ಲಕ್ಕವಳ್ಳಿ ಶಾಲೆಗೆ ಶಾಸಕರ ಅನುದಾನ: ಜಿ.ಎಚ್.ಶ್ರೀನಿವಾಸ್ ಭರವಸೆ

KannadaprabhaNewsNetwork |  
Published : Dec 26, 2023, 01:31 AM IST
ಗ್ರಾಮಜ್ಯೋತಿ ವಿದ್ಯಾ ಸಂಸ್ಥೆಯ ಪ್ರೌಢಶಾಲೆ ವಾರ್ಷಿಕೋತ್ಸವ ಸಮಾರಂಭ | Kannada Prabha

ಸಾರಾಂಶ

ಲಕ್ಕವಳ್ಳಿ ಗ್ರಾಮದ ಗ್ರಾಮಜ್ಯೋತಿ ವಿದ್ಯಾಸಂಸ್ಥೆ ಪ್ರೌಢಶಾಲೆಯ ವಿಭಾಗದಿಂದ ಆಯೋಜಿಸಿದ್ದ 2023--24ನೇ ಸಾಲಿನ ವಾರ್ಷಿಕೋತ್ಸವ ಉದ್ಘಾಟಿಸಿದ ಶಾಸಕ ಶ್ರೀನಿವಾಸ್ ವಿದ್ಯಾ ಸಂಸ್ಥೆಗೆ ಶಾಸಕರ ಮತ್ತು ಇತರ ಕಡೆಗಳಿಂದಲೂ ಅನುದಾನ ಕಲ್ಪಿಸುವ ಭರವಸೆ ವ್ಯಕ್ತಪಡಿಸಿದರು

ಕನ್ನಡಪ್ರಭ ವಾರ್ತೆ, ತರೀಕೆರೆ

ಲಕ್ಕವಳ್ಳಿ ಗ್ರಾಮಜ್ಯೋತಿ ವಿದ್ಯಾ ಸಂಸ್ಥೆ ಪ್ರೌಢಶಾಲೆಗೆ ಶಾಸಕರ ಮತ್ತು ಇತರ ಕಡೆಗಳಿಂದಲೂ ಅನುದಾನ ಕಲ್ಪಿಸುತ್ತೇನೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಲಕ್ಕವಳ್ಳಿ ಗ್ರಾಮದ ಗ್ರಾಮಜ್ಯೋತಿ ವಿದ್ಯಾಸಂಸ್ಥೆ ಪ್ರೌಢಶಾಲೆಯ ವಿಭಾಗದಿಂದ ಆಯೋಜಿಸಿದ್ದ 2023--24ನೇ ಸಾಲಿನ ವಾರ್ಷಿಕೋತ್ಸವ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಗ್ರಾಮಜ್ಯೋತಿ ವಿದ್ಯಾ ಸಂಸ್ಥೆ ಸ್ಥಳೀಯ ಮತ್ತು ಸುತ್ತಮುತ್ತಲಿನ ಗ್ರಾಮದ ಹಲವಾರು ವಿದ್ಯಾರ್ಥಿಗಳಿಗೆ ಉತ್ತಮ ಗುಣವರ್ಧನ ಶಿಕ್ಷಣ ಒದಗಿಸುತ್ತಿದೆ. ವಿಧ್ಯಾಸಂಸ್ಥೆ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯವುಳ್ಳ ಕೊಠಡಿಗಳು ಮತ್ತು ಅನುಭವಿ ಶಿಕ್ಷಕರನ್ನು ನೇಮಿಸಿ ಜಿಲ್ಲಾ ಮಟ್ಟದ ಎರಡನೇ ಅತ್ಯುತ್ತಮ ಅನುದಾನಿತ ಪ್ರೌಢಶಾಲೆಯೆಂಬ ಹೆಸರು ಗಳಿಸಿಕೊಂಡಿದೆ. ಇದನ್ನು ಶಾಲೆ ಮಕ್ಕಳು ಸದುಪಯೋಗ ಪಡಿಸಿಕೊಂಡು ಹೆಚ್ಚು ವ್ಯಾಸಂಗದ ಕಡೆ ಗಮನ ಹರಿಸಬೇಕು ಎಂದು ಹೇಳಿದರು.

ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಶಾಲೆಯ ಆವರಣದಲ್ಲಿ ಆನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಸಂಸ್ಥೆಯ ಮನವಿಯಂತೆ ಶಾಸಕರ ಮತ್ತು ಇತರ ಕಡೆಯಿಂದಲೂ ಹೆಚ್ಚು ಅನುದಾನ ಕಲ್ಪಿಸುತ್ತೇನೆ ಎಂದು ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ರಾಜನಾಯಕ ಮಾನವ ಕುಲಕ್ಕೆ ಸಸ್ಯಗಳಿಂದ ಪ್ರಯೋಜನ ಮತ್ತು ಮಹತ್ವವದ ಬಗ್ಗೆ ಪ್ರವಚನ ನೀಡಿದರು.

ಕುವೆಂಪು ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಿ ವಿಭಾಗದ ಪ್ರಾಧ್ಯಾಪಕರಾದ ಡಾ. ಎನ್. ಬಿ. ತಿಪ್ಪೇಸ್ವಾಮಿಯವರು ತಮ್ಮಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಮೂಲಕ ಮಂಗನ ಕಾಯಿಲೆ, ಎಭೋಲಾ ಮತ್ತು ಕೋವಿಡ್ ಹತೋಟಿ ಮತ್ತು ತಡೆಗಟ್ಟಲು ಸಂಶೋಧನೆಗಳು ಪ್ರಗತಿಯಲ್ಲಿವೆ. ಇದರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಸಂಜೀವ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಖಚಾಂಚಿ ಪ್ರಕಾಶಾನಂದ, ಗೌರವ ಕಾರ್ಯದರ್ಶಿ ಬ್ರಹ್ಮರಾಜ, ಮಾಜಿ ಕಾರ್ಯದರ್ಶಿ ಎಲ್.ಟಿ. ಹೇಮಣ್ಣ, ಮುಖ್ಯ ಶಿಕ್ಷಕ ಸೋಮಶೇಖರ್ ಮತ್ತು ಸಹ ಶಿಕ್ಷಕ ಅನಿಲ್ ಕುಮಾರ್ ಇದ್ದರು.25ಕೆಟಿಆರ್.ಕೆ.2ಃ

ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ಗ್ರಾಮಜ್ಯೋತಿ ವಿದ್ಯಾ ಸಂಸ್ಥೆ ಪ್ರೌಢಶಾಲೆ ವಿಭಾಗದಿಂದ ಏರ್ಪಾಡಾಗಿದ್ದ ವಾರ್ಷಿಕೋತ್ಸವ ಸಮಾರಂಭದ ಉದ್ಗಾಟನೆಯನ್ನು

ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರು ನೆರವೇರಿಸಿದರು. ಗ್ರಾಮಜ್ಯೋತಿ ವಿದ್ಯಾ ಸಂಸ್ಥೆ ಅಧ್ಯಕ್ಷರು ಸಂಜೀವ್ ಕುಮಾರ್, ಗೌರವ ಕಾರ್ಯದರ್ಶಿ ಬ್ರಹ್ಮರಾಜ, ಮಾಜಿ ಕಾರ್ಯದರ್ಶಿ ಎಲ್.ಟಿ.ಹೇಮಣ್ಣ

ಮತ್ತಿತರರು ಇದ್ದಾರೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ