ಹಿಮಾಲಯಕ್ಕಿಂತ ದೊಡ್ಡ ಚರಿತ್ರೆ ಅಟಜೀದು

KannadaprabhaNewsNetwork | Published : Dec 26, 2023 1:31 AM

ಸಾರಾಂಶ

ವಾಜಪೇಯಿ ಅವರ 99ನೇ ಜನ್ಮದಿನಾಚರಣೆಯಲ್ಲಿ ಆರ್‌ಎಸ್‌ಎಸ್‌ ಪ್ರಮುಖ ಉಮಾಜಿ ಗೋಸಾಯಿ ಮಾತನಾಡಿ ಹಿಮಾಲಯಕ್ಕಿಂತ ದೊಡ್ಡ ಚರಿತ್ರೆ ಅಟಜೀದು ಎಂದು ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಜೀವನ ಸಂಘರ್ಷಮಯವಾಗಿದ್ದು, ಅವರು ಹಿಮಾಲಯಕ್ಕಿಂತ ದೊಡ್ಡ ಚರಿತ್ರೆ ಹೊಂದಿದ ಮಹಾನಾಯಕ ಎಂದು ರಾಷ್ಟ್ರೀಯ ಸ್ವಯಂ ಸಂಘದ ಪ್ರಮುಖ ಉಮಾಜಿ ಗೋಸಾಯಿ ಹೇಳಿದರು.

ನಗರದ ಟಿಳಕವಾಡಿ ಪ್ರದೇಶದಲ್ಲಿರುವ ಬಿಜೆಪಿ ಗ್ರಾಮಾಂತರ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಜಪೇಯಿ ಅವರ 99ನೇ ಜನ್ಮದಿನಾಚಾರಣೆ ಹಾಗೂ ಸುಶಾಸನ ದಿನಾಚರಣೆಯಲ್ಲಿ ಮಾತನಾಡಿ, ಅವರಲ್ಲಿದ್ದ ದೃಢಸಂಕಲ್ಪ, ರಾಜನೀತಿ ಹಾಗೂ ದೂರ ದೃಷ್ಟಿಯಿಂದ ರಾಷ್ಟ್ರಕ್ಕೆ ಸಮರ್ಪಿತವಾದ ಜೀವನ ಅವರದ್ದಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ್ದ ಇವರು ಜನಸಂಘದ ಅಧ್ಯಕ್ಷರಾಗಿ ದೇಶಾದ್ಯಂತ ಸಂಚರಿಸಿ ತನು, ಮನ ಧನದಿಂದ ಪಕ್ಷ ಸಂಘಟಿಸಿದ ಸಂಘಟನಾ ಚತುರ ಅಟಲಜಿಯಾಗಿದ್ದರು ಎಂದರು. 1980 ರಲ್ಲಿ ಮರುನಾಮಕರಣಗೊಂಡ ಬಿಜೆಪಿಯ ಪ್ರಥಮ ಅಧ್ಯಕ್ಷರಾಗಿ ಕಟ್ಟಿದ ರಾಜಕೀಯ ಪಕ್ಷ ಇಂದು ಪ್ರಪಂಚದ‌‌ ಅತ್ಯಂತ‌ ದೊಡ್ಡದಾದ ಪಕ್ಷವಾಗಿ ಬೆಳದಿದೆ. ಅಟಲಜೀ ಒಬ್ಬ ಕವಿ, ಪತ್ರಕರ್ತ ಹಾಗೂ ಚಾಣಾಕ್ಷ ರಾಜಕಾರಣಿಯಾಗಿ ಭಾಷಾತಜ್ಞರಾಗಿದ್ದರು. ಇವರ ಮಾತಿಗೆ ವಿರೊಧಿಗಳು ತಲೆತೂಗುತಿದ್ದರು. ಮೂರು ಬಾರಿ ಪ್ರಧಾನಮಂತ್ರಿಗಳಾಗಿ ಯಾವ ವಿರೋಧಿಗಳಿಗೂ ದೃತಿಗೆಡದೆ ತಗೆದುಕೊಂಡ ಕಾರ್ಗಿಲ್ ಯುದ್ದ, ದೇಶ ಜೋಡಣೆಯ ಚತುಷ್ಪತ ರಸ್ತೆ ನಿರ್ಮಾಣ, ಪೊಕ್ರಾನ ಅಣು ಸ್ಪೋಟ್, ವಿದೇಶಾಂಗ ನೀತಿ ಹಾಗೂ ಅಭಿವೃದ್ಧಿ ಪರ ಐತಿಹಾಸಿಕ ನಿರ್ಣಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಮೃದು ಸ್ವಭಾವದ ಅಟಲಜೀ ಕಾರ್ಗಿಲ್ ಯುದ್ದದ ವೇಳೆ ಪಾಕಿಸ್ತಾನದ ಪರ್ವೇಜ್ ಮುಶ್ರಫ್ ಅಣುಬಾಂಬ್ ಸ್ಪೋಟದ ಬಗ್ಗೆ ಬೆದರಿಕೆ ಹಾಕಿದ್ದರು. ಇದಕ್ಕೆ ತಕ್ಕ ಉತ್ತರ ಕೊಟ್ಟಿದ್ದ ಅಟಲಜಿ ಅಣುಬಾಂಬದ ಸ್ಫೋಟದ ಬಳಿಕ ನಾಲ್ಕೈದು ವರ್ಷಗಳಲ್ಲಿ ಭಾರತ‌ ಮತ್ತೆ ಎದ್ದು ನಿಲ್ಲುತ್ತೆ. ಆದರೆ, ಸಂಪೂರ್ಣ ಪಾಕಿಸ್ತಾನದಲ್ಲಿ ‌ಮರು ದಿನದ ಸೂರ್ಯೋದಯ ನೋಡಲು ಒಬ್ಬರು ಇರುವುದಿಲ್ಲ ಎಂದಿದ್ದರು. ಹೀಗೆ ಅವರು ಹೇಳಿದ ದಿನವೇ ಪಾಕ್ ಸೋತು ಸುಣ್ಣವಾಗಿತ್ತು ಎಂದರು.

ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ದೇಶಕ್ಕಾಗಿ ಸಮರ್ಪಿತರಾದ ಅಟಲಜಿಯವರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಭಾರತವನ್ನು ಪ್ರಪಂಚವೇ ಗೌರವಿಸುವ ಕಾರ್ಯ ಮಾಡಿದ ನರೇಂದ್ರ ಮೋದಿಗೆ ಅಟಲ ಬಿಹಾರಿ ವಾಜಪೇಯಿ ಪ್ರೇರಣೆ. ವಾಜಪೇಯಿ ಅವರು 24 ಪಕ್ಷಗಳನ್ನು ಒಟ್ಟುಗೂಡಿಸಿ ದೇಶಭಾರ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ರಾಜನೀತಿ ಪಂಡಿತರಾಗಿದ್ದರು ಎಂದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯೆ ಧನಶ್ರೀ ಸರದೇಸಾಯಿ, ವಿಭಾಗ ಸಹಸಂಘಟನಾ‌ ಕಾರ್ಯದರ್ಶಿ ಜಯಪ್ರಕಾಶ್ ಎಂ.ಸಿ., ಸಂದೀಪ ದೇಶಪಾಂಡೆ, ಧನಂಜಯ ಜಾಧವ, ಪ್ರಮೋದ ಕೊಚೇರಿ, ಎಫ್.ಎಸ್.ಸಿದ್ದನಗೌಡರ, ಡಾ.ಸೋನಾಲಿ ಸರ್ನೋಬತ್‌, ಅಭಯ ಅವಲಕ್ಕಿ, ರಾಜಶ್ರೀ ವಡೆಯರ, ರಂಜನಾ ಕೊಲಕಾರ, ಸುರೇಶ ಪಾಟೀಲ, ಪ್ರದೀಪ‌‌ ಸಾಣಿಕೊಪ್ಪ, ಸಂತೋಷ ದೇಶನೂರ ಬಿಜೆಪಿ ಪದಾಧಿಕಾರಿಗಳು ಇದ್ದರು. ಸುಭಾಷ್ ಪಾಟೀಲ ಸ್ವಾಗತಿಸಿದರು,ಯಲ್ಲೇಶ ಕೊಲಕಾರ ನಿರೂಪಿಸಿದರು. ನಿತಿನ ಚೌಗಲೆ ವಂದಿಸಿದರು.

Share this article