ಭೂಪಾಲ್‌ಗೆ 16 ಸ್ಪರ್ಧಿಗಳು ಪಯಣ

KannadaprabhaNewsNetwork |  
Published : Dec 26, 2023, 01:31 AM IST
ಭೂಪಾಲ್ ಗೆ ಪಯಣ | Kannada Prabha

ಸಾರಾಂಶ

ಮಧ್ಯಪ್ರದೇಶದ ಭೂಪಾಲ್‌ನ ತ್ಯಾಂತ ಟೋಪೆ ಸ್ಟೇಡಿಯಂನಲ್ಲಿ ಡಿ.27 ರಿಂದ 1-1-2024ರವರೆಗೆ ನಡೆಯುವ (ಎಸ್.ಜಿ.ಎಫ್.ಐ) ಸ್ಕೂಲ್ ಗೇಮ್ಸ್ ಫೆಡರೇಷನ್ ಅಫ್ ಇಂಡಿಯಾ ವತಿಯಿಂದ ನಡೆಯವ 67ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ಚಾಂಪಿಯನ್ ಶಿಫ್ ಶೂಟಿಂಗ್ ವಿಭಾಗದಲ್ಲಿ ಭಾಗವಹಿಸಲು ತುಮಕೂರಿನ ನಿವೇಕಾನಂದ ಶೂಟಿಂಗ್ ಅಕಾಡೆಮಿಯ 16 ಸ್ಪರ್ಧಿಗಳು ಭೂಪಾಲ್ ಪ್ರಯಾಣ ಬೆಳೆಸಿದರು.

67ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ಚಾಂಪಿಯನ್ ಶಿಫ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗಿ

ಕನ್ನಡಪ್ರಭ ವಾರ್ತೆ ತುಮಕೂರು

ಮಧ್ಯಪ್ರದೇಶದ ಭೂಪಾಲ್‌ನ ತ್ಯಾಂತ ಟೋಪೆ ಸ್ಟೇಡಿಯಂನಲ್ಲಿ ಡಿ.27 ರಿಂದ 1-1-2024ರವರೆಗೆ ನಡೆಯುವ (ಎಸ್.ಜಿ.ಎಫ್.ಐ) ಸ್ಕೂಲ್ ಗೇಮ್ಸ್ ಫೆಡರೇಷನ್ ಅಫ್ ಇಂಡಿಯಾ ವತಿಯಿಂದ ನಡೆಯವ 67ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ಚಾಂಪಿಯನ್ ಶಿಫ್ ಶೂಟಿಂಗ್ ವಿಭಾಗದಲ್ಲಿ ಭಾಗವಹಿಸಲು ತುಮಕೂರಿನ ನಿವೇಕಾನಂದ ಶೂಟಿಂಗ್ ಅಕಾಡೆಮಿಯ 16 ಸ್ಪರ್ಧಿಗಳು ಭೂಪಾಲ್ ಪ್ರಯಾಣ ಬೆಳೆಸಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್, ನೇತಾಜಿ ಯುವಕ ಸಂಘದ ನೇತಾಜಿ ಶ್ರೀಧರ್,ವಿವೇಕಾನಂದ ಶೂಟಿಂಗ್ ಅಕಾಡೆಮಿಯ ಅನಿಲ್, ಕ್ರೀಡಾ ತರಬೇತುದಾರರ ಗುರುಪ್ರಸಾದ್ ಹಾಗೂ ಮಕ್ಕಳ ಪೋಷಕರು ಮಕ್ಕಳಿಗೆ ಶುಭ ಹಾರೈಸಿ ಬೀಳ್ಕೊಟ್ಟರು.

ಈ ವೇಳೆ ಮಾತನಾಡಿದ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್, ಇತ್ತೀಚಿನ ದಿನಗಳಲ್ಲಿ ತುಮಕೂರಿನ ವಿವೇಕಾನಂದ ಶೂಟಿಂಗ್ ಅಕಾಡೆಮಿ, ಶೂಟಿಂಗ್ ಕ್ರೀಡೆಯಲ್ಲಿ ಒಂದರ ಮೇಲೊಂದು ಪದಕ ಗೆದ್ದು ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತರುತ್ತಿದೆ. ಡಿ.27 ರಿಂದ ಜನವರಿ 1 ರವರೆಗೆ ನಡೆಯುವ ಸ್ಕೂಲ್ ಗೇಮ್ ನಲ್ಲಿ ಜಿಲ್ಲೆಯ 16 ಕ್ರೀಡಾಪಟುಗಳು ಭಾಗವಹಿಸುತಿದ್ದು, ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಪದಕಗಳನ್ನು ಗೆಲ್ಲುವ ಮೂಲಕ ಜಿಲ್ಲೆಯ, ರಾಜ್ಯದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿ ಕಳುಹಿಸಿದ್ದೇವೆ. ಮಕ್ಕಳು ಕಠಿಣ ಅಭ್ಯಾಸದಲ್ಲಿ ತೊಡಗಿದ್ದು, ಒಂದಿಲೊಂದು ಪದಕ ತರುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ವಿವೇಕಾನಂದ ಶೂಟಿಂಗ್ ಅಕಾಡೆಮಿಯ ಅನಿಲ್ ಮಾತನಾಡಿ, ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಟಿ.ಟಿ. ಸ್ಟೇಡಿಯಂನಲ್ಲಿ ನಡೆಯುವ ಎಸ್.ಜಿ.ಎಫ್.ಐ ಕ್ರೀಡಾಕೂಟದ ಹೈಸ್ಕೂಲ್ ಮತ್ತು ಪಿಯುಸಿ ಕಲಿಯುತ್ತಿರುವ 14, 17 ಮತ್ತು 19 ವರ್ಷ ದೊಳಗಿನ ಮಕ್ಕಳ ವಿಭಾಗದಲ್ಲಿ ತುಮಕೂರಿನ 16 ಶೂಟಿಂಗ್ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ವಿವೇಕಾನಂದ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಗುರುಕುಲ ಶಾಲೆಯ ನಕುಲ್, ಪುನಿತ, ಮಹಾಲಕ್ಷ್ಮಿ, ಸೆಂಟ್ ಮೇರಿಸ್ ಶಾಲೆಯ ಸಾನಿಕ್ ಸುಲ್ತಾನ್, ಅನನ್ಯ, ಸರ್ವೋದಯ ಪಿಯು ಕಾಲೇಜಿನ ಕಲ್ಪಿತ್, ಭೂವನ್, ತ್ರಿಷಾ, ವಿಜಿತ, ನಿತಿನ್, ಮಾರುತಿ ಇಂಟರ್ ನ್ಯಾಷನಲ್ ಶಾಲೆಯ ತನ್ಮಯ, ಸಾನಿಯ ತಾಜ್ ಹಾಗೂ ಚಿನ್ಮಯ ಇಂದು 76ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ಚಾಂಪಿಯನ್ ಶಿಫ್ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತಿದ್ದಾರೆ. ಅದೇ ರೀತಿ ದ್ಯಾವಪ್ಪನವರ-ವಳಸಂಗ ಎಜುಕೇಷನ್ ಅಂಡ್ ಅಕಾಡೆಮಿಕ್ ಟ್ರಸ್ಟ್‌ನ ವತಿಯಿಂದ ನಡೆಯುತ್ತಿರುವ ಚೇತನ ಪಬ್ಲಿಕ್ ಶಾಲೆಯ ಮಕ್ಕಳಾದ ಪೃಥ್ವಿರಾಜ್ ಬಾಲೆ ಹೊಸೂರು, ಕೀರ್ತಿ ಬಾಲೆ ಹೊಸೂರು ಹಾಗೂ ಸುಮಾ ಸಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತಿದ್ದಾರೆ. ಮಕ್ಕಳು ಹಲವು ತಿಂಗಳಿನಿಂದ ಕಠಿಣ ಅಭ್ಯಾಸದಲ್ಲಿ ತೊಡಗಿದ್ದು, ಪದಕ ಗೆಲ್ಲತ್ತಾರೆ ಎಂಬ ವಿಶ್ವಾಸವಿದೆ. ಅವರಿಗೆ ಶುಭ ಕೋರಿ ಇಂದು ಬೀಳ್ಕೊಡಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ನೀರು ದರ ಶೇ.3 ಹೆಚ್ಚಳ
ಇಂದು ವರ್ಣರಂಜಿತ ಬೆಂಗಳೂರು ಕರಗ