಳದಿಂದ ಸವದತ್ತಿ ಠಾಣೆಗೆ ಕರೆದೊಯ್ದರು.------

ರೈತ ಹೋರಾಟಗಾರರಾದ ಶಂಕರಗೌಡ ಪಾಟೀಲ, ಶಂಕರ ಅಂಬಲಿ ಮಾತನಾಡಿ, ಸಂಕಷ್ಟದಲ್ಲಿರುವ ರೈತರಿಗೆ ಕುಡಿಯುವ ನೀರಿಗಾಗಿ ಇಂದು ಭಿಕ್ಷೆ ಬೇಡುವ ಸ್ಥಿತಿ ಬಂದಿದೆ.ಇದು ವಿಪರ್ಯಾಸದ ಸಂಗತಿ. ನಮ್ಮ ನೀರನ್ನು ನಮಗೆ ಬಿಡಲು ಅಧಿಕಾರಿಗಳು ಮೀನಾಮೇಷ ಎನಿಸುತ್ತಿರುವುದು ರೈತ ಸಮುದಾಯಕ್ಕೆ ದೊಡ್ಡ ಅನ್ಯಾಯ ಮಾಡಲಾಗುತ್ತಿದೆ. ಹಿಂಗಾರಿ ಬೆಳೆಗಳು ಮಳೆಯಿಲ್ಲದೆ ಕಮರಿ ಹೋಗುತ್ತಿದ್ದು, ಜನ ಮತ್ತು ಜಾನುವಾರುಗಳಿಗೆ ನೀರಿನ ಭವಣೆ ತೀವ್ರವಾಗಿದೆ. ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ ಎಂದರು.

ಗುರುವಾರ ಬೆಳಗ್ಗೆ 11ಗಂಟೆಯಿಂದ ಶುಕ್ರವಾರ ಸಂಜೆ 6 ಗಂಟೆಯವರೆಗೆ ರೈತರು ಶಾಮಿಯಾನ ಹಾಕಿ ರಸ್ತೆ ಬಂದ್‌ ಮಾಡಿದ್ದರಿಂದ ಸಾರಿಗೆ ಸಂಚಾರಕ್ಕೆ ಬಹಳ ತೊಂದರೆಯಾಯಿತು. ಶುಕ್ರವಾರ ಸುಕ್ಷೇತ್ರ ಯಲ್ಲಮ್ಮನ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೂ ಪ್ರತಿಭಟನೆಯ ಬಿಸಿ ತಟ್ಟಿದ್ದು, ಗೋಕಾಕ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಸಾಕಷ್ಟು ವಾಹನ ಸವಾರರು, ಸಾರ್ವಜನಿಕರು ಪ್ರತಿಭಟನೆಯ ಪರದಾಟ ನಡೆಸಬೇಕಾಯಿತು.ಪ್ರತಿಭಟನೆಗೆ ಸಿಪಿಐಗಳಾದ ಸುರೇಶ ಬೆಂಡೆಗುಂಬಳ, ಶಿವಾನಂದ ಗುಡಗನಟ್ಟಿ, ಮಲ್ಲಯ್ಯ ಮಠಪತಿ ಹಾಗೂ ಪೊಲೀಸ್ ಸಿಬ್ಬಂದಿಯ ಸೂಕ್ತ ಭದ್ರತೆ ಒದಗಿಸಿದ್ದರು. ಶ್ರೀಶೈಲ್ ಕೌಜಗೇರಿ, ಜಿ.ಎನ್.ಶ್ರೀಹರಿ, ಮಹಾಂತೇಶ ಪಂಚನ್ನವರ, ಮುತ್ತು ಕೌಜಗೇರಿ, ಬಸವರಾಜ ಸಾಬಳೆ, ವಿಠ್ಠಲ ಜಾಧವ, ಹೇಮರಡ್ಡಿ ಹುಚರಡ್ಡಿ, ಕೆ.ಡಿ.ರಾಯನಗೌಡರ, ವಾಸುರಡ್ಡಿ ಹುಚರಡ್ಡಿ, ಎನ್.ಕೆ.ರಾಯನಗೌಡರ, ಯಲ್ಲರಡ್ಡಿ ಹುಚರಡ್ಡಿ, ರಮೇಶ ಹಳಕಟ್ಟಿ, ಪ್ರವೀಣ ಯರಗಟ್ಟಿ ಹಾಗೂ ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.-----ಬಾಕ್ಸ್‌ಭಾನುವಾರದಿಂದ ನೀರು ಬಿಡುವ ಭರವಸೆವಶಕ್ಕೆ ಪಡೆದಿದ್ದ ಪ್ರತಿಭಟನಾಕಾರರನ್ನು ನಂತರ ಬಿಡುಗಡೆ ಮಾಡಿದ ಬಳಿಕ ಪೊಲೀಸ್ ಠಾಣೆಯಿಂದ ರಾತ್ರಿ ವೇಳೆ ರೈತರು ಜಾಕ್‌ವೆಲ್‌ಗೆ ತೆರಳಿದರು. ರವಿವಾರದಿಂದ ಕಾಲುವೆಗೆ ಒಂದು ವಾರದ ಮಟ್ಟಿಗೆ ನೀರು ಬಿಡಲು ಶಾಸಕ ವಿಶ್ವಾಸ ವೈದ್ಯ ಮತ್ತು ಮೇಲಾಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ಸಾಂಕೇತಿಕವಾಗಿ ಕಾಲುವೆಗೆ ನೀರು ಹರಿಸಲು ಜಾಕ್‌ವೆಲ್‌ಗೆ ಪೂಜೆ ಸಲ್ಲಿಸಿ ಅಲ್ಲಿಂದ ರೈತರು ತೆರಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ