ಕನ್ನಡ ನಾಡಿನಲ್ಲಿ ವಿವಿಧ ರಾಜ್ಯಗಳ ಜನರಿಗೆ ಆಶ್ರಯ ನೀಡಿದೆ. ಅಲ್ಲದೆ ನಾಡಲ್ಲಿ ವಾಸವಿರುವ ಜನರು ಕನ್ನಡ ಭಾಷೆ ಕಲಿತು ಮಾತನಾಡುವ ಮೂಲಕ ಕನ್ನಡ ಭಾಷಾಭಿಮಾನ ಹೊಂದಿದ್ದಾರೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಗುಂಡ್ಲುಪೇಟೆ : ಕನ್ನಡ ನಾಡಿನಲ್ಲಿ ವಿವಿಧ ರಾಜ್ಯಗಳ ಜನರಿಗೆ ಆಶ್ರಯ ನೀಡಿದೆ. ಅಲ್ಲದೆ ನಾಡಲ್ಲಿ ವಾಸವಿರುವ ಜನರು ಕನ್ನಡ ಭಾಷೆ ಕಲಿತು ಮಾತನಾಡುವ ಮೂಲಕ ಕನ್ನಡ ಭಾಷಾಭಿಮಾನ ಹೊಂದಿದ್ದಾರೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದರು.
ಗುಂಡ್ಲುಪೇಟೆ ತಾಲೂಕು ಕೇರಳ, ತಮಿಳುನಾಡು ಗಡಿಯಲ್ಲಿವೆ.ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತಮಿಳು ಸಂಘ ಕೈಜೋಡಿಸಿದ್ದಾರೆ ಅಲ್ಲದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವುದು ಮೆಚ್ಚುಗೆ ಸಂಗತಿ ಎಂದರು.
ಗುಂಡ್ಲುಪೇಟೆ ರಾಜ್ಯದ ಕೊನೆಯ ವಿಧಾನಸಭೆ ಕ್ಷೇತ್ರವಾಗಿದೆ. ಆದರೂ ಗುಂಡ್ಲುಪೇಟೆ ಕ್ಷೇತ್ರದ ಕೆ.ಎಸ್.ನಾಗರತ್ನಮ್ಮ, ಅಬ್ದುಲ್ ನಜೀರ್ ಸಾಬ್, ಎಚ್.ಕೆ.ಶಿವರುದ್ರಪ್ಪ, ಎಚ್.ಎಸ್.ಮಹದೇವ ಪ್ರಸಾದ್ ಅವರು ರಾಜ್ಯದ ಅಭಿವೃದ್ಧಿಗೆ ಶ್ರಮಿಸಿ ಜಿಲ್ಲೆಯ ಹೆಸರು ಉಳಿಸಿದ್ದಾರೆ ಎಂದರು.
ನಾನು ಶಾಸಕನಾದ ಬಳಿಕ ಕ್ಷೇತ್ರಕ್ಕೆ ನೂರು ಕೋಟಿಗೂ ಹೆಚ್ಚು ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅಲ್ಲದೆ ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಕ್ಷೇತ್ರದಲ್ಲಿ ಶೇ.೯೯ ರಷ್ಟು ಯಶ ಕಂಡಿವೆ ಎಂದರು.
1.5 ಕೋಟಿ ರು. ಕಾಂಪೌಂಡ್
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣಕ್ಕೆ ಸುತ್ತು ಗೋಡೆಗೆ ೧.೫ ರು. ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕೂಡ ಆಗಿದೆ. ಕೆಲ ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದೇನೆ ಎಂದರು.
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಟಿ.ರಮೇಶ್ ಬಾಬು ಮಾತನಾಡಿ, ಭಾಷಾಭಿಮಾನ ಕೇವಲ ಆಚರಣೆಗೆ ಸೀಮಿತವಾಗದೆ ನಿತ್ಯ ನಾಡು ನುಡಿ ಬಗೆಗಿನ ಅರಿವು ಮೂಡಿಸಬೇಕು ಎಂದರು.
ಶಿಕ್ಷಕ ಬಿ.ಸುಬ್ಬನಾಯಕ ಮುಖ್ಯ ಭಾಷಣ ಮಾಡಿದರು. ಎಸ್‌ಎಸ್‌ಎಲ್‌ಸಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕರು ಸನ್ಮಾನಿಸಿ ಅಭಿನಂದಿಸಿದರು.
ಪುರಸಭೆ ಅಧ್ಯಕ್ಷ ಕಿರಣ್ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್, ಸದಸ್ಯರಾದ ಮಹಮದ್ ಇಲಿಯಾಸ್, ದೀಪು, ಅಣ್ಣಯ್ಯಸ್ವಾಮಿ, ಎನ್.ಕುಮಾರ್, ಶ್ರೀನಿವಾಸ್, ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಪರಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಆರ್.ಅಲೀಂಪಾಶ, ಸಿಡಿಪಿಒ ಎಂ.ಹೇಮಾವತಿ ಹಾಗೂ ಕನ್ನಡ ಪರ, ಪ್ರಗತಿ ಸಂಘಟನೆಗಳ ಪ್ರಮುಖರು ಇದ್ದರು.