ಅಟಲ್‌ ಫೌಂಡೇಶನ್‌ನಿ ದ ಖೇಲ್‌ ಭಿ ಜೀತೊ ದೀಲ್‌ ಭಿ ಜೀತೊ

KannadaprabhaNewsNetwork |  
Published : Dec 24, 2023, 01:45 AM IST
ಚಿತ್ರ 23ಬಿಡಿಆರ್‌9ಗುರುನಾಥ ಕೊಳ್ಳುರ ಅವರ ನೇತೃತ್ವದ ಅಟಲ್‌ ಫೌಂಡೇಶನ್‌, ಬೀದರ್‌ ಕ್ರಿಕೆಟ್‌ ಅಸೋಸಿಯೇಷನ್‌ ಸಹಯೋಗದೊಂದಿಗೆ ಕ್ರಿಕೆಟ್‌ ಟೂರ್ನಿ ಬ್ಯಾನರ್‌ | Kannada Prabha

ಸಾರಾಂಶ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಫೌಂಡೇಷನ್‌ವತಿಯಿಂದ ದಿಲ್‌ ಭೀ ಜಿತೊ ಖೇಲ್‌ ಭಿ ಜಿತೊ ಕ್ರೀಡಾ ಚಟುವಟಿಕೆ

ಬೀದರ್‌: ಇದೇ ಡಿ.25ರಿಂದ 30ರವರೆಗೆ ಬೀದರ್‌ ಲೋಕಸಭಾ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಖೇಲ್‌ ಭಿ ಜಿತೋ-ದಿಲ್ ಭಿ ಜಿತೋ ಎಂಬ ಘೋಷವಾಕ್ಯದಡಿಯಲ್ಲಿ ''''''''ಮೋದಿ ಟ್ರೋಫಿ'''''''' ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಲಾಗುತ್ತಿದ್ದು 25ರಂದು ಬೆಳಗ್ಗೆ ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಪಂದ್ಯಾವಳಿಗೆ ಚಾಲನೆ ಸಿಗಲಿದೆ ಎಂದು ಅಟಲ್‌ ಫೌಂಡೇಶನ್‌ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಸಾಮಾಜಿಕ ಕ್ಷೇತ್ರದಲ್ಲಿ ಸೇವೆಗೈಯಲು ಇತ್ತೀಚಿಗೆ ಅಸ್ತಿತ್ವಕ್ಕೆ ಬಂದ ಗುರುನಾಥ ಕೊಳ್ಳುರ ಅವರ ನೇತೃತ್ವದ ಅಟಲ್‌ ಫೌಂಡೇಶನ್‌, ಬೀದರ್‌ ಕ್ರಿಕೆಟ್‌ ಅಸೋಸಿಯೇಷನ್‌ ಸಹಯೋಗದೊಂದಿಗೆ ಕ್ರಿಕೆಟ್‌ ಟೂರ್ನಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಹಾಗೂ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಲು ಅಟಲ್‌ ಫೌಂಡೇಶನ್‌ವತಿಯಿಂದ ವಾಜಪೇಯಿ ಅವರ ಜನ್ಮ ದಿನದ ಪ್ರಯುಕ್ತ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಲಾಗುತ್ತಿದೆ, ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ. ಫೌಂಡೇಶನ್‌ವತಿಯಿಂದ ಮುಂಬರುವ ದಿನಗಳಲ್ಲಿ ಫೌಂಡೇಶನ್‌ ಅಧ್ಯಕ್ಷರಾದ ಗುರುನಾಥ ಕೊಳ್ಳುರ ಅವರ ನೇತೃತ್ವದಲ್ಲಿ ಇತರೆ ಕ್ರೀಡೆಗಳ ಪಂದ್ಯಾವಳಿ ಕೂಡ ಆಯೋಜಿಸಲಾಗುತ್ತದೆ ಎಂದು ವಾಲಿ ಅವರು ತಿಳಿಸಿದ್ದಾರೆ.

ಮೋದಿ ಟ್ರೋಫಿ- ಕ್ರಿಕೆಟ್‌ ಪಂದ್ಯಾವಳಿಗಳ ವಿವರ:

ಬೀದರ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಔರಾದ್‌ನಲ್ಲಿ ತಹಸೀಲ್‌ ಕಚೇರಿಯ ಎದುರುಗಡೆ ಮೈದಾನದಲ್ಲಿ ಡಿ.25, 26, ಭಾಲ್ಕಿ ತಾಲೂಕಿನ ಧನ್ನೂರ ಸೇವಾನಗರ ತಾಂಡಾದ ಮೈದಾನದಲ್ಲಿ 26, 27, ಬಸವಕಲ್ಯಾಣ ತಾಲೂಕಿನ ನಿಮರ್ಗಾ ಮೈದಾನದಲ್ಲಿ 26, 27, ಹುಮನಾಬಾದ್‌ ತಾಲೂಕಿನ ಈದ್ಗಾ ಮೈದಾನದಲ್ಲಿ 26, 27, ಚಿಂಚೋಳಿ ತಾಲೂಕಿನ ಹೊರಾಂಗಣ ಕ್ರೀಡಾಂಗಣದಲ್ಲಿ 26, 27, ಆಳಂದ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಎದುರುಗಡೆಯ ಮೈದಾನದಲ್ಲಿ 26, 27, ಬೀದರ್‌ ದಕ್ಷಿಣದ ಚಿಂತಲಗೇರಾ ಗ್ರಾಮದ ಮೈದಾನದಲ್ಲಿ 26, 27 ಹಾಗೂ ಬೀದರ್‌ ನಗರದ ನೆಹರು ಕ್ರೀಡಾಂಗಣದಲ್ಲಿ 28, 29 ಮತ್ತು 30 ಕ್ರಿಕೆಟ್ ಪಂದ್ಯಾವಳಿ ನಡೆಯಲಿವೆ.

ಜ.6ರಿಂದ ಹೊನಲು ಬೆಳಕಿನ ಪಂದ್ಯಾವಳಿ:

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ವಿಜೇತರಾದ ಸೆಮಿಫೈನಲ್‌ ಆಟ ಮತ್ತು ಫೈನಲ್‌ ಆಟವನ್ನು ಜನವರಿ 6,7 ಮತ್ತು 8ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ಟೂರ್ನಿ ನಡೆಯಲಿದೆ, ಹೊನಲು ಬೆಳಕಿನ ಪಂದ್ಯಾವಳಿ ನಡೆಯುತ್ತಿರುವುದು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಎಂಬುದು ವಿಶೇಷ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ