ಮಂಜುನಾಥ ಪ್ಯಾಟಿ
ನಾವು ಹೊಸ ಸಂಪೂರ್ಣ ಉದ್ಯಮದ ಪ್ರಮುಖ ಮಾನದಂಡ ಹೊಂದಿದ್ದು, ಭಾರತದಲ್ಲಿ ಎಕ್ಸಪರ್ಟ್ ಬುಕ್ ಅಲ್ಟ್ರಾದೊಂದಿಗೆ ಎಐ (ಕೃತಕ ಬುದ್ದಿಮತ್ತೆ) ಚಾಲಿತ ಕ್ರಾಂತಿ ಮುನ್ನಡೆಸಲು ಹೆಮ್ಮೆಪಡುತ್ತೇವೆ ಎಂದು ಏಸೂಸ್ (ASUS)ನ ಗ್ಲೋಬಲ್ ಸಹ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ಸನ್ ಹು ಹೇಳಿದರು.
ನವದೆಹಲಿಯಲ್ಲಿ ನಡೆದ ಎಕ್ಸಪರ್ಟ್ ಬುಕ್ ಅಲ್ಟ್ರಾ ಆ್ಯಂಡ್ ನ್ಯೂ ಎಕ್ಸಪರ್ಟ್ ಬುಕ್ ಮಾಡಲ್ಸ್ ಬಿಡುಗಡೆ ಕಾರ್ಯಕ್ರಮದಲ್ಲಿ ಲ್ಯಾಪ್‌ಟಾಪ್ ಬಿಡುಗಡೆ ಮಾಡಿ ಮಾತನಾಡಿದರು. ನಾವು ಭಾರತೀಯ ವ್ಯವಹಾರಗಳಿಗೆ ಎಐ ಯುಗದಲ್ಲಿ ಸಂಪೂರ್ಣ ವಿಶ್ವಾಸದಿಂದ ಅಳೆಯಲು ಸುರಕ್ಷಿತ, ಬಾಳಿಕೆ ಬರುವ ಮತ್ತು ಬುದ್ಧಿವಂತ ಅಡಿಪಾಯ ಒದಗಿಸುತ್ತಿದ್ದೇವೆ ಎಂದು ಭರವಸೆ ನೀಡಿದರು.ಭಾರತದ ದಾರ್ಶನಿಕ ನಾಯಕರ ಉಜ್ವಲತೆಯೊಂದಿಗೆ ಕಾರ್ಯನಿರ್ವಹಿಸಲು, ಸಬಲೀಕರಣಗೊಳಿಸಲು ಎಕ್ಸಪರ್ಟ್ ಬುಕ್ ವಿನ್ಯಾಸಗೊಳಿಸಲಾಗಿದೆ. ಐಟಿ ತಜ್ಞರಿಂದ ವಿಶ್ವಾಸಾರ್ಹ, ಚಿಂತೆಯಿಲ್ಲದ ವ್ಯವಹಾರಕ್ಕಾಗಿ ನಿರ್ಮಿಸಲಾಗಿದೆ. ಭಾರತದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯ ವೈವಿಧ್ಯಮಯ ಅಗತ್ಯಗಳನ್ನು ಗುರುತಿಸಿ ನಾವು ಎಕ್ಸಪರ್ಟ್ ಬುಕ್ ಪಿ ಸರಣಿಯನ್ನು ಗಮನಾರ್ಹವಾಗಿ ವಿಸ್ತರಿಸುತ್ತಿದ್ದೇವೆ. ಈ ಶ್ರೇಣಿಯು ಭಾರತದ ವೃತ್ತಿಪರರು ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ ಬಹುಮುಖ ಎಂಜಿನ್ ಆಗಿದ್ದು, ನಮ್ಮ ದೃಢವಾದ ಚಿಂತೆ ಮುಕ್ತ ವ್ಯಾಪಾರ ಭರವಸೆ ನೀಡುವಾಗ ಬಹು ಸಂರಚನೆಗಳಲ್ಲಿ ಆಯ್ಕೆಯ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.
ಬಾಕ್ಸ್...
ಏಸೂಸ್ ಎಕ್ಸ್‌ಪರ್ಟ್ ಬುಕ್ ಅಲ್ಟ್ರಾ ಫೆದರ್‌ಲೈಟ್ 0.99 ಕೆಜಿ ಮೆಗ್ನೀಸಿಯಮ್ ಚಾಸಿಸ್
14.0 ಇಂಚಿನ 3ಕೆ 120Hz ಆಂಟಿ-ಗ್ಲೇರ್ ಟಚ್‌ಸ್ಕ್ರೀನ್ ಟ್ಯಾಂಡೆಮ್ ಒಎಲ್‌ಇಡಿ ಡಿಸ್ಲ್ಪೈ
26 ಗಂಟೆಗಳ ಬ್ಯಾಟರಿ ಬಾಳಿಕೆ ನೀಡುವ 70ಡಬ್ಲ್ಯುಎಚ್ ಬ್ಯಾಟರಿಇಂಡಿಯಾದ ಎಸೂಸ್ ವಾಣಿಜ್ಯ ಪಿಸಿ ಮತ್ತು ಸ್ಮಾರ್ಟ್‌ಫೋನ್ ಸಿಸ್ಟಮ್ ಬಿಸಿನೆಸ್ ಗ್ರೂಪ್‌ನ ಉಪಾಧ್ಯಕ್ಷ ದಿನೇಶ್ ಶರ್ಮಾ ಮಾತನಾಡಿ, ಎಕ್ಸ್‌ಪರ್ಟ್ ಬುಕ್‌ನ ಸ್ಕ್ರೀನ್ ಹಾನಿಯಿಂದ ಸಂರಕ್ಷಣೆ ಹಾಗೂ ಬಾರವಾದ ವಸ್ತುಗಳಿಂದ ಡ್ಯಾಮೆಜ್ ಕಂಟ್ರೊಲ್ ಭದ್ರತೆ ಸೇರಿದಂತೆ ಬ್ಯಾಟರಿ ಬ್ಯಾಕಪ್ ಕುರಿತು ಪ್ರಾತ್ಯಕ್ಷತೆಯಲ್ಲಿ ವಿಸ್ತೃತವಾಗಿ ವಿವರಿಸಿದರು.ಫ್ಲಿಪ್‌ಕಾರ್ಟ್ ಉಪಾಧ್ಯಕ್ಷ ಸುಜಿತ್ ಅಗಾಶೆ ಮಾತನಾಡಿ, ಮಾರುಕಟ್ಟೆಯಲ್ಲಿ ಎಸೂಸ್ ಎಕ್ಸ್‌ಪರ್ಟ್ ಬುಕ್ ದರ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಕುರಿತು ವಿವರಿಸಿದ ಅವರು ಗ್ರಾಹಕರ ಪಿಲ್ಡ್‌ಬ್ಯಾಕ್ ಸೇರಿದಂತೆ ವಾರಂಟಿ ಹಾಗೂ ಸರ್ವಿಸ್ ಭದ್ರತೆ ಕುರಿತು ಭರವಸೆ ನೀಡಿದರು.ಯುಟ್ಯೂಬ್ ಪಾಡ್‌ಕಾಸ್ಟರ್ ರಾಜ್‌ಶಮಾನಿ ಅವರು, ಎಕ್ಸ್‌ಪರ್ಟ್ ಬುಕ್ ಕಾರ್ಯಕ್ಷಮತೆ ಹಾಗೂ ಗ್ರಾಹಕರ ಸ್ನೇಹಿಯಾಗಿರುವ ವಿಶೇಷತೆಗಳ ಕುರಿತು ತಿಳಿಸಿದರು. ಎಸೂಸ್ ಎಕ್ಸ್‌ಪರ್ಟ್ ಬುಕ್ ಸೇರಿದಂತೆ ಎಸೂಸ್ ಲ್ಯಾಪಟಾಪ್, ಕಮರ್ಷಿಯಲ್ ಪಿಸಿ ಕುರಿತು ಪ್ರಾತ್ಯಕ್ಷತೆ ಏರ್ಪಡಿಸಿ ಪ್ಲಿಲ್ಡ್‌ಬ್ಯಾಕ್ ಸಂಗ್ರಹಿಸಿದರು.ಕೋಟ್...ಫ್ಲಿಪ್‌ಕಾರ್ಟ್‌ನೊಂದಿಗಿನ ನಮ್ಮ ಕಾರ್ಯತಂತ್ರದ ಸಹಯೋಗವು ಜಾಗತಿಕ ಶಕ್ತಿ ಕೇಂದ್ರವಾಗಿದ್ದು, ಅವರ ಪಕ್ಕದಲ್ಲಿ ವಿಶ್ವಾಸಾರ್ಹ ಪಾಲುದಾರರಿದ್ದಾರೆ. ಎಸೂಸ್‌ನ ಎಂಟರ್‌ಪ್ರೈಸ್-ಗ್ರೇಡ್ ಸೇವಾ ಶ್ರೇಷ್ಠತೆಯನ್ನು ಫ್ಲಿಪ್‌ಕಾರ್ಟ್‌ನ ಸಾಟಿಯಿಲ್ಲದ ಡಿಜಿಟಲ್ ವ್ಯಾಪ್ತಿ ಮತ್ತು ವ್ಯವಹಾರ-ಸ್ನೇಹಿ ಪರಿಸರ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಮೂಲಕ ಸ್ಕೆಲಿಂಗ್ ಸ್ಟಾರ್ಟ್‌ಅಪ್‌ನಿಂದ ಹಿಡಿದು ಪ್ರತಿಯೊಂದು ಉದ್ಯಮವನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. -ಸ್ಯಾಮ್ಸನ್ ಹು, ಎಸೂಸ್ ಗ್ಲೋಬಲ್ ಸಹ ಸಿಇಒ.